ಚಿಮ್ಮಡ: ರೈತರ ಹಬ್ಬವಾದ ಕಾರ ಹುಣ್ಣಿಮೆ ನಿಮಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಕೆಂಪು ಎತ್ತು ಕರಿ ಹರಿಯುವ ಮೂಲಕ ವಿಜಯ ಸಾಧಿಸಿತು.
ಶನಿವಾರ ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಕೆಂಪು ಎತ್ತು ಹಾಗೂ ಬಿಳಿ ಎತ್ತುಗಳನ್ನು ಸ್ಪರ್ದೆಗೆ ಅಣಿಗೊಳಿಸಲಾಗಿತ್ತು. ಗ್ರಾಮದ ಪ್ರಮುಖರಿಂದ ತೆಂಗಿನಕಾಯಿ ಒಡೆಯುವ ಮೂಲಕ ಸ್ಪರ್ದೆಗೆ ಚಾಲನೆ ನೀಡಲಾಯಿತು.
ಮೊದಲು ಬಿಳಿ ಎತ್ತು ಪ್ರಥಮ ಸ್ಥಾನದಲ್ಲಿತ್ತಾದರೂ ಕೆಂಪು ಎತ್ತು ಅದನ್ನು ಹಿಂದಿಕ್ಕಿ ಮುನ್ನುಗ್ಗುವ ಮೂಲಕ ಕರಿ ಹರಿಯಿತು. ಕೆಂಪು ಎತ್ತು ಕರಿ ಹರಿದರೆ ಮುಂಗಾರು ಮಳೆ ಉತ್ತಮವಾಗಿ ಸುರಿದು ಬೆಳೆ ಫಲವತ್ತಾಗಿ ಬೆಳೆಯುವುದೆಂಬ ಪ್ರತೀತಿ ಇದ್ದು ಕರಿ ಹರಿಯುತ್ತಲೇ ಯುವಕರು, ರೈತರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ.ಬಗನಾಳ, ಅಣ್ಣಪ್ಪಗೌಡ ಪಾಟೀಲ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪುಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ದುಂಡಪ್ಪಾ ಪಾಟೀಲ, ಅಶೋಕ ಧಡೂತಿ, ಗುರಪ್ಪಾ ಬಳಗಾರ, ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಪಿಕೆಪಿಎಸ್ ಬ್ಯಾಂಕ್ ನಿರ್ದೆಶಕರು ಸೇರಿದಂತೆ ಹಲವಾರು ಪ್ರಮುಖರೊಂದಿಗೆ ಸಾವಿರಾರು ಜನ ರೈತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

