ವಿಜಯಪುರ: ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ವಿಭಾಗೀಯ ಮಟ್ಟದಲ್ಲಿ ಆಯೋಜಿಸಿರುವ ಕಬ್ ಮಾಸ್ಟರ್, ಪ್ಲಾಕ್ ಲೀಡರ್, ಸ್ಕೌಟ್ಸ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ರವರುಗಳಿಗೆ ಮುಂದುವರೆದ ತರಬೇತಿ ಶಿಬಿರವನ್ನು ಜೂ.೨೪ ರಿಂದ ೩೦ ರ ವರೆಗೆ ವಾಸಂತಬಾಯಿ ಜಿಗಜಿನಗಿ ತರಬೇತಿ ಕೇಂದ್ರ ಭುರಣಾಪೂರದಲ್ಲಿ ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಸಂಸ್ಥೆಯ ಸಹಜಾನಂದ ದಂದರಗಿ, ಎಲ್ಲಾ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ತರಬೇತಿ ನೀಡಿ ಅವರಿಗೆ ರಾಜ್ಯ ಪುರಸ್ಕಾರ, ರಾಷ್ಟ್ರ ಪುರಸ್ಕಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಸಬರದ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಏಕೈಕ ತರಬೇತಿ ಕೇಂದ್ರ ಇದ್ದಾಗಿದ್ದು, ಇಲ್ಲಿ ಇನ್ನೂ ಸಾಕಷ್ಟು ಅಭಿವೃದ್ದಿ ಆಗಬೇಕಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸಹಾಯ ಸಹಕಾರ ಮಾಡಿದ್ದರೆ ಇನ್ನೂ ಹೆಚ್ಚಿನ ತರಬೇತಿಯ ಶಿಬಿರಗಳನ್ನು ಮಾಡಬಹುದೆಂದರು.
ಜಿಲ್ಲಾ ಆಯಕ್ತ ಸಿದ್ದಣ ಸಕ್ರಿ ಮಾತನಾಡಿ, ತರಬೇತಿ ಪಡೆದ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ದಳಗಳನ್ನು ಪ್ರಾರಂಬಿಸಿದಾಗ ಮಾತ್ರ ನೀವು ತರಬೇತಿ ಪಡೆದುದಕ್ಕೆ ಸಾರ್ತಕವಾಗುವುದು ಎಂದು ಕಿವಿಮಾತು ಹೇಳಿದರು.
ರಾಜ್ಯದ ತರಬೇತಿ ಆಯಕ್ತರಾದ ಶ್ರೀಮತಿ ಕಿ. ವಿ. ಶಾಮಲಾ ಪ್ರಸ್ತಾವಿಕವಾಗಿ ಮಾತನಾಡಿದರು.
ವಿದ್ಯಾವತಿ ಅಂಕಲಗಿ, ತರಬೇತಿ ನಾಯಕರಾದ ಜಗದೀಶ್ ಬೋಳಸುರ, ಲಕ್ಷ್ಮಿ ಬಹದ್ದೂರ್, ಚೇತನಾ ಪಾಟೀಲ, ಶ್ರೀಶೈಲ ಬೊಮ್ಮನಹಳ್ಳಿ, ಬಜಂತ್ರಿ, ಪರಸುರಾಮ ಕುಂಬಾರ, ರಾಜಶೇಖರ ಖೇಡಗಿ ಹಾಗೂ ಸಿಬಂದಿ ವರ್ಗ, ವಿಜಯಪುರ, ಚಿಕ್ಕೊಡಿ ಬಾಗಲಕೋಟ, ಬೆಳಗಾವಿಯಿಂದ ಶಿಕ್ಷಕರು ಆಗಮಿಸಿದ್ದರು.
Subscribe to Updates
Get the latest creative news from FooBar about art, design and business.
ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯಿಂದ ವಿಭಾಗೀಯ ಮಟ್ಟದ ತರಬೇತಿ ಶಿಬಿರ
Related Posts
Add A Comment

