ವಿಜಯಪುರ: ನಗರದ ಸಮೀಪದ ಜುಮನಾಳ ಗ್ರಾಮದ ಪ್ರಗತಿಪರ ರೈತರಾದ ಮಹಾಂತೇಶ ಮಮದಾಪುರ ಅವರ ತೋಟದಲ್ಲಿ ಇತ್ತಿಚಿಗೆ ಸುರಿದ ಮಳೆಯಿಂದಾಗಿ ಚಿಕ್ಕ ಗಲಗಲಿ ಪುರ್ನವಸತಿಗಾಗಿ ನಿರ್ಮಿಸುತ್ತಿರುವ ಖಾಲಿ ಪ್ಲಾಟಗಳ ಮೂಲಕ ಎಲ್ಲಾ ನೀರು ವಿಳ್ಳೆದೆಲೆ ಹಾಗೂ ಬಾಳೆ ತೋಟದಲ್ಲಿ ಸಂಪೂರ್ಣ ನೀರಲ್ಲಿ ನಿಂತು ನಷ್ಟಗೊಂಡಿರುವ ರೈತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಪರ್ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕ ಗಲಗಲಿ ಪುನರ್ ವಸತಿ ಕಲ್ಪಿಸುವುದಕ್ಕಾಗಿ ಮಾಡಿರುವ ಖಾಲಿ ಜಾಗ ಮಾಡುವಾಗ ಅಧಿಕಾರಿಗಳು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಲ್ಲಿ ಬಿದ್ದಿರುವ ಮಳೆ ನೀರು ಸಂಪೂರ್ಣವಾಗಿ ಮಹಾಂತೇಶ ಮಮದಾಪುರ ಅವರ ತೋಟದಲ್ಲಿ ಬಂದು ನಿಲ್ಲುವುದರಿಂದ ಈ ರೀತಿಯ ನಷ್ಟ ಅನುಭವಿಸುವಂತಾಗಿದೆ, ವಿಳ್ಳೆದೆಲೆ ಹಾಗೂ ಬಾಳೆಯಿಂದಾಗಿ ಆಗಿರುವ ನಷ್ಟದಿಂದ ವರ್ಷದ ಆದಾಯವನ್ನೆ ನಂಬಿರುವ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ, ಕೂಡಲೇ ಸಂಬಂಧಿಸಿದ ತೀಟಗಾರಿಕೆ ಇಲಾಖೆ ಹಾಗೂ ಪುರ್ನವಸತಿ ಕಲ್ಪಿಸಿರುವ ಅಧಿಕಾರಿಗಳಿಂದ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿದರು.
ಇದು ಪುನರ್ ವಸತಿ ಕಲ್ಪಿಸಿರುವ ಅಧಿಕಾರಿಗಳು ಮುಂಚೆ ಅಲ್ಲಿ ಬೇರೆ ಬೇರೆ ರೈತರ ಹೊಲಗಳಿದ್ದವೂ ಅವುಗಳನ್ನು ಈಗ ಅವುಗಳನ್ನು ನೆಲಸಮ ಮಾಡಿರುವ ಸಲುವಾಗಿ ಈಗ ಅಲ್ಲಿಯ ಎಲ್ಲಾ ನಿರು ಹರಿದು ಇವರ ತೋಟದಲ್ಲಿ ಬಂದು ಸಂಗ್ರಹಗೊಳ್ಳುತ್ತಿವೆ, ಆದ್ದರಿಂದ ಇದನ್ನು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಕ್ಷಣೆ ಮಾಡಿ ನಷ್ಟವನ್ನು ಭರಿಸಿ, ಸಂತ್ರಸ್ತ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದರು.
ಈ ವೇಳೆ ನಷ್ಟಗೊಂಡ ರೈತರಾದ ಮಹಾಂತೇಶ ಮಮದಾಪುರ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ ಬ್ಯಾಲ್ಯಾಳ, ನಜೀರ ನಂದರಗಿ, ತಾ.ಉಪಾಧ್ಯಕ್ಷರಾದ ಪ್ರಕಾಶ ತೇಲಿ, ತೀಕೋಟಾ ತಾಲೂಕಾ ಉಪಾಧ್ಯಕ್ಷರಾದ ಶಾನೂರ ನಂದರಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

