Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇವರು ನನಗೆ ದೃಷ್ಠಿ ಕೊಟ್ಟಿದ್ದರೆ ಬಹುಶಃ ಇಂತಹ ಸಾಧನೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ನಮ್ಮಲ್ಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಸಾಧನೆ ಮಾಡುವ ಮನಸಿದ್ದರೆ ಸರ್ವ ಸಿದ್ಧಿಯಾಗುತ್ತದೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು; ಗಣಿತ ಎನ್ನುವುದು ಹಲವರಿಗೆ ಕಬ್ಬಿಣದ ಕಡಲೆಯಾದರೆ ಕೆಲವರಿಗೆ ಅದು ಎಲ್ಲದಕ್ಕಿಂತಲೂ ಸಾಮಾನ್ಯವಾದ ವಿಷಯವಾಗಿ ಕಾಣುತ್ತದೆ. ಅದಕ್ಕೆ ಕಾರಣ ಆ ವಿಷಯದ ಮೇಲಿರುವ ಅಕ್ಕರೆ. ಯಾವುದನ್ನು ನಾವು ಇಷ್ಟಪಟ್ಟು ಮಾಡುತ್ತೇವೆಯೋ ಅದು ಎಂದಿಗೂ ನಮಗೆ ಬೇಸರ ಮೂಡಿಸುವುದಿಲ್ಲ. ಬದುಕಿನಲ್ಲಿ ಯಾವುದನ್ನು ಕೊರತೆ ಎಂದು ತಿಳಿದುಕೊಳ್ಳುತ್ತೇವೆಯೋ ಅದು ಎಂದಿಗೂ ನಮಗೆ ನೆಮ್ಮದಿ ನೀಡುವುದಿಲ್ಲ. ಅದರ ಬದಲಿಗೆ ಕೊರತೆಯನ್ನೇ ಬದುಕಿನ ಒರತೆಯನ್ನಾಗಿ ಮಾಡಿಕೊಂಡು ಹೆಜ್ಜೆ ಹಾಕಿದ್ದೇ ಆದಲ್ಲಿ ಬಾಳು ಹಸಿರಾಗುತ್ತದೆ. ನಾವಿಲ್ಲಿ ಬಂದಿದ್ದು ಸಾಧನೆ ಮಾಡುವುದಕ್ಕಾಗಿಯೇ ಹೊರತು ಸಂಕಟ ಪಟ್ಟುಕೊಳ್ಳುವುದಕ್ಕಲ್ಲ. ಸವಾಲು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಮೊಹರಂ ಉತ್ತರ ಕರ್ನಾಟಕ ಭಾಗದಲ್ಲಿ ಭಾವೈಕ್ಯತೆಯ ಸೇತುವೆಯಾಗಿದೆ. ಮುಸ್ಲಿಮರ ಹೊಸ ವರ್ಷದ ಹಬ್ಬ ಮೊಹರಂ. ಮೊಹರಂ ಇಲ್ಲಿ ಕೇವಲ ಮುಸ್ಲಿಂ ಬಾಂಧವರ ಹಬ್ಬವಾಗಿರದೇ ಹಿಂದೂ ಮುಸಲ್ಮಾನರು ಒಟ್ಟಾಗಿ ಮೊಹರಂ ಆಚರಿಸಿ ಭಾವೈಕ್ಯತೆಯ ಹಬ್ಬವನ್ನಾಗಿ ಮಾಡಿದ್ದಾರೆ.ಮೊಹರಂದ ಕೊನೆಯ ದಿನವಾದ ಶುಕ್ರವಾರದಂದು ನಸುಕಿನ ಜಾವ ೫ ಗಂಟೆಗೆ ರೇವತಗಾಂವ ಗ್ರಾಮದಲ್ಲಿ ಹಸೇನ್ ಹಾಗೂ ಹುಸೇನ್ ದೇವರು ಬೇಬಿ ಫಾತೀಮಾ ದೇವರ ಡೋಲಿಯೊಂದಿಗೆ ಸಂಪ್ರದಾಯದ ಪ್ರಕಾರ ಗ್ರಾಮದ ಅಣ್ಣಾರಾಯ ಸಿದ್ಧನಗೌಡ ಪಾಟೀಲರ ಮನೆಗೆ ಭೇಟಿ ನೀಡಿ ಆದರಾತಿಥ್ಯವನ್ನು ಸ್ವೀಕರಿಸಿದ ನಂತರ ಲಾಲಸಾಬ ದೇವರ ಡೋಲಿಯನ್ನು ಮಸೀದಿಯಲ್ಲಿ ಕುಳ್ಳರಿಸಿ ನಂತರ ಗ್ರಾಮದ ಎಲ್ಲ ಭಕ್ತರ ಮನೆ ಮನೆಗಳಿಗೆ ಹಸೇನ್-ಹುಸೇನ್ ದೇವರು ಭೇಟಿ ನೀಡಿ ಪೂಜೆಯನ್ನು ಸ್ವೀಕರಿಸಿ ಮಸೀದಿಗೆ ಮರುಳಿದರು.ನಂತರ ಸಾಯಂಕಾಲ ೪ ಗಂಟೆಗೆ ಭಕ್ತರಿಂದ ಚೌಂಕಿ ನೇವೈದ್ಯ ಅರ್ಪಿಸಲಾಯಿತು. ಸಾಯಂಕಾಲ ೪:೩೦ ಗಂಟೆಗೆ ಕರಬಲ್ ರಿವಾಯತ್ ಪದಗಳು ಮತ್ತು ಕರಬಲ್ ಆಟಗಳು, ಕರಡಿ ಕುಣಿತ ಜರುಗಿದವು. ಸಾಯಂಕಾಲ ೫ ಗಂಟೆಗೆ ಹಸನ್ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ನಾಡಪ್ರಭು‌ ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಸಿಲಿಕಾನ್ ಸಿಟಿ, ಉದ್ಯಾನ ನಗರಿಯಾಗಿ, ಕರ್ನಾಟಕದ ರಾಜಧಾನಿ ಜೊತೆಗೆ ತಂತ್ರಜ್ಞಾನ‌ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದು ಇಡೀ ದೇಶವೆ ಬೆಂಗಳೂರು ಕಡೆ ತಿರುಗುವಂತೆ ಭದ್ರ ಬುನಾದಿ ಹಾಕಿ ಕೊಟ್ಟಿರುವುದಕ್ಕೆ ಎಲ್ಲರೂ ಹೆಮ್ಮೆ ಪಡುವಂತಾಗಿದೆ ಎಂದು ಶಾಸಕ‌ ಅನಿಲ್ ಚಿಕ್ಕಮಾದು ತಿಳಿಸಿದರು.ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜನೆ ಮಾಡಿದ ನಾಡಪ್ರಭು ಕೆಂಪೇಗೌಡ ಅವರ 517ನೇ ಜಯಂತಿಯ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಬೆಂಗಳೂರು ನಗರದಲ್ಲಿ ಸುಮಾರು ಒಂದುವರೆ ಕೋಟಿ ಜನಸಂಖ್ಯೆ ಇದೆ. ಹಳ್ಳಿಯಿಂದ ಬೆಂಗಳೂರಿಗೆ ಹೋದವರು ಉದ್ಯೋಗ ಪಡೆದು ಉತ್ತಮ ಜೀವನವನ್ನು ಮಾಡಬಹುದು. ನಮ್ಮ ತಂದೆ ದಿ. ಚಿಕ್ಕಮಾದು ಅವರು ಶಾಸಕರಾಗಲು ಒಕ್ಕಲಿಗ ಸಮುದಾಯ ಪ್ರಮುಖ ಕಾರಣ. ನಾನು ತಾಲೂಕಿನಲ್ಲಿ ಎಂದಿಗೂ ರಾಜಕಾರಣ ಮಾಡುತ್ತಿಲ್ಲ ಬದಲಾಗಿ ಜನಸೇವೆ ಮಾಡುತ್ತಿದ್ದೇನೆ. ಒಕ್ಕಲಿಗ ಸಮುದಾಯದ ನಾಯಕರು ವಿಧಾನಸೌಧ, ಸುವರ್ಣ ಸೌಧವನ್ನು ಕಟ್ಟಿದವರು. ತಾಲೂಕಿನ ಬಹುಮುಖ್ಯ ಬೇಡಿಕೆಯಾದ ಕೆಂಪೇಗೌಡರ…

Read More

ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕಫೋರ್ಸ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಮತಕ್ಷೇತ್ರದ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ತೊಂದರೆ ಉಂಟಾಗಬಾರದು. ಒಂದು ವೇಳೆ ನೀರಿನ ಸಮಸ್ಯೆ ತಲೆದೋರಿದರೆ ಅದಕ್ಕೆ ಸಂಬಂಧಪಟ್ಟ ಪಿಡಿಓಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು,” ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಅವರು ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕಫೋರ್ಸ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಗ್ರಾಮ ಪಂಚಾಯತ್ ಪಿಡಿಓ ಹಾಗೂ ನೋಡೆಲ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೀರಿನ ಮೂಲಗಳು ಬತ್ತಿ ಹೋಗಿದ್ದರೆ, ತಕ್ಷಣವೇ ಗ್ರಾಮೀಣ ಭಾಗದ ಖಾಸಗಿ ಜಮೀನುಗಳನ್ನು ಅಥವಾ ರೈತರ ನೀರಾವರಿ ಮೂಲಗಳನ್ನು ಗುರುತಿಸಬೇಕು. ಗುರುತಿಸಲಾದ ಖಾಸಗಿ ನೀರಿನ ಮೂಲಗಳಿಂದ ಬಾಡಿಗೆ ರೂಪದಲ್ಲಿ ನೀರನ್ನು ಪಡೆದು,…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಲೈನ್‌ಮ್ಯಾನ್‌ ನಿರ್ಲಕ್ಷ್ಯದಿಂದ ರೈತ ಬಲಿಯಾದ ದಾರುಣ ಘಟನೆ ಅಫಜಲಪುರ ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ನಡೆದಿದೆ.ವಿದ್ಯುತ್ ತಂತಿ ತಗುಲಿ ರೈತ ಬಸಪ್ಪ ಮಹಾದೇವಪ್ಪ ಪೂಜಾರಿ ಅವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.ಘಟನೆಗೆ ಹೊಣೆಗಾರರಾದ ಲೈನ್‌ಮ್ಯಾನ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.ಸುಮಾರು 5 ಗಂಟೆಗಳ ಕೆಂತಲು ಹೆಚ್ಚು ಕಾಲ ರಸ್ತೆಗೆತಗೊಳಿಸಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಮಹಾರಾಷ್ಟ್ರದಿಂದ ಗಾಣಗಾಪುರ ತೆರಳುವ ಯಾತ್ರಿಕರಿಗೆ ಹಾಗೂ ಸೊಲ್ಲಾಪುರ ಕಲಬುರಗಿ ವಿಜಯಪುರ ಮುಂತಾದ ನಗರಗಳಿಗೆ ತೆರಳುವ ಎಲ್ಲಾ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ಎಣ್ಣೆ, ತೊಗರಿಬೇಳೆ ವಿತರಿಸಬೇಕು. ಮೊಟ್ಟೆಗಳ ಖರೀದಿ ಮೊತ್ತ ಹೆಚ್ಚಳವಾಗಿದ್ದು, ದರ ಮರುನಿಗದಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಓ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ಶೈಕ್ಷಣಿಕ ವರ್ಷ ಆರಂಭವಾಗಿ ಜೂನ ತಿಂಗಳು ಮುಗಿಯುತ್ತಾ ಬಂದರೂ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ ಪೂರೈಕೆಯಾಗಿಲ್ಲ. ಮುಖ್ಯಗುರುಗಳು ಬೇಳೆ ಹಾಗೂ ಎಣ್ಣೆ ಸಹ ಅಂಗಡಿ ಮೂಲಕ ಖರೀದಿಸುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಜಿ ಎಣ್ಣೆಗೆ ೧೮೦ರೂ. ಕೇಜಿ ಬೇಳೆಗೆ ೧೨೦ರೂ. ರಂತೆ ಮುಖ್ಯಗುರುಗಳು ಖರೀದಿಸುತ್ತಿದ್ದಾರೆ.ಇನ್ನು ಪ್ರಸ್ತುತ ಒಂದು ಮೊಟ್ಟೆಯ ಬೆಲೆ ೮ರೂ ಇದೆ. ಸರ್ಕಾರ ಪ್ರತಿ ಮೊಟ್ಟೆಗೆ ೬ರೂ. ಮಾತ್ರ ಅನುದಾನ ಮಾತ್ರ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ೨ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರು ತಮ್ಮ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪ್ರಜಾಪ್ರಭುತ್ವದ ಬಲವರ್ಧನೆಗೆ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಯಶಸ್ವಿಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಗುರುವಾರ ಜರುಗಿದ ಬಿಎಲ್‌ಎ ನೇಮಕ ಹಾಗೂ ವಿಶೇಷ ತರಬೇತಿ ಕಾರ್ಯದಲ್ಲಿ ಮಹಾಶಕ್ತಿ ಕೇಂದ್ರದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮನೆಮನೆಗೆ ತೆರಳಿ ಎಸ್‌ಐಆರ್ ಕಾರ್ಯಕ್ಕೆ ಸಹಕಾರ ನೀಡಬೇಕು. ಮ್ಯಾಪಿಂಗ್ ಕಾರ್ಯದಲ್ಲಿ ಮತದಾರರಿಗೆ ಸಹಾಯ ಮಾಡಬೇಕು. ಒಂದು ತಿಂಗಳು ಕಾಲ ನಡೆಯುವ ನಿರಂತರ ಪರಿಷ್ಕರಣೆ ಕಾರ್ಯದಲ್ಲಿ ಚುನಾವಣಾ ಆಯೋಗ ನೇಮಿಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ(ಬಿಎಲ್‌ಓ) ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.ಬಿಜೆಪಿ ಘಟಕದ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಮಾತನಾಡಿ, ಅರ್ಹ ಮತದಾರ ಮತದಾನದಿಂದ ವಂಚಿತನಾಗಬಾರದು. ಪ್ರತಿಯೊಬ್ಬರು ಮತದಾರ ಪಟ್ಟಿಯಲ್ಲಿರುವಂತೆ ಕ್ರಮ ವಹಿಸಲು ಕಾರ್ಯ ನಿರ್ವಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಮತದಾರರನ್ನು ಭೇಟಿ ಮಾಡಿ ವಿಶೇಷ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಲಾಯಿತು.ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಸವರಾಜ ಕಲ್ಲೂರ, ಪ್ರಕಾಶ ದೊಡಮನಿ, ಶಂಕರಗೌಡ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣದೊಂದಿಗೆ ವರದಕ್ಷಿಣೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆ ಮೊದಲಾದ ಅನಿಷ್ಟಗಳನ್ನು ದೂರಮಾಡಿ. ಸಾಂತ್ವನ ಸಹಾಯವಾಣಿ ಕೇಂದ್ರವನ್ನು ಉತ್ತಮ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ಕರೆ ನೀಡಿದರು.ಸಿಂದಗಿ ನಗರದ ಚಂಡರಯ್ಯನ ಮಠದ ಬಳಿ ವಿಜಯಪುರದ ಶ್ರೀಧರಸ್ವಾಮಿ ವಿದ್ಯಾವರ್ಧಕ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿಂದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಪರಿವರ್ತನೆ ಹಾಗೂ ಅಭ್ಯುದಯಕ್ಕಾಗಿ ಮಹಿಳಾ ಜಾಗೃತಿಯೊಂದೇ ಮಾರ್ಗವಾಗಿದೆ. ತಮ್ಮ ಸಮಸ್ಯೆಗಳಿಗೆ ಸಿಂದಗಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಸದಾ ಸಿದ್ಧವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಿಬ್ಬಂದಿ ವಿದ್ಯಾ ದೇಸಾಯಿ, ವಾಣಿ ಹಿರೇಮಠ, ರೇಖಾ ಅರ್ಜುಣಗಿ, ವಿಶಾಲಾಕ್ಷಿ ಹುಲಗಬಾಳ, ಮೇಘಾ ಶುಂಠಿ, ಶಾಂತಾಬಾಯಿ ಹಿರೇಮಠ, ಮಲ್ಲಮ್ಮ ನಂದಿಕೋಲ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡ ಸಾಹಿತ್ಯ ಗೆಳೆಯರ ಬಳಗ ವತಿಯಿಂದ ೨೦೨೫–೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.೮೫ ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಇತ್ತೀಚಿನಿ ಫೋಟೋದೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಸಿಂದಗಿಯ ಅಂಬೇಡ್ಕರ್ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ, ಅಥವಾ ಜ್ಯೋತಿ ನಗರದಲ್ಲಿರುವ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್‌ಯನ್ನು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜುಲೈ ೫ ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: ೮೨೭೭೧೮೬೭೫೭ಗೆ ಸಂಪರ್ಕಿಸಬಹುದು ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜಾಲವಾದ ಸಹಿತ ಬೂದಿಹಾಳ ಡೋಣ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನ ವ್ಯತ್ಯಾಸದಿಂದಾಗಿ ಟಿ.ಸಿ ಹಾಗೂ ರೈತರ ಪಂಪಸೆಟ್, ಮೋಟಾರ್‌ಗಳಿಗೆ ಹಾನಿಯಾಗುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಷ್ಟ್ರೀಯ ರೈತಸಂಘದ ಸದಸ್ಯರು ಹೆಸ್ಕಾಂ ಎಇಇ ಸತೀಶ ಸುಲಾಖೆ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಹೆಸ್ಕಾಂ ಕಚೇರಿಗೆ ಗುರುವಾರ ಆಗಮಿಸಿದ ರೈತರು ವಿದ್ಯುತ್ ಅಸಮರ್ಪಕ ಸರಬರಾಜಿನ ಕುರಿತು ಹೆಸ್ಕಾಂ ಸಿಬ್ಬಂದಿಯ ಗಮನ ಸೆಳೆದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ಜಾಲವಾದ ಎಪಿಯ ಮೇಲೆ ಹೆಚ್ಚು ಒತ್ತಡ ಉಂಟಾಗುವುದರ ಕಾರಣ ಎರಡು ಸರದಿಯ ಪ್ರಕಾರ ವಿದ್ಯುತ್ ಪೂರೈಕೆ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಅವರ ವ್ಯಾಪ್ತಿಯ ಟಿಸಿ ಹಾಗೂ ಮೋಟಾರ್, ಪಂಪಸೆಟ್ ಗಳು ಸುರಕ್ಷಿತವಾಗಿರುತ್ತವೆ. ಜೊತೆಗೆ ಅನಗತ್ಯವಾಗಿ ಹೆಸ್ಕಾಂ ಸಿಬ್ಬಂದಿಗೆ ಫೋನ್ ಮಾಡುವುದು ತಪ್ಪಿದಂತಾಗುತ್ತದೆ. ಒಂದು ವೇಳೆ ರೈತರ ಮನವಿಗೆ ಸ್ಪಂದಿಸದೇ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇದ್ದಲ್ಲಿ ರೈತರು ಮುಂದಿನ ಹೋರಾಟಕ್ಕೆ ಇಳಿಯುವುದು…

Read More