ಇಂಡಿಯಲ್ಲಿ ನಡೆದ ಟಾಸ್ಕಪೋರ್ಸ ಸಭೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂಡಿ ನಗರ ಹಾಗೂ ತಾಲೂಕಿನಾದ್ಯಂತ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗೃತೆ ಕ್ರಮವಹಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು ಯಾವದೇ ಶಾಲೆ ಹಾಗೂ ಹಾಸ್ಟೇಲಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಕೊಳ್ಳಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದರು.
ಅವರು ನಗರದ ತಾ,ಪಂ ಸಬಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಗಳ ಬಗ್ಗೆ ನಡೆದ ಟಾಸ್ಕಪೋರ್ಸ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೇಸಿಗೆಯಲ್ಲಿ ನೀರಿನ ಅಭಾವ ಆಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ಮಾಹಿತಿ ಸಲ್ಲಿಸಬೇಕು ಎಂದರು.
ನಗರ ನೀರು ಸರಬರಾಜಿಗೆ ಸಂಬಂದಿಸಿದಂತೆ ಅಗತ್ಯ ಮುಂಜಾಗೃತೆ ಕ್ರಮ ವಹಿಸಬೇಕು. ಗ್ರಾಪಂ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಎಂದು ಎಇಇ ಬಂಡಿಯವರಿಗೆ ಸೂಚನೆ ನೀಡಿದರು.
ಇಒ ಭೀಮಾಶಂಕರ ಕನ್ನೂರರವರು ಮಾತನಾಡಿ ಮಿರಗಿ, ಮಸಳಿ, ಗುಬ್ಬೇವಾಡ, ಕೊಳುರಗಿ, ಝಳಕಿ, ಬಸನಾಳ, ಬಬಲಾದ, ನಿಂಬಾಳ ಕೆ.ಡಿ, ಸಾಲೋಟಗಿ ಹಾಗೂ ತಡವಲಗಾ ಅಡವಿ ವಸ್ತಿಗಳ ಕುರಿತು ಗ್ರಾ.ಪಂ ಗಳಲ್ಲಿ ಚರ್ಚಿಸಬೇಕು. ಯಾವದೇ ಸಮಸ್ಯೆ ಬರದಂತೆ ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ, ಯೋಜನಾಧಿಕಾರಿ ನಂದೀಪ ರಾಠೋಡ, ಹೆಸ್ಕಾಂ ಎಇಇ ಎಸ್.ಆರ್.ಮೆಡೆಗಾರ, ಪೌರಾಯುಕ್ತ ನಗರ ಸಭೆ ಶಿವಾನಂದ ಪೂಜಾರಿ ಕಾರ್ಯಪಾಲಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾ.ಪಂ ಆಡಳಿತ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.

