ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಹರಿಯುವ ಕೃಷ್ಣಾ ಕಾಲುವೆಯ ಡಿಸ್ಟ್ರಿಬ್ಯೂಟರ್ ೨೩ ಮತ್ತು ೨೪ ಕ್ಕೆ ನೀರು ಬಿಡಬೇಕೆಂದು ಆಗ್ರಹಿಸಿ ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕಾ ಅಧ್ಯಕ್ಷ ಎಂ.ಎಚ್.ಪೂಜಾರಿ ಮಾತನಾಡಿ, ಹಿರೇಬೇವನೂರ ಭಾಗದ ಹೊಲಗಳಿಗೆ ನೀರಿನ ಅವಶ್ಯಕತೆ ಇದೆ. ಕಾರಣ ಈ ಕೂಡಲೇ ನೀರು ಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವದೆಂದರು. ಬೆಳೆಗಳಿಗೆ ಸೇರಿದಂತೆ ಜನ ಜಾನುವಾರುಗಳಿಗೂ ನೀರಿನ ತೊಂದರೆ ಯಾಗುತ್ತದೆ ಎಂದರು.
ಸಿದ್ದರಾಮ ಹಂಜಗಿ, ಸುರೇಶ ಪಾಯಿಕರ, ಸಂಜು ಹಿರೇಕುರಬರ, ಧನು ರಾಠೋಡ, ದತ್ತು ಹೆಳವರ, ಮಾಂತು ಬಡಿಗೇರ, ಸುರೇಶ ಹಂಜಗಿ ಮತ್ತಿತರಿದ್ದರು..
ಕಂದಾಯ ಉಪವಿಬಾಗಾಧಿರಿ ಚಿದಾನಂದ ಗುರುಸ್ವಾಮಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.

