ಉದಯರಶ್ಮಿ ದಿನಪತ್ರಿಕೆ
ಇಂಡಿ: ಕ್ಷಯರೋಗ ನಿಯಂತ್ರಿಸಬಹುದು ಮತ್ತು ಗುಣವಾಗಬಹುದಾದ ಕಾಯಿಲೆ. ೬ ರಿಂದ ೯ ತಿಂಗಳು ಔಷದ ತೆಗೆದುಕೊಂದರೆ ಸಂಪೂರ್ಣ ಗುಣವಾಗಬಹುದು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ವಿಶ್ವಕ್ಷಯ ರೋಗ ದಿನಾಚರಣೆ ನಿಮಿತ್ಯ ನಡೆದ ಸಭೆಯಲ್ಲಿ ಮಾತನಾಡಿದರು.
ಕ್ಷಯರೋಗವು ಮೈಕೊಬ್ಯಾಕ್ಟೆರಿಯಂ ಟ್ಯುಬರ ಕ್ಯೂಲೋಸಿಸ ಎಂಬ ಬ್ಯಾಕ್ಟೆರಿಯಾದಿಂದ ಬರುತ್ತದೆ. ಹೆಚ್ಚಾಗಿ ಶ್ವಾಸಕೋಶಕ್ಕೆ ಹಾನಿಮಾಡುವ ಪಲ್ಮನರಿ ಕ್ಷಯರೋಗ ಎಂದು ಕರೆಯಲಾಗುತ್ತಿದೆ. ದೇಹದ ಇತರ ಭಾಗಗಳಿಗೂ ಇದು ಹರಡುತ್ತದೆ ಎಂದರು.
ಡಾ|| ರವಿ ಭತಗುಣಕಿ, ಡಾ|| ಚೇತನ ಹುಬ್ಬಳ್ಳಿ, ಡಾ|| ವಿಕಾಸ ಸಿಂದಗಿ, ಡಾ|| ರವಿ ಅಂಬೇವಾಡಿ ಕ್ಷಯರೋಗದ ಲಕ್ಷಣ ಗುಣ ಪಡಿಸಬಹುದಾದ ಕ್ರಮಗಳ ಕುರಿತು ಮಾತನಾಡಿದರು.
ವೈದ್ಯರಾದ ಅಮೀತ ಕೋಳೆಕರ, ವಿಪುಲ್ ಕೋಳೆಕರ, ಮನೋಜ ಗಿಡಗಂಟಿ, ಮುಜಮೀಲ್ ಪಾನ, ಪ್ರವೀಣ ಗಜಾಕೋಶ, ಚಿದಾನಂದ ಅರಗೆ, ಬಸವರಾಜ ಪಾಟೀಲ, ಸುನಂದಾ ಅಂಬಲಗಿ, ಮರಿಯಪ್ಪ ದೊಡಮನಿ, ಆನಂದ ಚವ್ಹಾಣ, ಪುಟ್ಟು ಮೆಡೆದಾರ ಸೇರಿದಂತೆ ಪೌರಕಾರ್ಮಿಕರು ಸಾರ್ವಜನಿಕರು ಇದ್ದರು.

