Author: editor.udayarashmi@gmail.com

ವಿಜಯಪುರದಲ್ಲಿ ಕಾನಿಪ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ | ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ | ಪ್ರತಿಭಾ ಪುರಸ್ಕಾರ ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಇನ್ನು ೧೫-೨೦ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಮುಖ್ಯಮಂತ್ರಿಗಳ ಪ್ರಧಾನ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಭರವಸೆ ನೀಡಿದರು.ರವಿವಾರ ಸಂಜೆ ವಿಜಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಮುಂಭಾಗದಲ್ಲಿರುವ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗೃಹ ಮಂಡಳಿಯಲ್ಲಿ ಶೇ.೫ ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿರಿಸಲಾಗುತ್ತದೆ, ಈ ಸೌಲಭ್ಯವನ್ನು ಈ ಭಾಗದ ಪತ್ರಕರ್ತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ವ್ಯಕ್ತಿ ಕೇಂದ್ರಿತ ಸುದ್ದಿಗಳೇ ಇಂದು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ, ಶ್ರೀಮಂತ ಕುಟುಂಬಗಳ ಮದುವೆಗಳು ಗಂಟೆಗಟ್ಟಲೇ ಬಿತ್ತರವಾಗುತ್ತಿವೆ, ಈ ಎಲ್ಲದರ ಮಧ್ಯೆ…

Read More

ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಸರ್ಕಾರದ ಕಾರ್ಯದರ್ಶಿ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಅಧಿಕಾರಿಗಳು ಇಲಾಖಾ ಸಮನ್ವಯದೊಂದಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ನಿಗದಿತ ಅವಧಿಯಲ್ಲಿ ಅರ್ಹರಿಗೆ ಸೌಲಭ್ಯ ದೊರಕಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುವ ಮೂಲಕ ಕರ್ತವ್ಯದಲ್ಲಿ ನಿಷ್ಠುರತೆ ಮೆರೆಯುವ ಮೂಲಕ ಇತರೆ ಸಿಬ್ಬಂದಿಗಳಿಗೆ ಪ್ರೇರಣೆ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪ್ರತಿ ೨೦ ದಿನಗಳಿಗೊಮ್ಮೆ ಜಿಲ್ಲೆಗೆ ಆಗಮಿಸಿ ನಿರಂತರ ಸಭೆ ನಡೆಸಿ ಸೂಚನೆ ನೀಡುವುದಾಗಿ ತಿಳಿಸಿದ ಅವರು ಆಡಳಿತ ಕಾರ್ಯವೈಖರಿ ಚುರುಕುಗೊಳಿಸುವಂತೆ ಅವರು…

Read More

ವಿಜಯಪುರ: ಕರ್ನಾಟಕ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಅಭ್ಯರ್ಥಿಗಳಿಂದ ೨೦೨೩-೨೪ ಹಾಗೂ ೨೦೨೪-೨೫ ನೇ ಸಾಲಿನಲಿಶಿಷ್ಯ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ೧೨-೦೮-೨೦೫೪ ಕೊನೆಯ ದಿನವಾಗಿದ್ದು, ಶಿಷ್ಯವೇತನದ ಬಗ್ಗೆ ಮಾಹಿತಿ ಹಾಗೂ ಅರ್ಜಿಯನ್ನುsangeeetanrityaacademy.karnataja.gov.in ನಲ್ಲಿ ಪಡೆದುಕೊಳ್ಳಬಹುದು. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ವಿಡಿಯೋ ಚಿತ್ರೀಕರಿಸಿ ಪೆನ್ ಡ್ರೈವ್ ನಲ್ಲಿ ರಿಜಿಸ್ಟರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೆಯ ಮಹಡಿ, ಜೆಸಿ ರಸ್ತೆ ಬೆಂಗಳೂರು -೫೬೦೦೦೨ ಕಾರ್ಯಾಲಯಕ್ಕೆ ಅಂಚೆ ಅಥವಾ ಖುದ್ದಾಗಿ ತಲುಪಿಸಬಹುದು ಎಂದು ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಜಯಪುರ ಮಹಾಯೋಜನೆ ಅನುಸಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮಹಾನಗರ ಪಾಲಿಕೆಯ ವಾರ್ಡ ನಂ: ೨, ೪, ೬ ಮತ್ತು ೩೫, ರಲ್ಲಿ ಬರುವ ಅಥಣಿ ರಸ್ತೆ ಇಟಗಿ ಪೆಟ್ರೋಲ್ ಪಂಪ್‌ದಿಂದ ವಿಜಯಪುರ ಸೊಲಾಪೂರ ರಸ್ತೆಯ ವರೆಗೆ ರಿಂಗ್ ರೋಡ ಮೇಲಿನ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಸೋಮವಾರ ಹಮ್ಮಿಕೊಳ್ಳಲಾಯಿತು.ವಿಜಯಪುರ ನಗರದ ಮಹಾಯೋಜನೆಯ ಅನುಸಾರ ಅಭಿವೃದ್ಧಿ ಕೈಗೊಳ್ಳಲು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ: ೨, ೪, ೬ ಮತ್ತು ೩೫, ರಲ್ಲಿ ಬರುವ ಅಥಣಿ ರಸ್ತೆಯಿಂದ ಸೊಲಾಪೂರ ರಸ್ತೆಯ ಕಡೆಗೆ ಹೋಗುವ ರಿಂಗ್ ರಸ್ತೆಯ ಎರಡು ಬದಿಯಲ್ಲಿ(ದರ್ಗಾ ಟಕ್ಕೆ ವರೆಗೆ, ಎನ್.ಜಿ.ಓ ಕಾಲೋನಿ, ಹಳೆ ಪಂಡರಪುರ ರಸ್ತೆ,) ವರೆಗಿನ ರಸ್ತೆ ಮೇಲಿನ ಅತಿಕ್ರಮಣ ತೆರವುಗೊಳಿಸಿಕೊಳ್ಳುವಂತೆ ಈಗಾಗಲೇ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸೂಚಿಸಲಾಗಿತ್ತು.ಸದರಿ ನೋಟಿಸ್ ಅನುಸಾರ ಹಲವಾರು ಕಟ್ಟಡ ಮಾಲೀಕರುಗಳು ಸ್ವಯಂ ಪ್ರೇರಿತವಾಗಿ ಅತಿಕ್ರಮಣ ಮಾಡಿದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿಕೊಂಡಿದ್ದರು. ಇನ್ನೂ ಹಲವಾರು ಕಟ್ಟಡ…

Read More

ಐತಿಹಾಸಿಕ ತಾಜ್‌ಬಾವಡಿ ಸ್ಮಾರಕ ಸಂರಕ್ಷಣೆ-ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ | ಸಚಿವ ಡಾ.ಎಂ.ಬಿ.ಪಾಟೀಲ ಸ್ಪಷ್ಠನೆ ವಿಜಯಪುರ: ನಗರದ ತಾಜ್‌ಬಾವಡಿಯ ಪುನರುಜ್ಜೀವನಗೊಳಿಸುವುದು ಮತ್ತು ಸಂರಕ್ಷಿಸುವುದಷ್ಟೇ ಅಲ್ಲದೇ, ನಗರದಲ್ಲಿರುವ ಐತಿಹಾಸಿಕ ಗೋಲಗುಂಬಜ್, ತಾಜ್‌ಬಾವಡಿ, ಇಬ್ರಾಹಿಂರೋಜಾ ಮತ್ತು ಇತರೆ ಸ್ಮಾರಕಗಳನ್ನು ಸೇರಿಸಿ ಪ್ರತ್ಯೇಕವಾಗಿ ಬಿಜಾಪುರ ಸ್ಮಾರಕಗಳ ಸಮೂಹ ಮಾಡಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.ಜಿಲ್ಲಾಡಳಿತ,ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹಾಗೂ ವರ್ಡ ಹೇರಿಟೇಜ್ ಮಾನ್ಯುಮೆಂಟ ಅಸೋಸಿಯೇಷನ್ ಆಪ್ ಇಂಡಿಯಾ (ಡಬ್ಲೂಎಂಫ್) ವಿಶ್ವ ಸ್ಮಾರಕಗಳ ನಿಧಿ ಇವರ ಸಹಭಾಗಿತ್ವದಲ್ಲಿ ಮತ್ತು ಟಿಸಿಎಸ್ ಫೌಂಡೇಶನ್‌ರವರ ಸಿಎಸ್‌ಆರ್ ಅನುದಾನದಡಿ ಸ್ಮಾರಕ ದತ್ತು ಯೋಜನೆಯಡಿಯಲ್ಲಿ ವಿಜಯಪುರ ನಗರದ ಐತಿಹಾಸಿಕ ತಾಜಬಾವಡಿ ಸ್ಮಾರಕ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ೧೬೨೦ರಲ್ಲಿ ನಿರ್ಮಿಸಿದ ೨೨೪ ಚದರ ಅಡಿ ವಿಸ್ತೀರ್ಣದಲ್ಲಿ ೩೫ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು…

Read More

ಐತಿಹಾಸಿಕ ಮಮದಾಪುರ ಕೆರೆ ಸೌಂದರ್ಯಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿಕೆ ವಿಜಯಪುರ: ಐತಿಹಾಸಿಕ ಮಮದಾಪುರ ಕೆರೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಸಿಎಸ್‌ಆರ್ ಅನುದಾನದಡಿ ಸೌಂದರ್ಯಿಕರಣಗೊಳಿಸಲಾಗುತ್ತಿದ್ದು, ಬಾಂದಾರ ನಿರ್ಮಾಣ ಹಾಗೂ ೮೦೦ ಮೀಟರ್ ಟ್ಯಾಂಕ್ ಬಾಂದಾರಗಳನ್ನು ಅಭಿವೃದ್ಧಿ ಫೆನ್ಸಿಂಗ್ ಮತ್ತು ಹ್ಯಾಂಡ್ರೈಲ್‌ಗಳನ್ನು ಸ್ಥಾಪಿಸುವುದು, ಫುಟ್‌ಪಾತ್‌ಗಳನ್ನು ರಚಿಸುವುದು ಮತ್ತು ಮಕ್ಕಳ ಆಟದ ಪ್ರದೇಶವನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.ರವಿವಾರ ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಏಕಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಿಂದ ನೀಡಿದ ಸ್ಮಾರ್ಟ್ ಕ್ಲಾಸ್‌ಗಳನ್ನು ಉದ್ಘಾಟಿಸಿ ಮಮದಾಪುರ ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿಂದುಸ್ತಾನ ಕೋಕಾಕೋಲಾ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಡಿ ಮಮದಾಪುರ ಕೆರೆ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಜನರ ಬೇಡಿಕೆಯಂತೆ…

Read More

ವಿಜಯಪುರದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲೆಯ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಹೃದಯಸ್ಪರ್ಷಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.ರವಿವಾರ ಸಂಜೆ ನಗರದ ಪೊಲೀಸ್ ಕವಾಯತು ಮೈದಾನದ ಎದುರಿಗಿರುವ ಪೊಲೀಸ್ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಈ ಭವ್ಯ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ 20 ಜನ ಪತ್ರಕರ್ತರ (ಸಂಘದ ಸದಸ್ಯರ) ಮಕ್ಕಳಿಗೆ ಶಾಲು ಹೊದಿಸಿ ಪ್ರಮಾಣ ಪತ್ರ, ಸ್ಮರಣಿಕೆ, ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ಸಸಿಗೆ ನೀರೆರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ…

Read More

ಚಡಚಣ: ವ್ಯಕ್ತಿಯ ಜೀವನದ ಪ್ರತಿ ಹಂತದಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ. ಬೇಸರ ಹಾಗೂ ದುಃಖವನ್ನು ಹೋಗಲಾಡಿಸುವ ಸಾಧನವೆಂದರೆ ಹಾಸ್ಯ. ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿದ್ದು ಕನ್ನಡದ ಅನೇಕ ಸಾಹಿತಿಗಳು ಹಾಸ್ಯದ ಮೂಲಕ ಸಾಹಿತ್ಯದ ಮೆರಗನ್ನು ಹೆಚ್ಚಿಸಿದ್ದಾರೆ. ಬೀಚಿ, ಬೆಟಗೇರಿ ಕೃಷ್ಣಶರ್ಮ, ಎಂ. ಎಸ್. ಸುಂಕಾಪುರ ಮುಂತಾದವರ ಹಾಸ್ಯ ಸಾಹಿತ್ಯ ಕನ್ನಡ ಸಾಹಿತ್ಯದ ಕೊಡುಗೆಯಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಆಧುನಿಕ ಭಾರತೀಯ ಭಾಷಾ ಹಾಗೂ ಸಾಂಸ್ಕೃತಿಕ ಅಧ್ಯಯನ ವಿಭಾಗದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಸುಧಾಕುಮಾರಿ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಹಾಗೂ ಹಿಂದಿ ವಿಭಾಗಗಳ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಮತ್ತು ಹಿಂದಿ ಸಾಹಿತ್ಯದಲ್ಲಿ ಹಾಸ್ಯ-ವ್ಯಂಗ್ಯ’ ವಿಷದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಉದ್ದೇಶಿಸಿ ಅವರು ಮಾತನಾಡಿದರು.ಕನ್ನಡದಲ್ಲಿ ರಾಮಾಯಣ, ಮಹಾಭಾರತ, ಪಂಪ, ರನ್ನರ ಕಾವ್ಯಗಳಲ್ಲಿ ಹಾಸ್ಯದ ಪ್ರಸಂಗಗಳು ಬರುತ್ತವೆಯಾದರೂ ಹಾಸ್ಯ ಪ್ರಕಾರದ ಸುವರ್ಣ ಯುಗ ಆರಂಭವಾದದ್ದು 20ನೆಯ ಶತಮಾನದಲ್ಲಿ ಮುದ್ದಣ್ಣ ಮನೋರಮೆಯರ ಹಾಸ್ಯ ಸಂಭಾಷಣೆ ಬರೆದ…

Read More

ಕೆಂಭಾವಿ: ಸರ್ಕಾರದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು, ಜನರ ಮತ್ತು ಜನತಂತ್ರ ವ್ಯವಸ್ಥೆಯ ನಡುವೆ ಸಂಪರ್ಕ ಸೇತುವೆಯಾಗಿ, ಸರ್ವರ ಹಿತಾಸಕ್ತಿ ಕಾಪಾಡುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಲಿ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.ಪಟ್ಟಣದ ಶ್ರೀ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಪತ್ರಕರ್ತರ ಬಳಗ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿಶೇಷ ಸನ್ಮಾನ, ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ನೈಜ ವರದಿ ಪ್ರಕಟಿಸುವ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಎತ್ತಿ ಹಿಡಿದು, ಸಾಮಾಜಿಕ, ಆರ್ಥಿಕ, ರಾಜಕೀಯ, ರಂಗದ ಓರೆ ಕೋರೆಗಳನ್ನು ತಿದ್ದಿ ತೀಡಿ ಬರೆಯುವ ಮೂಲಕ ‌ಜನಮನ್ನಣೆ ಗಳಿಸಲಿ ಎಂದವರು, ಪಟ್ಟಣದ ಪತ್ರಕರ್ತರ…

Read More

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಸಿಗೆ ನೀರುಣಿಸುವ ಕಾರ್ಯಕ್ರಮ ವಿಜಯಪುರ: ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರವೂ ಅಗತ್ಯವಾಗಿದೆ. ನಮ್ಮ ಸುಂದರ ಬದುಕಿಗೆ ಪರಿಸರವನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರು ಮತ್ತು ಬೃಹತ್ ಕೈಗಾರಿಕೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಡಾ ಎಂ.ಬಿ.ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ಆಶಾ ಎಂ.ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಆವರಣದಲ್ಲಿನ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯದಐಕ್ಯೂಎಸಿ, ಹಸಿರು ಸಿರಿ ಘಟಕ, ವೃಕ್ಷಅಭಿಯಾನ ಪ್ರತಿಷ್ಠಾನ, ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಮೂಲಕ ‘ಹಸಿರು ಸಿರಿ’ ಘಟಕ ಮತ್ತು ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ಸಸಿ ನೆಟ್ಟು ನೀರುಣಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಈ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ನಮ್ಮದೈನಂದಿನ ಚಟುವಟಿಕೆಗಳಲ್ಲಿ ಪರಿಸರವನ್ನು ಬೆಳೆಸಿ ಪೋಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನಮ್ಮ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು…

Read More