ವಿಜಯಪುರ: ಕರ್ನಾಟಕ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಅಭ್ಯರ್ಥಿಗಳಿಂದ ೨೦೨೩-೨೪ ಹಾಗೂ ೨೦೨೪-೨೫ ನೇ ಸಾಲಿನಲಿಶಿಷ್ಯ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ೧೨-೦೮-೨೦೫೪ ಕೊನೆಯ ದಿನವಾಗಿದ್ದು, ಶಿಷ್ಯವೇತನದ ಬಗ್ಗೆ ಮಾಹಿತಿ ಹಾಗೂ ಅರ್ಜಿಯನ್ನುsangeeetanrityaacademy.karnataja.gov.in ನಲ್ಲಿ ಪಡೆದುಕೊಳ್ಳಬಹುದು. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ವಿಡಿಯೋ ಚಿತ್ರೀಕರಿಸಿ ಪೆನ್ ಡ್ರೈವ್ ನಲ್ಲಿ ರಿಜಿಸ್ಟರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೆಯ ಮಹಡಿ, ಜೆಸಿ ರಸ್ತೆ ಬೆಂಗಳೂರು -೫೬೦೦೦೨ ಕಾರ್ಯಾಲಯಕ್ಕೆ ಅಂಚೆ ಅಥವಾ ಖುದ್ದಾಗಿ ತಲುಪಿಸಬಹುದು ಎಂದು ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
