Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪ್ರಸಕ್ತ ಸಾಲಿನಿಂದ ಪಟ್ಟಣದ ಸಾರಂಗಮಠದ ಶ್ರೀ ಪದ್ಮರಾಜ ಫ್ರೀ ಬೋರ್ಡಿಂಗ್‌ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ೫,೬,೭ ಹಾಗೂ ೮ನೆಯ ತರಗತಿಯ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅವಕಾಶಗಳನ್ನು ಕಾಯ್ದಿರಿಸಲಾಗಿದೆ. ಸಿಬಿಎಸ್‌ಸಿ ಮತ್ತು ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ. ಗ್ರಾಮೀಣ ಭಾಗದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಸಮಸ್ಯೆಯಿರುವ ಕಾರಣ ಅವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೀ ಸಾರಂಗಮಠದ ಫ್ರೀ ಬೋರ್ಡಿಂಗ್ ಸಾರಂಗಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ವ್ಯವಸ್ಥೆ ಕಡ್ಡಾಯವಾಗಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗೆ ಮಾತ್ರವಿರುತ್ತದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಪರೀಕ್ಷೆ ಬರೆಯುವುದು ಕಡ್ಡಾವಾಗಿದೆ. ಪರೀಕ್ಷೆಯು ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ವಿಯಜಪುರ ರಸ್ತೆಯ ಕಾಲೇಜು ಕ್ಯಾಂಪಸ್‌ನಲ್ಲಿ ಜೂ.೦೯ರಂದು ಬೆಳಿಗ್ಗೆ ೧೧ಗಂಟೆಗೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಚ್ಚೆಯುಳ್ಳವರು ಡಾ.ಶರಣಬಸವ ಜೋಗುರ, ಚನ್ನಬಸವ ಕತ್ತಿ, ವೀರೇಶ ಜೋಗುರ ೯೮೪೫೩೩೩೦೯೩/೯೯೪೫೯೫೨೫೯೯/೯೪೮೩೩೭೬೯೮೪ ಸಂಪರ್ಕಿಸಿ ಮೇಲಿನ…
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ & ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಫರ್ನ ಹೋಟೆಲ್ ಸಭಾಂಗಣದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತುಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಆಧುನಿಕ ತಂತ್ರಜ್ಞಾನದೊಂದಿಗೆ ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಆಧುನಿಕ ಜಗತ್ತಿನ ಎಲ್ಲಾ ನೋವು-ನಲಿವುಗಳ ಜೊತೆಯಲ್ಲಿ ಐತಿಹಾಸಿಕ ದಾಖಲೀಕರಣ ಮಾಡುವವರು ಛಾಯಾಗ್ರಾಹಕರು. ಜಗತ್ತಿನಲ್ಲಿ ಎಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯನ್ನು ಸ್ಮಾಯಿಲ್ ಪ್ಲೀಸ್ ಅನ್ನುವ ಹಕ್ಕು ಇರುವುದು ಮಾತ್ರ ಛಾಯಾಗ್ರಾಹಕರಿಗೆ. ಅಂತಹ ವೃತ್ತಿ ಇವತ್ತು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ. ಸಮಾಜದಲ್ಲಿ ಯಾವುದೆ ವೃತ್ತಿಯಿಂದ ಜನ ನನ್ನನ್ನು ಗುರುತಿಸುತಿದ್ದರೂ ನಾನು ಮೂಲತ: ಇದೆ ಛಾಯಾಗ್ರಾಹಕ ವೃತ್ತಿಯಿಂದನೆ ಬೆಳೆದದ್ದು. ಛಾಯಾಗ್ರಾಹಕರಿಗೆ ಕಲಾವಿದರಿಗೆ ನಾವು ಗೌರವಿಸಬೇಕು ಎಂದು ತಮ್ಮ ಉದ್ಘಾಟನಾಪರ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಸೋನಿ ಕಂಪನಿಯ ಹಿರಿಯ ಮಾರಾಟಗಾರರಾದ ನಿತೀನಕುಮಾರ…
ಸಿಂದಗಿ: ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಿಸುವುದು ನಾವೆಲ್ಲರೂ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ, ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಸಿಂದಗಿ ಪೋಲಿಸ್ ಠಾಣೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨೦೨೩-೨೪ನೆಯ ಸಾಲಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಪರಿಣಾಮ ಸುಮಾರು ೪೧೮ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ನಾವೇಲ್ಲರೂ ನಮ್ಮ ಕುಟುಂಬವನ್ನು ರಕ್ಷಣೆ ಮಾಡುವಂತವರು. ನಾವು ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್‌ನ್ನು ಧರಿಸಿ ವಾಹನ ಚಲಾಯಿಸಬೇಕು ಎಂದರು.ಈ ವೇಳೆ ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ, ಉಪನ್ಯಾಸಕ ಎಸ್.ಆರ್.ಬಿರಾದಾರ, ಎಸ್.ಎ.ಜಾಗಿರದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ಬೆಂಗಳೂರು: ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಜೆಡಿಎಸ್ ಸಂಸದ, ಲೋಕಸಭಾ ಚುನಾವಣೆ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಗುರುವಾರ ಹೇಳಿದ್ದು, ‘ಅವರನ್ನು ದೇಶಕ್ಕೆ ಕರೆತರಲು ಕೇಂದ್ರವು ಸಹಕರಿಸಲು ಸಿದ್ಧ” ಎಂದರು.ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಪ್ರಜ್ವಲ್ ವಿದೇಶಕ್ಕೆ ತೆರಳುವ ಮುನ್ನವೇಕೆ ಪ್ರಕರಣ ದಾಖಲಿಸಿ ಬಂಧಿಸಲಿಲ್ಲ” ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ…
ರಾಜ್ಯಪಾಲರ ಭೇಟಿ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿತ್ತು.ಕೆಯುಡಬ್ಲೂೃಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಆಯೋಜಿಸಲಿರುವ ಪತ್ರಕರ್ತರ ಸಮಾರಂಭಕ್ಕೆ ಆಗಮಿಸಬೇಕು ಎಂದು ವಿನಂತಿಸಿತು.ಸರ್ಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ ಕಾಪಾಡುತ್ತಿದ್ದಾರೆ ಎಂದು ಶ್ಲಾಸಿದರು.ಕೆಯುಡಬ್ಲೂೃಜೆ ಹುಟ್ಟು ಹಾಕಿದ ಸಾಹಿತಿ ಮತ್ತು ಪತ್ರಕರ್ತ ಡಿ.ವಿ.ಗುಂಡಪ್ಪ ಅವರ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೀಡಿದ ಮಾಹಿತಿ ತಿಳಿದುಕೊಂಡ ರಾಜ್ಯಪಾಲರು, ಅವರ ಆದರ್ಶದಲ್ಲಿ ಈಗಲೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ ಕೆಯುಡಬ್ಲೂೃಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.ತಾವು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಕೇರಳ ಮತ್ತು ಕಾಸರಗೋಡು ಭಾಗಕ್ಕೆ ಭೇಟಿ ನೀಡಿದ ನೆನಪುಗಳನ್ನು…
ಮುದ್ದೇಬಿಹಾಳ: ನಮಗೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಪುರಸಭೆಯ ವಾರ್ಡ ನಂ ೧೫ ರ ನಿವಾಸಿಗಳು ಪುರಸಭೆ ಕಾರ್ಯಾಲಯಕ್ಕೆ ಖಾಲಿ ಕೊಡಗಳನ್ನು ತಂದು ಮುಖ್ಯದ್ವಾರದ ಬಳಿ ಕುಳಿತು ಗುರುವಾರ ದಿಢೀರನೆ ಪ್ರತಿಭಟನೆ ನಡೆಸಿದರು.ಬೇಕೆ ಬೇಕೆ ನ್ಯಾಯ ಬೇಕು ಎಂದು ಪುರಸಭೆಗೆ ಧಿಕ್ಕಾರ ಹಾಕುತ್ತಿದ್ದಂತೆಯೇ ಪ್ರತಿಭಟನಾಕಾರರ ಮನವೊಲಿಸಲು ಮುಖ್ಯಾಧಿಕಾರಿ ಆಗಮಿಸಿದರು. ಆಗಿರುವ ತೊಂದರೆಯನ್ನು ನಾನು ಬಗೆಹರಿಸುವೆ, ಮಧ್ಯಾಹ್ನ ೪ಗಂಟೆ ಹೊತ್ತಿಗೆ ನೀರು ಬಿಡಿಸುವ ವ್ಯವಸ್ಥೆ ಮಾಡುತ್ತೇನೆ ದಯಮಾಡಿ ಪ್ರತಿಭಟಿಸಬೇಡಿ ಎಂದು ಕೇಳಿಕೊಂಡರು. ಮುಖ್ಯಾಧಿಕಾರಿಗಳ ಮಾತಿಗೆ ಜಗ್ಗದ ಪ್ರತಿಭಟನಾಕಾರರು ಸುಮಾರು ದಿನಗಳಿಂದ ನಾವು ಈ ಸಮಸ್ಯೆ ಮಾತ್ರವಲ್ಲದೇ ವಿದ್ಯತ್, ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನೀವು ಏನೇ ಹೇಳಿದರೂ ನಾವು ಇಲ್ಲಿಂದ ಕದಲುವದಿಲ್ಲ. ಮೊದಲು ನೀರು ಬಿಡುವ ನೌಕರನನ್ನು ಇಲ್ಲಿಗೆ ಕರೆಯಿಸಿ ಯಾಕೆ ನಮಗೆ ನೀರು ಬಿಡಲು ಹಿಂದೇಟು ಹಾಕುತ್ತಾನೆ ಎಂಬ ಬಗ್ಗೆ ಎಲ್ಲರೆದುರು ಪ್ರಶ್ನಿಸಿ ಆತನಿಂದ ಸೂಕ್ತ ಉತ್ತರ ಬಂದರೆ ಮಾತ್ರ ನಾವು ಇಲ್ಲಿಂದ…
ಚಡಚಣ: ಸಮೀಪದ ಕರ್ನಾಟಕ-ಮಹಾರಾಷ್ಟ್ರ ಗಡಿಗ್ರಾಮ ಉಮದಿಯಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಸಮತಾ ಮಾಧ್ಯಮಿಕ ಆಶ್ರಮ ಶಾಲೆ ಮತ್ತು ಜೂನಿಯರ್ ಕಾಲೇಜಿನ 12 ನೇ ತರಗತಿ ವಾರ್ಷಿಕ ಪರೀಕ್ಷೆಯವಿಜ್ಞಾನ ವಿಭಾಗದ ಫಲಿತಾಂಶದಲ್ಲಿ100% ರಷ್ಟು ಹಾಗೂ ಕಲಾ ವಿಭಾಗದಲ್ಲಿ 93% ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ ಗಡದೆ- 87.17%(ಪ್ರಥಮ ಸ್ಥಾನ), ಪೃಥ್ವಿ ಹೋರ್ತಿಕರ-83.50%(ದ್ವಿತೀಯ ಸ್ಥಾನ), ಪ್ರಶಾಂತ್ ಪಡುವಳೆ-83.17%(ತೃತೀಯ ಸ್ಥಾನ) ಮತ್ತು ಕಲಾ ವಿಭಾಗದಲ್ಲಿ ಸೋನಾಲಿ ಬೆಳ್ಳುಂಡಗಿ-87.67%(ಪ್ರಥಮ ಸ್ಥಾನ), ಅಶ್ವಿನಿ ಕಕಮರಿ-87.50%(ದ್ವಿತೀಯ ಸ್ಥಾನ), ಶಶಿಕಾಂತ್ ಹೊನಮುರ್ಗಿ-86.33%(ತೃತೀಯ ಸ್ಥಾನ) ಈ ರೀತಿ ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಇಮ್ಮಡಿಗೊಳಿಸಿದ್ದಾರೆ. ಇವರ ಸಾಧನೆ ಹೀಗೆ ಹೆಚ್ಚಿಸಲೆಂದು ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪಣ್ಣ ಹೋತಿಕರ, ಉಪ ಅಧ್ಯಕ್ಷ ರೇವಪ್ಪಣ್ಣ ಲೋಣಿ, ಕಾರ್ಯದರ್ಶಿ ಎಸ್.ಕೆ ಹೊರ್ತಿಕರ ಹಾಗೂ ಆಡಳಿತ ಮಂಡಳಿ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಅವರ ನಿವಾಸದಲ್ಲಿ ಬುದ್ಧ ಪೂರ್ಣಿಮಯಂಗವಾಗಿ ಗುರುವಾರ ಗೌತಮ ಬುದ್ಧರ ೨೫೬೧ ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಯಂತಿಯಂಗವಾಗಿ ಗೌತಮ ಬುದ್ಧ, ಡಾ.ಅಂಬೇಡ್ಕರ ಅವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು.ಅಶೋಕ ಚಲವಾದಿ ಮಾತನಾಡಿ, ಬುದ್ಧ ಪೌರ್ಣಮಿಯು ಅತ್ಯಂತ ವಿಶೇಷ ಮತ್ತು ಪವಿತ್ರ ದಿನವಾಗಿದೆ. ಬುದ್ಧ ಪೌರ್ಣಮಿಯ ಭಗವಾನ್ ಬುದ್ಧನ ಜನ್ಮ, ಬೋಧನ ಮತ್ತು ಮಹಾಪರಿನಿರ್ವಾಣವನ್ನು ನೆನಪಿಸುವ ಪ್ರಮುಖ ಬೌದ್ಧ ಹಬ್ಬವಾಗಿದೆ. ಇದು ಶಾಂತಿ, ಕರುಣೆ ಮತ್ತು ಪ್ರeಯ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಎಂದರು. ಈ ಸಂದರ್ಭದಲ್ಲಿ ವಿಠ್ಠಲ ಚಲವಾದಿ, ಪ್ರಜ್ವಲ ನಂದಿ, ಗಂಗಾ ನಂದಿ, ಪ್ರಿಯಾಂಕಾ ನಂದಿ, ಪೂಜಾ ನಂದಿ, ಅನಿತಾ ನಂದಿ ಇದ್ದರು.
ಬಸವನಬಾಗೇವಾಡಿ: ಪಟ್ಟಣದ ಬಸವ ನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಗುರುವಾರ ಸಂಭ್ರಮ,ಸಡಗರದಿಂದ ಜರುಗಿತು. ದೇವಿಗೆ ಜಾತ್ರಾಮಹೋತ್ಸವದಂಗವಾಗಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.ಬೆಳಗ್ಗೆ ಜಾತ್ರಾಮಹೋತ್ಸವದಂಗವಾಗಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ರೇಣುಕಾ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವವು ಕುಂಭಮೇಳ, ಜೋಗಮ್ಮಗಳ ಜೌಡಕಿ ಕುಣಿತ, ಡೊಳ್ಳು ಹಾಗೂ ತಳೇವಾಡದ ಹಣಮಂತ ಭಜಂತ್ರಿಯವರ ಕರಡಿ ಮಜಲು ತಂಡದೊಂದಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಯಲ್ಲಿ ಗಂಗಸ್ಥಳ ಪೂಜೆ ಮುಗಿಸಿಕೊಂಡ ನಂತರ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿ ಉತ್ಸವವು ದೇವಸ್ಥಾನಕ್ಕೆ ಆಗಮಿಸಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ತೊಟ್ಟಿಲು ಕಾರ್ಯಕ್ರಮ ಜರುಗಿತು.ಪಲ್ಲಕ್ಕಿ ಉತ್ಸವದಲ್ಲಿ ಶರಣಪ್ಪ ಬೆಲ್ಲದ, ಬಸವರಾಜ ಟಕ್ಕಳಕಿ, ಹಣಮಂತ ಹತ್ತಿ, ಮಹಾಂತೇಶ ಹಂಜಗಿ, ಬಸವರಾಜ ಕಾಮನಕೇರಿ, ರಮೇಶ ಪವಾರ, ಸಂಗಮೇಶ ದೊಡ್ಡಮನಿ, ಕೊಟೆಪ್ಪ ಬಿರಾದಾರ, ಮಹೇಶ ಸಾಲವಾಡಗಿ, ಭೀಮು ಗೊಳಸಂಗಿ, ಶಿವು ಜೀರ,…
ಇಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನದಿಂದ ಇಂಡಿ ಪಟ್ಟಣದ ಬೀರಪ್ಪ ನಗರದಲ್ಲಿರುವ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿ ಕಮೀಟಿ (ರಿ) ಇಂಡಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ೧ ಲಕ್ಷ (ಒಂದು ಲಕ್ಷ ರೂ.) ಚಕ್‌ನ್ನು ಯೋಜನಾಧಿಕಾರಿಯಾದ ನಟರಾಜ ಎಲ್.ಎಂ ವಿತರಿಸಿದರು.ನಟರಾಜ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ ಮತ್ತು ದೇವಸ್ಥಾನಗಳು ನೆಮ್ಮದಿಯ ಶ್ರದ್ದಾ ಕೇಂದ್ರಗಳು. ಅದಕ್ಕಾಗಿ ಮಂಜುನಾಥ ಸನ್ನಿಧಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹಣ ನೀಡಿರುವದು ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.ಪುಣ್ಯ ಕಾರ್ಯಗಳಲ್ಲಿ ಧರ್ಮಸ್ಥಳದ ಕಾರ್ಯ ಶ್ಳಾಘನೀಯ. ಈ ಭಾಗದಲ್ಲಿ ಸ್ತ್ರೀ ಶಕ್ತಿ ಗುಂಪುಗಳನ್ನು ಮಾಡಿ ಸ್ತ್ರೀಯರಿಗೆ ಸ್ವಾವಲಂಬಲನೆಗಾಗಿ ಹಣಕಾಸಿನ ಸಹಾಯ ನೀಡುತ್ತಿರುವದು ಹೆಮ್ಮೆಯ ವಿಷಯ. ಅನೇಕ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ ಹೂಗಾರ, ಅಧ್ಯಕ್ಷ ಶಾಂತಕುಮಾರ ಮೇತ್ರಿ, ಕಾರ್ಯದರ್ಶಿ ಶರಣಗೌಡ ಬಿರಾದಾರ., ವಿರೇಶ ಹತ್ತೂರಮಠ, ರವಿ…
