ಕಲಕೇರಿ: ಆದರ್ಶ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆಯನ್ನು ಎಸ್ ಎಂ ಸಜ್ಜನ ಪ್ರಾಚಾರ್ಯರು ಪದವಿ ಮಹಾವಿದ್ಯಾಲಯ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಡಿ ಮೋತಿಬಾಯಿ ಡಾ. ಸಂತೋಷ ಟೆಂಗಳಿ, ಅಪ್ಪಸಾಬ ಮಾಂಗ, ಫಾರೂಕ್ ವಲ್ಲಿಬಾಯಿ, ಶ್ರೀಮತಿ ರೇಷ್ಮಾ ಮುಜಾವರ, ಹೆಚ್.ಎ. ಮೊಮೀನ ವಹಿಸಿದ್ದರು.
ಈ ಸಂದರ್ಭದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಐ. ಸಿ. ಟಿ. ಸಿ ಆಪ್ತಸಮಾಲೋಚಕ ಡಾ. ಸಂತೋಷ ಟೆಂಗಳಿ ಮಾತನಾಡಿ, ಮಹಾಮಾರಿ ರೋಗದ ಕುರಿತು ಅದು ಹರಡುವ ವಿಧಾನ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಯುವ ಜನತೆ ಅದರಿಂದ ಯಾವ ರೀತಿ ದೂರ ಇರಬೇಕು ಎಂಬುದರ ಬಗ್ಗೆ ಹಾಗೂ ಲೈಂಗಿಕ ರೋಗದ ಸೋಂಕುಗಳ ಬಗ್ಗೆ ವಿವರಿಸಿದರು.
ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕ ಅಪ್ಪಾಸಾಬ ಮಾಂಗ ಮಾತನಾಡಿ, ಹದಿಹರೆಯದಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳು ಹಾಗೂ ಹದಿಹರೆಯದವರ ಸಮಸ್ಯೆಗಳು ಕುರಿತು ವಿವರಿಸಿದರು.
ಫಾರೂಕ್ ವಲ್ಲಿಬಾಯಿ ಮಾತನಾಡಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಡೆಂಗ್ಯೂ ರೋಗದ ಲಕ್ಷಣಗಳು ಹರಡುವಿಕೆ ವಿಧಾನವನ್ನು ವಿವರಿಸಿದರು.
ಎಂಡಿ ಮೋತಿಬಾಯಿ ಮಾತನಾಡಿ, ಋತುಚಕ್ರ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಛತೆಯ ಕುರಿತು ವಿವರಿಸಿದರು.
ಅಧ್ಯಕ್ಷೀಯ ಭಾಷಣವನ್ನು ಎಸ್ಎಂ ಸಜ್ಜನ್ ಸರ್ ಅವರು ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನೀಡಿದ ಆರೋಗ್ಯ ಸಲಹೆಗಳನ್ನು ಸೂಕ್ತವಾಗಿ ನಿರ್ವಹಿಸಿ ನಿಮ್ಮ ಆರೋಗ್ಯವ ನ್ನು ಕಾಪಾಡಿಕೊಳ್ಳಿ ಮತ್ತು ಇತರರಿಗೂ ಇದರ ಅರಿವು ನೀಡಿರಿ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸದ್ದಾಂ ಯಡ್ರಾಮಿ, ನೇಹಾ ಹೊಸಮನಿ, ಶಿರಿನ ಬಿಸನಾಳ, ಶಾಮಶಾದ ಮನಗೂಳಿ ಹಾಗೂ ಫಯಾಜ್ ಜಾಗಿರಾದಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

