ಚಿಮ್ಮಡ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ಬೇರೆ ವಿದ್ಯಾರ್ಥಿಗಳಿಗಿಂತ ತಾನು ಕಡಿಮೆ ಎಂಬ ಕೀಳರಿಮೆಯನ್ನು ಕಿತ್ತೆಸೆದು ಮುನ್ನುಗ್ಗಬೇಕೆಂದು ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೋ. ಬಸವರಾಜ ಕೊಣ್ಣೂರ ಹೇಳಿದರು.
ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಪ್ರಥಮ ಪಿಯೂ ವಿದ್ಯಾರ್ಥಿಗಳ ಸ್ವಾಗತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಓದುವ ಸಮಯದಲ್ಲಿ ತಮ್ಮ ಗಮನವನ್ನು ಬೇರೆಡೆ ತಿರುಗಿಸದೆ ನೇರ ಗುರಿಯೊಂದಿಗೆ ಸತತ ಅಧ್ಯಯನ ಮಾಡಿದಲ್ಲಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಬಹುದು, ಉತ್ತಮ ಮನೋಭಾವ, ಒಳ್ಳೆಯ ನಡುವಳಿಕೆಯಿಂದ ತಂದೆ ತಾಯಿಯರಿಗೆ ವಿಧೇಯರಾಗಿ ಅದ್ಯಯನ ಮಾಡಿದಲ್ಲಿ ಬುದ್ದಿಮತ್ತೆ ವೃದ್ದಿಸುತ್ತದೆ ಎಂದ ಅವರು, ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟುತನದಿಂದ ಮಾಡಿದಲ್ಲಿ ಒಳ್ಳೆ ಫಲ ದೊರೆಯಲಿದೆ ಎಂದರು.
ವಿದ್ಯಾಲಯದ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ, ಗ್ರಾಮಸ್ಥರ, ಕಾಲೇಜು ಅಭಿವೃದ್ದಿ ಸಮೀತಿಯ ಸಹಕಾರದಿಂದ ಹಲವಾರು ಕೊರತೆಗಳ ನಡುವೆಯೂ ವಿದ್ಯಾಲಯ ಪ್ರಸಕ್ತ ಸಾಲಿನ ಫಲಿತಾಂಶ ಶೇ. ೧೦೦ ಸಾಧನೆ ಮಾಡಿದ್ದು ಗ್ರಾಮಕ್ಕೆ ಹೆಮ್ಮಯ ವಿಚಾರವಾಗಿದ್ದು ಈ ಸಾಧನೆ ಮುಂದಿನ ಫಲಿತಾಶ ವೃದ್ದಿಸುವ ಜವಾಬ್ದಾರಿಯನ್ನು ನಮ್ಮ ಉಪನ್ಯಾಸಕರಿಗೆ ನೀಡಿದೆ ಎಂದರು.
ವಿದ್ಯಾಲಯದ ಅಭಿವೃದ್ದಿ ಸಮೀತಿಯ ಪ್ರಭು ಪಾಲಭಾವಿ, ಉಪನ್ಯಾಸಕರಾದ ಬಿ.ಬಿ.ಕುದರಿಮನಿ, ಎ.ಬಿ. ಗೌಡಪ್ಪನವರ ಮಾತನಾಡಿದರು.
ಅಭಿವೃದ್ದಿ ಸಮೀತಿಯ ಅಧ್ಯಕ್ಷ ಬಸವರಾಜ ಕುಂಚನೂರ, ಉಪಾಧ್ಯಕ್ಷ ಅವ್ವನಪ್ಪಾ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ನೇಸೂರ, ರಾಚಯ್ಯ ಮಠಪತಿ, ಶಂಕರ ಬ. ಪಾಟೀಲ, ಕಾಳಪ್ಪ ಬಡಿಗೇರ, ಗಟಿಗೆಪ್ಪ ಜಾಂಗನೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ಪ್ರೋ. ಬಸವರಾಜ ಕೊಣ್ಣೂರ ಹಾಗೂ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಇಲಾಹಿ ಜಮಖಂಡಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ಉಪನ್ಯಾಸಕ ಡಾ. ಎಚ್.ಎಂ.ಕುಂಬಾರ ಸ್ವಾಗತಿಸಿದರು, ಪ್ರವೀಣ ಮೈತ್ರಿ ನಿರೂಪಿಸಿದರು, ಶ್ರೀಮತಿ ಪಿ.ಪಿ. ವಸ್ತ್ರದ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

