Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಶತಾಯುಷಿ ಲಿಂ. ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ. ೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೧ ನೇ ಜಾತ್ರಾಮಹೋತ್ಸವದಂಗವಾಗಿ ಜೂ. ೧,೨ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂ. ೧ ರಂದು ಬೆಳಗ್ಗೆ ೬.೨೦ ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ, ೬.೩೦ ಗಂಟೆಗೆ ಸಾಮೂಹಿಕ ಶಿವದೀಕ್ಷೆ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ ಗಂಟೆಗೆ ಮನಗೂಳಿ, ಕುಬಕಡ್ಡಿ, ಹತ್ತರಕಿಹಾಳ, ನಂದಿಹಾಳ ಪಿಯು, ವಿಜಯಪುರ ಅಡಿಕೆ ಗಲ್ಲಿ ಹಾಗೂ ಬಬಲೇಶ್ವರ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಜೂ. ೨ ರಂದು ಬೆಳಗ್ಗೆ ೭ ಗಂಟೆಗೆ ಬಸಪ್ಪ ಹುಣಶಿಕಟ್ಟಿ ಅವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವದು. ನಂತರ ೮ ಗಂಟೆಗೆ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ನಿಂಗನಗೌಡ ಪಾಟೀಲ, ಶಿವಪ್ಪ ಅನಗವಾಡಿ, ಬಸವರಾಜ ಸಣಕಲ್ ಹಾಗೂ ಮನಗೂಳಿ ವೈದಿಕರಿಂದ ನಡೆಯಲಿದೆ.…
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದರು.ಸ್ಥಳ ಪರಿಶೀಲನೆ ಮಾಡಿದ ನಂತರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದು. ಜೂ.೬ ರ ನಂತರ ಜಿಲ್ಲಾಽಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಹಿಂದಿನ ಸರ್ಕಾರ ಅವಧಿಯಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಇಂಗಳೇಶ್ವರ ಗ್ರಾಮದ ಅಭಿವೃದ್ಧಿಗಾಗಿ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಬಸವೇಶ್ವರ ಪಂಚ ಲೋಹದ ಪುತ್ಥಳಿ ಸ್ಥಾಪನೆ ೧.೩೬ ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಉತ್ತಮ ರೀತಿಯಿಂದ ಬಸವೇಶ್ವರರ ಪುತ್ಥಳಿ ತಯಾರಿಸಿ ಸುತ್ತಲೂ ಉದ್ಯಾನವನ, ಕಾರಂಜಿ, ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ…
ಬಸವವಬಾಗೇವಾಡಿ: ತಾಲೂಕಿನ ನಂದಿಹಾಳ ಗ್ರಾಮ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನದ ಸಮಾರಂಭ ಸಂಭ್ರಮ, ಸಡಗರದಿಂದ ಜರುಗಿತು.ಎಸ್ಡಿಎಂಸಿ ಅಧ್ಯಕ್ಷ ಸುರೇಶ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪು ಹಾದಿಮನಿ, ಮುಖ್ಯಗುರು ಡಿ. ಎನ್. ಸಂಗಳದ ಸರಸ್ವತಿ ದೇವಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ವಿಶ್ವನಾಥ ಮನಗೂಳಿ,ಶಂಕರ ಮನಗೂಳಿ , ಶಿವಪ್ಪ ಕುಮಶಿ,,ಹಣಮಂತ ಕರಡಿ,ರಮೇಶ ಬೆಂಕಿ, ಮುತ್ತು ಸಾರವಾಡ, ಆಸೀಪ್ ಮುಲ್ಲಾ, ಶಾಲೆಯ ಶಿಕ್ಷಕರಾದ ಪ್ರೇಮಲತಾ, ಸಂಗು ನಾಗರಾಳ, ರಮೇಶ ಕುದರಿ, ಶಿವು ಮಡಿಕೇಶ್ವರ,ಬಸವರಾಜ ಬಾಗೇವಾಡಿ, ವೈ. ಬಿ. ಬಾಗೇವಾಡಿ, ಉರ್ದು ಶಾಲೆಯ ಮುಖ್ಯಗುರು ಐ.ಆರ್. ಮಕಾನದಾರ, ಕನ್ನಡ ಶಿಕ್ಷಕ ಸಿ. ಎನ್. ಗಟೇಕಾರ ಪಾಲಕ ಪೋಷಕರು, ಮಕ್ಕಳು ಹಾಜರಿದ್ದರು. ಮಕ್ಕಳಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಶಾಲೆಗೆ ಮಕ್ಕಳನ್ನು ಸ್ವಾಗತಿಸಿಲಾಯಿತು.
– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆ, ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಡಗರದಿಂದ ಶುಕ್ರವಾರ ಆರಂಭವಾಯಿತು.ಕಳೆದರೆಡು ದಿನಗಳಿಂದ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣ, ರಂಗವಲ್ಲಿ ಚಿತ್ತಾರ ಬಿಡಿಸಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಶಾಲೆಗಳನ್ನು ಶಿಕ್ಷಕ ಬಾಂಧವರು ಸಜ್ಜುಗೊಳಿಸಿದ್ದರು. ಕೆಲ ಶಾಲೆಗಳಲ್ಲಿ ತಳಿರು-ತೋರಣದ ಜೊತೆಗೆ ಬಲೂನುಗಳನ್ನು ಕಟ್ಟಲಾಗಿತ್ತು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿಕೊಳ್ಳಲಾಯಿತು. ಸರ್ಕಾರ ಶಾಲಾ ಪ್ರಾರಂಭೋತ್ಸವಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರೂ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅಷ್ಟಾಗಿ ಕಂಡುಬರಲಿಲ್ಲ. ಕೆಲ ಶಾಲೆಗಳಲ್ಲಿಯಂತೂ ವಿದ್ಯಾರ್ಥಿಗಳು ಬೆರಳಣಿಕೆಯಷ್ಟು ಇರುವುದು ಕಂಡುಬಂದಿತ್ತು. ಶಿಕ್ಷಕ ಬಾಂಧವರು ಶಾಲೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಮಧ್ಯಾನ್ಹ ಸರ್ಕಾರದ ಆದೇಶದಂತೆ ಬಿಸಿಯೂಟದಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಲಾಗಿತ್ತು.ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಸರ್ಕಾರಿ 108 ಕಿರಿಯ ಪ್ರಾಥಮಿಕ ಶಾಲೆ, 181 ಹಿರಿಯ ಪ್ರಾಥಮಿಕ ಶಾಲೆ, 26 ಪ್ರೌಢಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1240 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 333 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಯಲ್ಲಿ…
ವಿಜಯಪುರ: ರಾಜ ಮಾತಾ ಅಹಿಲ್ಯಾಬಾಯಿ ಹೊಳ್ಕರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಎಪಿಎಂಸಿ ಬಳಿಯ ರಾಜಮಾತಾ ಅಹಿಲ್ಯಾಬಾಯಿ ಹೊಳ್ಕರ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಕಣಾಪುರ ಗುರು ಪೀಠದ ಸೋಮೇಶ್ವರ ಮಹಾರಾಜ್, ಮೇಲಗಿರೇಶ್ವರ ಗದ್ದುಗೆ ಶ್ರೀಗಳಾದ ಭೀಮಶಿ ಬಳಗಾನೂರ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಜವಾಹಾರ ಗೋಸಾವಿ, ರಾಜಶೇಖರ ಮಗಿಮಠ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟೆ, ಪ್ರೇಮಾನಂದ ಬಿರಾದಾರ, ಮಳುಗೌಡ ಬಿರಾದಾರ, ವಿವಿಧ ಸಮಾಜದ ಮುಖಂಡರಾದ ಅಶೋಕ ಬೆಲ್ಲದ, ಯಲಗೊಂಡ ಬಾಗಾದಿ, ರಮೇಶ ಪಡಸಲಗಿ, ಬಸವರಾಜ ಗೊಳಸಂಗಿ, ಕಾಂತು ಸಿಂಧೆ, ಬಾಬು ಶಿರಶ್ಯಾಡ, ವಿಕ್ರಮ ಗಾಯಕವಾಡ, ಬಸವರಾಜ ಲವಗಿ, ಅಮೋಗಿ ಕರಂಡೇ, ಕರೇಪ್ಪ ಬಸ್ತಾಳ, ಹಣಮಂತ ಬಿದರಿ, ವಿಠ್ಠಲ ಶಿವಣಗಿ, ಶಂಕರ ಹೂಗಾರ, ಪರಶು ತಳೇವಾಡ, ಭೀಮು ಮಳೆಪ್ಪನವರ, ಪ್ರಕಾಶ ಚವ್ಹಾಣ, ಜಗದೀಶ ಶಿಂಗಾಡಿ ಇದ್ದರು.
ಆಲಮೇಲ: ಪಟ್ಟಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಲಮೇಲದ ಯೋಗೋತ್ಸವ ಸಮಿತಿ ಸಹಯೋಗದೊಂದಿಗೆ ೨೧ ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅದರ ಜಾಗೃತಿಗಾಗಿ ಶುಕ್ರವಾರ ಬೆಳಗ್ಗೆ ಪಟ್ಟಣದೆಲ್ಲೆಡೆ ಪಾದಯಾತ್ರೆ ಮೂಲಕ ಪ್ರಭಾತ ಪೇರಿ ಹಮ್ಮಿಕೊಂಡು ಮನೆ ಮನೆಗೆ ತರಳಿ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪಿನಲ್ಲಿ ಜೂನ್ ೨ ರಂದು ಬಾನುವಾರ ಬೆಳಗ್ಗೆ ೫:೩೦ ಗಟೆಗೆ ಯೋಗೋತ್ಸವ ಪ್ರಾರಂಬಗೊಳ್ಳಲಿದೆ ನಿರಂತರವಾಗಿ ೨೧ ದಿನಗಳ ಕಾಲ ನಡೆಯಲಿದೆ. ಮತ್ತು ಸಾಯಂಕಾಲ ೭ ಗಂಟೆಯಿಂದ ೮ ಗಂಟೆವರೆಗೆ ಭಜನೆ ಮತ್ತು ಆದ್ಯಾತ್ಮಿಕ ಪ್ರವಚನ ನಡೆಯಲಿದೆ.ಈ ಕಾರ್ಯಕ್ರಮವನ್ನು ಹಿಮಾಲಯದ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮ ಪೂಜ್ಯ ನಿರಂಜನ ಶ್ರೀಗಳು ನಡೆಸಿಕೊಡಲಿದ್ದಾರೆ.ಅಳ್ಳೊಳಿಮಠದ ಶ್ರೀಶೈಲಯ್ಯಮಹಾಸ್ವಾಮಿ, ನಿತ್ಯಾನಂದ ಆರೂಢ ಮಠದ ಬಸವಲಿಂಗ ಶರಣರು, ಯೋಗೋತ್ಸವ ಸಮಿತಿಯ ಮುಖಂಡರಾದ ಡಾ| ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ನಿವೃತ ಪ್ರಾಚಾಯ್ ಎನ್.ಎ. ಬಿರಾದಾರ.…
ಸಿಂದಗಿ: ಈ ಬಾರಿ ಶೈಕ್ಷಣಿಕ ಬಲವರ್ಧನೆ ಎಂಬ ಅಡಿಬರಹದಲ್ಲಿ ಮಕ್ಕಳಿಗೆ ಪಾಠವನ್ನು ಹೇಳಲಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹೇಳಿದರು.ಪಟ್ಟಣದ ಬಸವ ನಗರದಲ್ಲಿರುವ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ೨೦೨೪-೨೫ನೆಯ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾರದಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಧ್ಯಯನದಿಂದ ಯಾರು ಹಿಂದೆ ಉಳಿಯಬಾರದು. ಮಕ್ಕಳು ವಿದ್ಯಾಭ್ಯಾಸದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ಆತ್ಮ ವಿಶ್ವಾಸವಿದ್ದರೆ ಯಾವುದೇ ಭಾಷೆ ಕಲಿಯನಹುದು ಎಂದು ಸಲಹೆ ನೀಡಿದರು.ಈ ವೇಳೆ ಸಿಆರ್‌ಪಿ ನೀಲಕಂಠ ತಿಳಗೂಳ ಮಾತನಾಡಿ, ಸರಕಾರದ ಎಲ್ಲ ಯೋಜನೆಗಳನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.ಶೈಕ್ಷಣಿಕ ವರ್ಷದ ಮೊದಲ ದಿನದಂದು ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಪುಷ್ಪಗುಚ್ಚ, ಪುಸ್ತಕ, ಪೆನ್ನು, ಹಣ್ಣಿನ ರಸ, ಸಿಹಿ ಪದಾರ್ಥ ನೀಡಿ ನೀಡಿ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶರಣಬಸವ ಲಂಗೋಟಿ, ಆಯ್.ಎಮ್.ವಾಲೀಕಾರ, ಎ.ಕೆ.ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.
ಸಿಂದಗಿ: ಕಳೆದ ಕೆಲ ದಿನಗಳ ಹಿಂದೆ ಅಕ್ರಮ ಮರಳು ಸಾಗಾಟ ಕುರಿತು ಸಿಂದಗಿ ತಾಲೂಕು ವರದಿಗಾರ ಗುಂಡು ಕುಲಕರ್ಣಿ ವರದಿ ಮಾಡಿದ ಹಿನ್ನಲೆಯಲ್ಲಿ ಸಿಂದಗಿ ಸ್ಥಳೀಯ ಪೋಲಿಸ್ ಇಲಾಖೆ ಅಧಿಕಾರಿಗಳು ವರದಿಗಾರನನ್ನು ಮಧ್ಯರಾತ್ರಿ ಅಪಹರಿಸಿ ಜೀವ ಬೆದರಿಕೆ ಹಾಕಿದ ಕುರಿತು ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮತ್ತು ಸಿಎಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಗುಂಡು ಕುಲಕರ್ಣಿ ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡು ಕುಲಕರ್ಣಿ ಅವರನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಪಹರಿಸಿ ಹೊರವಲಯಕ್ಕೆ ಕರೆದೊಯ್ದು ಜೀವ ಬೆದರಕೆ ಹಾಕಿದ್ದಾರೆ ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನನಗೆ ಜೀವ ಭಯವಿದೆ ಎಂದು ಗುಂಡು ಕುಲಕರ್ಣಿ ಅವರು ನಮ್ಮ ಸಂಘಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅವರಿಗೆ ಸ್ಪಂದಿಸಿ ಸುದ್ದಿ ಮಾಡುವುದು ಪತ್ರಕರ್ತರ ಕರ್ತವ್ಯ. ಮಾಡಿರುವ ಸುದ್ದಿಯನ್ನು ನೋಡಿದ ಮೇಲಾಧಿಕಾರಿಗಳು…
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ವಿಜಯಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ದುಷ್ಪರಿಣಾಮಗಳು ಬೀರುತ್ತಿದ್ದು, ಇದಕ್ಕೆ ಕಡಿವಾಣ ಅತ್ಯವಶ್ಯಕವಾಗಿದ್ದು, ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಹತ್ತಿರವಿರುವ ಗಾಂಧಿಭವನದ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.ಸಮಾಜದ ಮಕ್ಕಳು, ಯುವಜನಾಂಗ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿವೆ. ಈ ವಿಷಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ…
ವಿಜಯಪುರ: ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಸೋಲಾಪೂರಕರ, ಗೌರವ ಕಾರ್ಯದರ್ಶಿ ಮುಕುಂದ ಕುಲಕರ್ಣಿ, ಉಪಾಧ್ಯಕ್ಷರಾದ ವ್ಹಿ.ಎಸ್.ಗಾಯಿ, ಜಂಟಿ ಗೌರವ ಕಾರ್ಯದರ್ಶಿಗಳಾದ ಆರ್.ಎಸ್. ದೇಶಪಾಂಡೆ, ಕೆಬಿಎಸ್ ನಂ. ೦೪ ಸಿಆರ್‌ಪಿಯಾಧ ಶ್ರೀಮತಿ ಗೀತಾ ತಳಕಲ್, ಶ್ರೀ ರುಕ್ಮಾಂಗದ ಪ್ರಾಥಮಿಕ, ಬಾಲಕ ಮತ್ತು ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಗುರುಗಳು ಮತ್ತು ಸಿಬ್ಬಂಧಿವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
