ಕಲಕೇರಿ: ಚಿಕ್ಕ ಮಕ್ಕಳಿಗೆ ಅಂಗನವಾಡಿಗಳು ಆಶಾಕಿರಣ ಇಂತಹ ಅಂಗನವಾಡಿಗಳು ಸುಧಾರಣೆಯಾಗಬೇಕಾದರೆ ಕಲಿಕೆಗೆ ಪೂರಕವಾದ ಸಾಮಗ್ರಿಗಳು ಬೇಕು. ಪ್ರತಿ ಹಳ್ಳಿಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಸಾಮಗ್ರಿಗಳನ್ನು ಸದ್ಬಳಕೆ ಮಾಡಿದಾಗ ಮಾತ್ರ ಯೋಜನೆ ಸಾರ್ಥಕತೆಯಾಗುತ್ತದೆ ಎಂದು ಕೆರುಟಗಿ ಹಿರೇಮಠದ ಶಿವಬಸವ ಶಿವಾಚಾರ್ಯರು ಹೇಳಿದರು.
ಸಮೀಪದ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಸತ್ಯವ್ವ ಪರಶುರಾಮ ದೊಡಮನಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನಮಗೆ ಎರಡು ಕಣ್ಣುಗಳಿದ್ದಂತೆ ಆಟದೊಂದಿಗೆ ಪಾಠ, ಆರೋಗ್ಯ ರಕ್ಷಣೆಯಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಎ ಟಿ ಅಂಗಡಿ ಮಾತನಾಡಿ, ತಾಲೂಕು ಪಂಚಾಯತ್ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಭಾರತಿ ಚಲುವಯ್ಯ ಅವರ ಮಾರ್ಗದರ್ಶನದಂತೆ ಕಿಟ್ ನೀಡಿದ್ದೇವೆ ಎಂದರು.
ಬಾಬು ರಾಠೋಡ ಮಾತನಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆರೂಟಗಿ, ತಿಳಗೂಳ, ಕುದರಗುಂಡ ಮತ್ತು ಕೆರೂಟಗಿ ಎಲ್ ಟಿ ಯ ಎಲ್ಲಾ ಅಂಗನವಾಡಿಗಳಿಗೆ ೭ ಟ್ರೇಸರಿ, ೬ ರ‍್ಯಾಕ್, ೮೦ ಕುರ್ಚಿ, ೬ ರೌಂಡ್ ಟೇಬಲ್, ಆಶಾ ಕಾರ್ಯಕರ್ತೆಯರಿಗೆ ೭ ಬಿ ಪಿ ಶುಗರ್ ಚೆಕ್ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರ ಪುತ್ರರಾದ ಶಂಕ್ರಪ್ಪ ಸಂಧಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಶ್ರೀಮತಿ ಎನ್ ಸಜ್ಜನ, ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ ಅಶೋಕ ಗುಡಿಸಲಮನಿ, ಬಾಬು ಮೇಲಿನಮನಿ, ಭೀಮು ಬುಳ್ಳಾ, ರವಿ ಪೂಜಾರಿ, ಸಿದ್ರಾಮ ಮಾದರ, ಪಂಚಾಯತ್ ಸಿಬ್ಬಂದಿಗಳಾದ ಎ ಎಸ್ ಮುಜಾವರ, ರವಿ ನಾಯಕ, ಕಾಂತು ರಾಠೋಡ, ಮಲ್ಲಮ್ಮ ಸಜ್ಜನ, ದೇವಿಂದ್ರ, ಸಿದ್ರಾಮ ಸೇರಿದಂತೆ ಎಲ್ಲಾ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಊರಿನ ಹಿರಿಯರು ಇದ್ದರು. ದಾನೇಶ ಕಲಕೇರಿ ಹಾಗೂ ರವಿ ನಾಯಕ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

