ಆಲಮೇಲ: ಪಟ್ಟಣದ ಪ್ರಾಚೀನ ಕಾಲದ ವಿಶ್ವೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತವಾಗಿ ಬಸವ ಪುರಾಣ ಪ್ರವಚನ ಸಾಯಂಕಾಲ ೭ ರಿಂದ೮ ರವರೆಗೆ ಪರಮಪೂಜ್ಯ ಪಂಚಾಕ್ಷರಿ ದೇವರು ತಾ.ಚಿಂಚೋಳಿ ಇವರ ವಾಣಿಯಿಂದ ಕಲ್ಯಾಣ ಕುಮಾರ ಹಾಗೂ ರಾಜು ಇವರ ಸಂಗೀತ ಸಂಯೋಜನೆಯಲ್ಲಿ ಸಾಗಿಬರುವುದು.
ಬಸವ ಪುರಾಣ ಪ್ರವಚನಕ್ಕೆ ಕಾರ್ಯಕ್ರಮದಲ್ಲಿ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯ ಆಡಳಿತಾಧಿಕಾರಿ ಪಾರ್ಥಿಬನ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಗುಂದಗಿ, ಬಿಕೆ. ರೇಣುಕಾ ಅಕ್ಕನವರು, ಶಂಕರಲಿಂಗ ಮಹಾರಾಜರು, ಗುರುಲಿಂಗ ಶಿವಾಚಾರ್ಯರು, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪ್ರಭು ವಾಲಿಕಾರ, ಪಿ.ಎಸ್. ಐ ಅರವಿಂದ ಅಂಗಡಿ. ಮಾಜಿ.ಗ್ರಾ.ಪಂ ಅಧ್ಯಕ್ಷ ಹನಮಂತ ಹೂಗಾರ, ಕಮಿಟಿ ಅಧ್ಯಕ್ಷ ಬಸವರಾಜ ತೆಲ್ಲೂರ, ವ್ಯಾಪಾರಿ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ, ಮತ್ತಿತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

