Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಕ್ರಿಯಾಶೀಲರಾದರೆ ಮಾತ್ರ ಸ್ಪರ್ಧಾ ಜಗತ್ತನ್ನು ಧೈರ್ಯವಾಗಿ ಎದುರಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಶಂಕರಗೌಡ ಸೋಮನಾಳ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕ್ರತಿಕ, ಕ್ರೀಡೆ, ಎನ್ಎಸ್ಎಸ್ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿತುಕೊಂಡು ಅಗತ್ಯ ಸಿದ್ಧತೆ ಮಾಡಿಕೊಂಡರೆ ಖಂಡಿತ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆದುಕೊಳ್ಳಬಹುದು. ಭಾರತೀಯ ಆಡಳಿತ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬಹದು. ಅದರ ಸಿದ್ಧತೆ ಹೇಗೆ ಮಾಡಿಕೊಳ್ಳಬಹುದು ಎಂಬುವದರ ಮಾಹಿತಿ ನೀಡಿದರು.ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿ ಶಿಕ್ಷಣಕ್ಕೆ ಸಿಮೀತಗೊಳಿಸದೇ ಉನ್ನತ ಶಿಕ್ಷಣವನ್ನು ಪಡೆಯಲು ಮುಂದಾಗಬೇಕು. ಉನ್ನತ ಶಿಕ್ಷಣವನ್ನು ಪಡೆದುಕೊಂಡು ಉನ್ನತ ಸ್ಥಾನಮಾನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ವಿಜಯಪುರ ಜಿಲ್ಲೆಯ ಇತಿಹಾಸ ಸ್ವತಂತ್ರ ಹೋರಾಟಗಾರರ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ…
ಬಸವನಬಾಗೇವಾಡಿ: ಅಖಿಲ ಕರ್ನಾಟಕ ಬಂಜಾರಾ ಧರ್ಮಗುರುಗಳ ಮಹಾಸಭಾದಿಂದ ಆ. 11 ರಿಂದ ಸಂತರ ನಡೆ ತಾಂಡಾ ಕಡೆ ಎಂಬ ಕಾರ್ಯಕ್ರಮದ ಮೂಲಕ ಜಿಲ್ಲೆ ಪ್ರತಿ ತಾಂಡಾಗಳಲ್ಲಿ ಭೋಗ ಭಂಡಾರ ಹಾಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠದ ಶಾಖಾ ಮಠದ ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಜಾರ ಸಂಸ್ಕ್ರತಿ ಸಂರಕ್ಷಣೆ, ಉದ್ಯೋಗ, ಶಿಕ್ಷಣ, ಮತಾಂತರ ತಡೆಗಟ್ಟುವಿಕೆ,ಬಾಂಧವರು ದುಶ್ಚಟಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ಮದುವೆಯಲ್ಲಿ ವರದಕ್ಷಿಣೆ ತೆಗೆದುಕೊಳ್ಳಬಾರದು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಸೇರಿದಂತೆ ಬಂಜಾರ ಬಾಂಧವರಿಗೆ ಧರ್ಮ ಸಂದೇಶಗಳನ್ನು ಮುಟ್ಟಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಆ.11 ರಂದು ನಿಡಗುಂದಿ ತಾಂಡಾದಿಂದ ಜನಜಾಗೃತಿ ಯಾತ್ರೆ ಆರಂಭವಾಗಿ ದೇವಲಾಪೂರ ತಾಂಡಾ, ಆಲಮಟ್ಟಿ ಆರ್ಎಸ್ ತಾಂಡಾ, ಚಿಮ್ಮಲಗಿ ತಾಂಡಾ, ಗಣಿ ತಾಂಡಾ, ಮಾಡಗಿ ತಾಂಡಾ, ಸೇರಿದಂತೆ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲೂಕಿನಲ್ಲಿ ಬರುವ ಎಲ್ಲ ತಾಂಡಾಗಳಿಗೆ…
ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಇದೇ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಜಾಗೆಯನ್ನು ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ವಿಲಿಯಂ ರಾಜಶೇಖರ ಪರಿಶೀಲಿಸಿದರು.ನಂತರ ಮಾತನಾಡಿದ ಅವರು, ಜಾತ್ರೆಯಂಗವಾಗಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ನಮ್ಮ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು. ಮೇಳದಲ್ಲಿ ನಮ್ಮ ಇಲಾಖೆಯಿಂದ ಒಂದು ಮಳಿಗೆಯನ್ನು ಹಾಕುವ ಮೂಲಕ ರೈತ ಬಾಂಧವರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುವದು. ಈ ಮೇಳದಲ್ಲಿ ಕೃಷಿ ಸಂಬಂಧಿತ ಉಪಕರಣಗಳ ಮಳಿಗೆಗಳು, ಬೀಜ-ಗೊಬ್ಬರ ಮಳಿಗೆಗಳು ಇರಲಿವೆ. ರೈತ ಬಾಂಧವರು ಈ ಕೃಷಿ ಮೇಳದ ಸದುಪಯೋಗ ಪಡೆಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಎಂ.ಜಿ.ಆದಿಗೊಂಡ, ಅಶೋಕ ಕಲ್ಲೂರ, ಶ್ರೀಕಾಂತ ಪಟ್ಟಣಶೆಟ್ಟಿ, ಸಂಜೀವ ಬಿರಾದಾರ ಇದ್ದರು.
ಆಲಮಟ್ಟಿ: ಇಂದಿನ ಯುವಕರಲ್ಲಿ ಮೊದಲು ದೇಶಭಕ್ತಿ, ರಾಷ್ಟç ಪ್ರೇಮ ಮೂಡಿಬರಲಿ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೇಳಿದರು. ಇಲ್ಲಿನ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಗೆ ಪ್ರಥಮ ಆದ್ಯತೆ ನೀಡಬೇಕೆಂದರು. ೧೫೦ ಕೋಟಿ ಜನಸಂಖ್ಯೆ ಹೊಂದಿರುವ ಬಲಾಢ್ಯ ರಾಷ್ಟ್ರ ನಮ್ಮ ಭಾರತ ದೇಶ.ಸುಭದ್ರ ರಾಷ್ಟç ಇದ್ದರೆ ನೆಮ್ಮದಿಯಿಂದ ನಾವು ಬದುಕಲು ಸಾಧ್ಯ. ಆ ದಿಸೆಯಲ್ಲಿ ಯುವಜನತೆ ರಾಷ್ಟ್ರೀಯ ಹಬ್ಬಗಳ ಮಹತ್ವ ಅರಿಯಬೇಕು ಎಂದರು. ಈ ದೇಶದ ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನದ ಮೂಲಕ ತಮ್ಮನ್ನು ತಾವು ಅಪಿ೯ಸಿಕೊಂಡು ಅಸಂಖ್ಯಾತ ಮಹನೀಯರು ಹೋರಾಡಿ ಸ್ವಾತಂತ್ರ‍್ಯ ದಕ್ಕಿಸಿಕೊಟ್ಟಿದ್ದಾರೆ. ಅನೇಕ ಮಹನೀಯರು ಹುತಾತ್ಮರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಸ್ಮರಣೀಯರು.ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತಿç, ಡಾ.ಅಂಬೇಡ್ಕರ್, ಚಂದ್ರಶೇಖರ ಆಜಾದ್ ಸೇರಿದಂತೆ ಹಲವಾರು…
ದೇವರಹಿಪ್ಪರಗಿ: ರೈತ ಸಮುದಾಯದ ಒಳಿತಿಗಾಗಿ ತಾಲ್ಲೂಕು ಕೇಂದ್ರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆರಂಭಕ್ಕೆ ಕ್ರಮ ವಹಿಸುವಂತೆ ಆಗ್ರಹಿಸಿ ತಾಲ್ಲೂಕು ರೈತಸಂಘ ಪದಾಧಿಕಾರಿಗಳು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಗುರುವಾರ ಸ್ವಾತಂತ್ರೋತ್ಸವ ಧ್ವಜಾರೋಹಣದ ನಂತರ ಶಾಸಕರನ್ನು ಭೇಟಿ ಮಾಡಿದ ರೈತಸಂಘದ ಪದಾಧಿಕಾರಿಗಳು, ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನಗಳು ಬೆಳವಣಿಗೆ ಈಗ ಅಧಿಕವಾಗುತ್ತಿದೆ. ಆದರೆ ಮಧ್ಯವರ್ತಿಗಳ ಮತ್ತು ವ್ಯಾಪಾರಿಗಳ ಶೋಷಣೆಯಿಂದ ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗದೇ ಪರದಾಡುವಂತಾಗಿದೆ. ಮಧ್ಯವರ್ತಿಗಳ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಲು ಹಾಗೂ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಸಕಾಲಿಕ ಪಾವತಿಗೆ ಎಪಿಎಂಸಿ ಆರಂಭ ಈಗ ಅಗತ್ಯವಾಗಿದೆ. ಆದ್ದರಿಂದ ನಮ್ಮ ನೂತನ ತಾಲ್ಲೂಕಿನ ರೈತ ಸಮುದಾಯಕ್ಕೆ ಅನುಕೂಲವಾಗಲು ಕೂಡಲೇ ಮಾರುಕಟ್ಟೆ ಸ್ಥಾಪನೆಗೆ ಕ್ರಮವಹಿಸಲು ಆಗ್ರಹಿಸಿದರು.ರೈತರ ಮನವಿ ಸ್ವೀಕರಿಸಿದ ಶಾಸಕರು ಮಾರುಕಟ್ಟೆಯ ಬಗ್ಗೆ ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು.ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಸಂಪತ್ ಜಮಾದಾರ, ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರಾಮು ದೇಸಾಯಿ, ಪಟ್ಟಣದ…
ತಿಕೋಟಾ: ಸುಧೀರ್ಘ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿಯೊಬ್ಬರು ತಾವು ಸೇವೆ ಸಲ್ಲಿಸಿದ ಶಾಲೆಗೆ ₹50 ಸಾವಿರ ದೇಣಿಗೆ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸವಿತಾ ಹತ್ತಿಕಾಳ ಎಂಬ ಶಿಕ್ಷಕಿ ಇತ್ತೀಚೆಗೆ ಹೊನವಾಡ ಕೆಜಿಎಸ್ ಶಾಲೆಗೆ ವರ್ಗಾವಣೆ ಹೊಂದಿದ್ದು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ, ಗ್ರಾಮದ ಹಿರಿಯರ ಹಾಗೂ ಎಸ್ಡಿಎಂಸಿ ಸಮ್ಮುಖದಲ್ಲಿ ಶಾಲೆಗೆ 50 ಸಾವಿರ ದೇಣಿಗೆ ಹಣ ನೀಡಿ ಮಕ್ಕಳನ್ನು ಕಂಡು ಭಾವುಕರಾದರು.ದೇಣಿಗೆ ನೀಡಿದ ₹ 50 ಸಾವಿರ ಹಣವನ್ನು ಎಸ್ಡಿಎಂಸಿ ಹಾಗೂ ಮುಖ್ಯಗುರುಗಳ ಜಂಟಿ ಖಾತೆಯಲ್ಲಿ ಠೇವಣಿ ಇಟ್ಟು ಅದರಿಂದ ಪ್ರತಿ ವರ್ಷ ಬರುವ ಬಡ್ಡಿ ಹಣದಲ್ಲಿ ಐದನೇ, ಆರನೇ ಹಾಗೂ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.ವೃತ್ತಿ ಬದುಕಿನಲ್ಲಿ ಗ್ರಾಮಸ್ಥರ…
ವಿಶ್ವದರ್ಜೆಯಲ್ಲಿ ಪ್ರವಾಸಿ ತಾಣಗಳ ಆಯ್ಕೆಗೆ ದೇಖೋ ಅಪನಾ ದೇಶ ಕಾರ್ಯಕ್ರಮ ವಿಜಯಪುರ: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸಾರ್ವಜನಿಕರಿಗೆ ಸುವರ್ಣಾವಕಾಶವಿದ್ದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆಗೊಳ್ಳುವಂತೆ ಮಾಡಲು https://innovationindia.mygov.in/dekho-apna-desh/ಲಿಂಕ್ ಮೂಲಕ ಜಿಲ್ಲೆಯ ಪ್ರವಾಸಿಗರು, ಸಾರ್ವಜನಿಕರು ಓಟ್ ಮಾಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ. ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲ ವರ್ಗಗಳಾದ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ಮೇಲ್ದರ್ಜೆಯಲ್ಲಿ ಅಭಿವೃದ್ದಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ದೇಖೋ ಅಪನಾ ದೇಶ Peoಠಿಟe’s ಅhoiಛಿe ೨೦೨೪ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಓಟ್ ಮಾಡಲು ದಿನಾಂಕ : ೧೫-೦೯-೨೦೨೪ ಕೊನೆಯ ದಿನಾಂಕವಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯಲ್ಲಿ ಸೇರ್ಪಡೆಗೊಳಿಸಲು ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಿಂಕ್‌ನ ಮೂಲಕ ಓಟ್ ಮಾಡುವಂತೆ ಪ್ರಕಟಣೆ ತಿಳಿಸಿದೆ.
ವಿಜಯಪುರ: ವಿದ್ಯಾರ್ಥಿಗಳು ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ತಲುಪಲು ಸಾಧ್ಯ. ಜೀವನದಲ್ಲಿ ಯಶಸ್ವಿಯಾಗಲು ಸಕಾರಾತ್ಮಕ ಮನೋಭಾವ ಹೊಂದಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ನಗರದ ಆಲಕುಂಟೆ ನಗರದಲ್ಲಿ ಪಿನ್ಯಾಕಲ್ ಕ್ಲಾಸಿಸ್ ವತಿಯಿಂದ ‘ವರ್ಷದ ಸಂಸ್ಕೃತಿ ಸಂಭ್ರಮ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು, ಸ್ವಯಂ ಶಿಸ್ತು, ಬದ್ಧತೆಯೊಂದಿಗೆ ಗಂಭೀರವಾಗಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಅವರ ಪರಿಶ್ರಮದೊಂದಿಗೆ ಪೋಷಕರ ಪ್ರೋತ್ಸಾಹ ಬಹುಮುಖ್ಯ.ವಿದ್ಯಾರ್ಥಿಗಳಿಗೆ ‘ಪುಸ್ತಕ ಹಿಡಿ ಮೊಬೈಲ್ ಬಿಡಿ’ ಎಂದು ಕಿವಿಮಾತು ಹೇಳುತ್ತಾ, ಮಕ್ಕಳು ಪಾಲಕರ ಕಷ್ಟವನ್ನು ಅರಿತು ಚೆನ್ನಾಗಿ ಅಭ್ಯಾಸ ಮಾಡಿದಾಗ ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತದೆ ಎಂದರು.ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ನಮ್ಮ ಜೀವನ ಶೈಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಆಗಬೇಕು. ಶಿಕ್ಷಣದ ಮೂಲಕ ಮಕ್ಕಳು ಸಹಿಷ್ಣುತೆ, ದಯೆ ಮತ್ತು ಸಮಾಜದ ಜವಾಬ್ದಾರಿಗಳ ಮಹತ್ವವನ್ನು…
ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆ ಹತ್ಯೆ ಪ್ರಕರಣ ವಿಜಯಪುರ: ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಖಂಡಿಸಿ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಇಂದು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರ ವೈದ್ಯರು, ಗಾಂಧಿಚೌಕ್, ಬಸವೇಶ್ವರ ಚೌಕ್ ಮೂಲಕ ಸಂಚರಿಸಿ ಡಾ. ಬಿ. ಆರ್. ಅಂಬೇಡ್ಕರ್ ಚೌಕಿನಲ್ಲಿ ಮಾನವ ಸರಪಳಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಟಿ. ಭೂಬಾಲನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರ್ಯಾಲಿ ಸಂಯೋಜಕ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಬೆಂಟೂರ, ಕೊಲ್ಕತ್ತದಲ್ಲಿ ನಡೆದ ಯುವವೈದ್ಯೆಯ ಮೇಲಿನ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ 2012 ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬರ್ಲಾಡ್ ನವರ್ರೇ ಎಂಬಲ್ಲಿ ನಡೆಯುತ್ತಿದ್ದ ಕ್ರಾಸ್ ಕಂಟ್ರಿ ಓಟದಲ್ಲಿಕೀನ್ಯಾದ ನೀಗ್ರೋ ಓಟಗಾರ ಅಬೆಲ್ ಮಥಾಯಿ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದ, ಆತನ ಹಿಂದೆಯೇ ಸ್ಪೇನ್ ದೇಶದ ಇವಾನ್ ಫರ್ನಾಂಡಿಸ್ ಓಡಿ ಬರುತ್ತಿದ್ದನು. ಇನ್ನೇನು ಓಟದ ಹಾದಿಯ ಅಂತಿಮ ರೇಖೆಯನ್ನು ಮುಟ್ಟುವ ಸಮಯದಲ್ಲಿ ಅಬೆಲ್ ಅಂತಿಮ ಗೆರೆಯನ್ನು ತಪ್ಪಾಗಿ ಊಹಿಸಿಕೊಂಡು ಓಟವನ್ನು ಪೂರೈಸಿದ್ದೇನೆ ಎಂದು ನಿಧಾನವಾಗಿ ಓಟವನ್ನು ಇನ್ನೇನು ನಿಲ್ಲಿಸಬೇಕು ಎಂಬಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಇವಾನ್ ಫರ್ನಾಂಡಿಸ್ ಗೆ ಅಬೆಲ್‌ಗೆ ಉಂಟಾದ ಗೊಂದಲದ ಅರಿವಾಯಿತು. ಸ್ಪಾನಿಷ್ ಭಾಷೆಯಲ್ಲಿ ಇನ್ನೂ ಮುಂದೆ ಹೋಗು, ಅಂತಿಮ ಗೆರೆ ಮುಂದೆ ಇದೆ ಎಂದು ಜೋರಾಗಿ ಕೂಗಿದನಾದರೂ ಭಾಷೆ ಗೊತ್ತಿಲ್ಲದ ಕೀನ್ಯದ ಅಬೆಲ್ ಮತ್ತಷ್ಟು ಗೊಂದಲಕ್ಕೀಡಾದನು. ಆಗ ಇವಾನ್ ಅಬೆಲ್ ನನ್ನು ಮುಂದಕ್ಕೆ ತಳ್ಳುತ್ತಾ, ತಾನು ನಿಧಾನವಾಗಿ ಓಡುತ್ತಾ ಅಬೆಲ್ ಅಂತಿಮ ರೇಖೆಯನ್ನು ಮುಟ್ಟಿದ ಮೇಲೆ ತಾನು ಆತನ ಹಿಂದೆ…
