ವಿಶ್ವದರ್ಜೆಯಲ್ಲಿ ಪ್ರವಾಸಿ ತಾಣಗಳ ಆಯ್ಕೆಗೆ ದೇಖೋ ಅಪನಾ ದೇಶ ಕಾರ್ಯಕ್ರಮ
ವಿಜಯಪುರ: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸಾರ್ವಜನಿಕರಿಗೆ ಸುವರ್ಣಾವಕಾಶವಿದ್ದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆಗೊಳ್ಳುವಂತೆ ಮಾಡಲು https://innovationindia.mygov.in/dekho-apna-desh/ಲಿಂಕ್ ಮೂಲಕ ಜಿಲ್ಲೆಯ ಪ್ರವಾಸಿಗರು, ಸಾರ್ವಜನಿಕರು ಓಟ್ ಮಾಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ. ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲ ವರ್ಗಗಳಾದ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ಮೇಲ್ದರ್ಜೆಯಲ್ಲಿ ಅಭಿವೃದ್ದಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ದೇಖೋ ಅಪನಾ ದೇಶ Peoಠಿಟe’s ಅhoiಛಿe ೨೦೨೪ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಓಟ್ ಮಾಡಲು ದಿನಾಂಕ : ೧೫-೦೯-೨೦೨೪ ಕೊನೆಯ ದಿನಾಂಕವಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯಲ್ಲಿ ಸೇರ್ಪಡೆಗೊಳಿಸಲು ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಿಂಕ್‌ನ ಮೂಲಕ ಓಟ್ ಮಾಡುವಂತೆ ಪ್ರಕಟಣೆ ತಿಳಿಸಿದೆ.
