Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಾಷ್ಟ್ರಕ್ಕೆ ಮೊದಲ ಆದ್ಯತೆ, ಗೌರವ ನೀಡಿ :ಹೇಮಗಿರಿಮಠ
(ರಾಜ್ಯ ) ಜಿಲ್ಲೆ

ರಾಷ್ಟ್ರಕ್ಕೆ ಮೊದಲ ಆದ್ಯತೆ, ಗೌರವ ನೀಡಿ :ಹೇಮಗಿರಿಮಠ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ: ಇಂದಿನ ಯುವಕರಲ್ಲಿ ಮೊದಲು ದೇಶಭಕ್ತಿ, ರಾಷ್ಟç ಪ್ರೇಮ ಮೂಡಿಬರಲಿ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೇಳಿದರು.
     ಇಲ್ಲಿನ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಗೆ ಪ್ರಥಮ ಆದ್ಯತೆ ನೀಡಬೇಕೆಂದರು.
     ೧೫೦ ಕೋಟಿ ಜನಸಂಖ್ಯೆ ಹೊಂದಿರುವ ಬಲಾಢ್ಯ ರಾಷ್ಟ್ರ ನಮ್ಮ ಭಾರತ ದೇಶ.ಸುಭದ್ರ ರಾಷ್ಟç ಇದ್ದರೆ ನೆಮ್ಮದಿಯಿಂದ ನಾವು ಬದುಕಲು ಸಾಧ್ಯ. ಆ ದಿಸೆಯಲ್ಲಿ ಯುವಜನತೆ ರಾಷ್ಟ್ರೀಯ ಹಬ್ಬಗಳ ಮಹತ್ವ ಅರಿಯಬೇಕು ಎಂದರು.
     ಈ ದೇಶದ ಸ್ವಾತಂತ್ರ‍್ಯಕ್ಕಾಗಿ ತ್ಯಾಗ, ಬಲಿದಾನದ ಮೂಲಕ ತಮ್ಮನ್ನು ತಾವು ಅಪಿ೯ಸಿಕೊಂಡು ಅಸಂಖ್ಯಾತ ಮಹನೀಯರು ಹೋರಾಡಿ ಸ್ವಾತಂತ್ರ‍್ಯ ದಕ್ಕಿಸಿಕೊಟ್ಟಿದ್ದಾರೆ. ಅನೇಕ ಮಹನೀಯರು ಹುತಾತ್ಮರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಸ್ಮರಣೀಯರು.ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತಿç, ಡಾ.ಅಂಬೇಡ್ಕರ್, ಚಂದ್ರಶೇಖರ ಆಜಾದ್ ಸೇರಿದಂತೆ ಹಲವಾರು ನಾಯಕರ ಅವಿರತ ಹೋರಾಟದ ಫಲವಾಗಿ ಇಂದು ನಾವೆಲ್ಲರೂ ರಾಷ್ಟ್ರೀಯತೆ ಛಾಪುನಲ್ಲಿದ್ದೆವೆ.ಸ್ವಚ್ಛಂದ ವ್ಯಕ್ತಿ ಸ್ವಾತಂತ್ರ‍್ಯ, ಅಭಿವ್ಯಕ್ತಿ ಸ್ವಾತಂತ್ರ‍್ಯ, ಧಾರ್ಮಿಕ ಸ್ವಾತಂತ್ರ‍್ಯ ಸೇರಿದಂತೆ ಅನೇಕ ಸ್ತರದ ಸ್ವಾತಂತ್ರ‍್ಯಗಳು ಲಭಿಸಿವೆ ಎಂದರು.
   ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಮಾತನಾಡಿ, ಯುವಪೀಳಿಗೆ ಮಹಾತ್ಮರನ್ನು ಸ್ಮರಿಸಿಕೊಂಡು ಅವರ ಆಶಯಗಳಿಗೆ ಸ್ಪಂದಿಸಿ ವ್ಯಕ್ತಿತ್ವ ಮೆರೆಯಬೇಕು. ದೇಶದ ಬಗ್ಗೆ ಒಲವು, ಪ್ರೀತಿ,ಪ್ರೇಮಭಾವನೆ ಅಂಕುರಗೊಳಿಸಿಕೊಳ್ಳಬೇಕು. ಕಲಿಕಾ ಓದಿನೊಂದಿಗೆ ಈ ರಾಷ್ಟçದ ನೆಲ,ಜಲ,ಭಾಷೆ, ಸಂಸ್ಕೃತಿಗಳ ಬಗ್ಗೆ ಗೌರವ ಭಾವ ತಾಳಬೇಕು. ಪಠ್ಯ ಪುಸ್ತಕದಲ್ಲಿನ ಹಾಗೂ ಹೊರ ಜಗತ್ತಿನಲ್ಲಿನ ಜ್ಞಾನ ಸಂಪತ್ತು ಪಡೆದುಕೊಂಡು ಸರ್ವೋತೋಮುಖ ವ್ಯಕ್ತಿತ್ವ ವಿಕಸನದಿಂದ ಬೆಳವಣಿಗೆ ಕಾಣಬೇಕು ಎಂದರು.
      ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಚಟುವಟಿಕೆಗಳು ನೋಡುಗರ ಮನ ಸೆಳೆದವು. ದೇಶಭಕ್ತಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂತಸಗೊಂಡರು. ಆಕರ್ಷಕ ಪಥಸಂಚಲನ ನಡೆಯಿತು. 
  ಕಾಲೇಜು ಸಿಬ್ಬಂದಿ ಎಚ್.ಎನ್.ಕೆಲೂರ, ಎಂ.ಎಸ್.ಸಜ್ಜನ, ಪಿ.ವಾಯ್.ಧನಶೆಟ್ಟಿ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಧನರಾಜ ಸಿಂಗಾರಿ, ಗೀತಾ ಯಳಮೇಲಿ,ಅಂಬಿಕಾ ಇಟಗಿ, ಹಾಗೂ ಹೈಸ್ಕೂಲ್ ಸಿಬ್ಬಂದಿ ಗಂಗಾಧರ ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ್ ಗಾಳಪ್ಪಗೋಳ, ಜಗದೇವಿ ಕೆ, ಜ್ಯೋತಿ ದೊಡ್ಡೆಣ್ಣವರ, ರಿಯಾನಾ ಕಾಲೇಖಾನ ಪ್ರಾಥಮಿಕ ಮುಖ್ಯಗುರುಮಾತೆ ಕಮಲಾಕ್ಷಿ ಹಿರೇಮಠ ಸೇರಿದಂತೆ ಇತರರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಮಾದಕ ವಸ್ತುಗಳಿಂದ ಶರೀರದ ಮೇಲೆ ನೇರ ಪರಿಣಾಮ :ಪಿಎಸೈ ಸಚೀನ
    In (ರಾಜ್ಯ ) ಜಿಲ್ಲೆ
  • ಗ್ರಾಮದೇವತಾ ಜಾತ್ರಾಮಹೋತ್ಸವದಲ್ಲಿ ಗೀಗೀ ಪದಗಳ ಸಂಭ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.