Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಟದಲ್ಲಿ ಸೋತರೂ ಜನಮನ ಗೆದ್ದವನು
ವಿಶೇಷ ಲೇಖನ

ಆಟದಲ್ಲಿ ಸೋತರೂ ಜನಮನ ಗೆದ್ದವನು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

2012 ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬರ್ಲಾಡ್ ನವರ್ರೇ ಎಂಬಲ್ಲಿ ನಡೆಯುತ್ತಿದ್ದ ಕ್ರಾಸ್ ಕಂಟ್ರಿ ಓಟದಲ್ಲಿ
ಕೀನ್ಯಾದ ನೀಗ್ರೋ ಓಟಗಾರ ಅಬೆಲ್ ಮಥಾಯಿ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದ, ಆತನ ಹಿಂದೆಯೇ ಸ್ಪೇನ್ ದೇಶದ ಇವಾನ್ ಫರ್ನಾಂಡಿಸ್ ಓಡಿ ಬರುತ್ತಿದ್ದನು. ಇನ್ನೇನು ಓಟದ ಹಾದಿಯ ಅಂತಿಮ ರೇಖೆಯನ್ನು ಮುಟ್ಟುವ ಸಮಯದಲ್ಲಿ ಅಬೆಲ್ ಅಂತಿಮ ಗೆರೆಯನ್ನು ತಪ್ಪಾಗಿ ಊಹಿಸಿಕೊಂಡು ಓಟವನ್ನು ಪೂರೈಸಿದ್ದೇನೆ ಎಂದು ನಿಧಾನವಾಗಿ ಓಟವನ್ನು ಇನ್ನೇನು ನಿಲ್ಲಿಸಬೇಕು ಎಂಬಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಇವಾನ್ ಫರ್ನಾಂಡಿಸ್ ಗೆ ಅಬೆಲ್‌ಗೆ ಉಂಟಾದ ಗೊಂದಲದ ಅರಿವಾಯಿತು. ಸ್ಪಾನಿಷ್ ಭಾಷೆಯಲ್ಲಿ ಇನ್ನೂ ಮುಂದೆ ಹೋಗು, ಅಂತಿಮ ಗೆರೆ ಮುಂದೆ ಇದೆ ಎಂದು ಜೋರಾಗಿ ಕೂಗಿದನಾದರೂ ಭಾಷೆ ಗೊತ್ತಿಲ್ಲದ ಕೀನ್ಯದ ಅಬೆಲ್ ಮತ್ತಷ್ಟು ಗೊಂದಲಕ್ಕೀಡಾದನು.

ಆಗ ಇವಾನ್ ಅಬೆಲ್ ನನ್ನು ಮುಂದಕ್ಕೆ ತಳ್ಳುತ್ತಾ, ತಾನು ನಿಧಾನವಾಗಿ ಓಡುತ್ತಾ ಅಬೆಲ್ ಅಂತಿಮ ರೇಖೆಯನ್ನು ಮುಟ್ಟಿದ ಮೇಲೆ ತಾನು ಆತನ ಹಿಂದೆ ಓಡಿ ಗುರಿಯನ್ನು ತಲುಪಿದನು.

ಇವಾನ್ ಫರ್ನಾಂಡಿಸ್ ನ ಈ ನಡತೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಎಲ್ಲರೂ ಚಪ್ಪಾಳೆ ಹೊಡೆದು ಹೊಡೆಯುವ ಮೂಲಕ ಅವರಿಬ್ಬರನ್ನು ಅಭಿನಂದಿಸಿದರು.

ಈ ಕುರಿತು ಪತ್ರಕರ್ತರೊಬ್ಬರು ಇವಾನ್ ಫರ್ನಾಂಡಿಸ್ ರನ್ನು ನೀವು ಪ್ರಥಮ ಸ್ಥಾನ ಗಳಿಸಬಹುದಿತ್ತು ಎಂದು ಹೇಳಿದಾಗ ಇವಾನ್ ನಸುನಗುತ್ತಾ ‘ಅಬೆಲ್ ಈಗಾಗಲೇ ಪಂದ್ಯವನ್ನು ಗೆದ್ದಿದ್ದು ಈ ಜಯಕ್ಕೆ ಆತ ಸಂಪೂರ್ಣ ಅರ್ಹನಾದ ವ್ಯಕ್ತಿ ಎಂದು ಉತ್ತರಿಸಿದ.

ಮತ್ತೆ ಆ ಪತ್ರಕರ್ತ ‘ಪರಿಸ್ಥಿತಿಯ ಲಾಭ ಪಡೆದು ನೀವು ಗೆಲ್ಲಬಹುದಿತ್ತು?’ ಎಂದು ಹೇಳಿದಾಗ
ಇವಾನ್
“ಹಾಗಾದರೆ ನನ್ನ ಆ ರೀತಿಯ ಗೆಲುವಿಗೆ ನೀವು ಏನೆಂದು ಹೆಸರಿಸುತ್ತೀರಿ? ಹಾಗೆ ಗಳಿಸಿದ ಮೆಡಲಿಗೆ ಯಾವ ಗೌರವ ನೀಡಲು ಸಾಧ್ಯ… ಮತ್ತೂ ಹೇಳಬೇಕೆಂದರೆ ಒಬ್ಬರ ಅರಿವಿಲ್ಲದೆ ನಡೆಯುತ್ತಿದ್ದ ತಪ್ಪಿನ ಲಾಭವನ್ನು ಪಡೆದು ನಾನು ಗೆದ್ದಿದ್ದರೆ ನನ್ನ ತಾಯಿಗೆ ಹೇಗೆ ಮುಖ ತೋರಿಸಲು ಸಾಧ್ಯವಾಗುತ್ತಿತ್ತು? ನಾನು ಏನೆಂದು ನನ್ನ ತಾಯಿಗೆ ಸಮಜಾಯಿಷಿ ಕೊಡಬೇಕಿತ್ತು? ಅಸಲಿಗೆ ಅಂತಹ ಗೆಲುವಿನ ಅವಶ್ಯಕತೆ ಇದೆಯೇ?” ಎಂದು ಮರು ಪ್ರಶ್ನಿಸಿದ.

ನೋಡಿದಿರಾ ಸ್ನೇಹಿತರೆ, ಇವಾನ್ ಫರ್ನಾಂಡಿಸ್ ಮನಸ್ಸು ಮಾಡಿದ್ದರೆ ಆತ ಅಬೆಲ್ ಮಥಾಯಿಯ
ಗೊಂದಲದ ಲಾಭ ಪಡೆದು ಅಂತರರಾಷ್ಟ್ರೀಯ ಗುಡ್ಡಗಾಡು ಓಟದಲ್ಲಿ ಪ್ರಶಸ್ತಿ ಗಳಿಸಬಹುದಾಗಿತ್ತು.
ಆದರೆ ಮೌಲ್ಯಗಳನ್ನು ಎತ್ತಿ ಹಿಡಿದ ಆತ ಓಟದಲ್ಲಿ ಎರಡನೆಯ ಸ್ಥಾನ ಪಡೆದರೂ ಜನರ ಮನಸ್ಸಿನಲ್ಲಿ ಅಚ್ಚಳಿಯದ ಅಗ್ರಸ್ಥಾನ ಪಡೆದರು.
ಅವನು ಸೋತು ಗೆದ್ದವನು, ತಾನು ಸೋತು ಕ್ರೀಡಾ ಸ್ಪೂರ್ತಿಯನ್ನು, ಮೌಲ್ಯಗಳನ್ನು ಗೆಲ್ಲಿಸಿದನು .

ಪಾಲಕರು ತಮ್ಮ ಮಕ್ಕಳಲ್ಲಿ ತುಂಬಿದ ಮೌಲ್ಯಗಳು ತಲೆತಲಾಂತರವಾಗಿ ಸಾಗಿ ಇತರರಿಗೆ ಸ್ಪೂರ್ತಿಯಾಗುತ್ತವೆ . ಪಾಲಕರು ತುಂಬಿದ ಮೌಲ್ಯಗಳು ಮಕ್ಕಳ ಜೀವನವನ್ನು ಬೆಳಗುತ್ತವೆ. ಆ ಮೌಲ್ಯಗಳನ್ನು ಉಳಿಸಿ ಬೆಳೆಸುವ ಮೂಲಕ ಮಕ್ಕಳು ತಮ್ಮ ಪಾಲಕರ ಜೀವನವನ್ನು ಸಾರ್ಥಕಗೊಳಿಸುತ್ತಾರೆ. ಅಂತಿಮವಾಗಿ ತನಗೆ ಇಷ್ಟೆಲ್ಲಾ ಮೌಲ್ಯಗಳನ್ನು ಕಲಿಸಿಕೊಟ್ಟ ತಾಯಿ ಬೇರೊಬ್ಬರ ಬಲಹೀನತೆಯ ಲಾಭ ಪಡೆದರೆ ಒಪ್ಪಳು ಎಂಬ ಅರಿವಿನ ಪ್ರಜ್ಞೆ ಮಕ್ಕಳನ್ನು ತಪ್ಪುಮಾಡದಂತೆ ತಡೆಯುತ್ತದೆ.

ಇದೀಗ ಅಲ್ಲಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಹಿತ್ಯ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಒಳ್ಳೆಯದೇ ಆದರೂ ಅವರು ನೀಡುತ್ತಿರುವ ಕೆಲವು ಪ್ರಶಸ್ತಿಗಳು ಅಪಾತ್ರರಿಗೆ ಸಲ್ಲುತ್ತಿವೆ. ನಿಜವಾದ ಸಾಧಕರು ಇಂತಹ ಪ್ರಶಸ್ತಿಗಳನ್ನು ಪಡೆಯಲು ಹಿಂಜರಿದರೆ, ಮತ್ತೆ ಹಲವರು ಇಂತಹ ಪ್ರಶಸ್ತಿಗಳ ಬೆನ್ನಟ್ಟಿ ಅವುಗಳನ್ನು ಶತಾಯಗತಾಯ ಗಳಿಸುತ್ತಾರೆ.

ಇವಾನ್ ಫರ್ನಾಂಡಿಜ್ ರ ಮೌಲ್ಯಯುತ ಮಾತುಗಳು ಜನರ ಮನಕ್ಕೆ ಕವಿದಿರುವ ಮಂಕನ್ನು ತೊಡೆದು ಹಾಕಿ ಮೌಲ್ಯಯುತ ಬದುಕನ್ನು ತಮ್ಮದಾಗಿಸಿಕೊಳ್ಳುವ ಪ್ರಕ್ರಿಯೆಗೆ ತೊಡಗಿಸಲಿ ಎಂದು ಹಾರೈಸುವ..

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.