ದೇವರಹಿಪ್ಪರಗಿ: ರೈತ ಸಮುದಾಯದ ಒಳಿತಿಗಾಗಿ ತಾಲ್ಲೂಕು ಕೇಂದ್ರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆರಂಭಕ್ಕೆ ಕ್ರಮ ವಹಿಸುವಂತೆ ಆಗ್ರಹಿಸಿ ತಾಲ್ಲೂಕು ರೈತಸಂಘ ಪದಾಧಿಕಾರಿಗಳು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಗುರುವಾರ ಸ್ವಾತಂತ್ರೋತ್ಸವ ಧ್ವಜಾರೋಹಣದ ನಂತರ ಶಾಸಕರನ್ನು ಭೇಟಿ ಮಾಡಿದ ರೈತಸಂಘದ ಪದಾಧಿಕಾರಿಗಳು, ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನಗಳು ಬೆಳವಣಿಗೆ ಈಗ ಅಧಿಕವಾಗುತ್ತಿದೆ. ಆದರೆ ಮಧ್ಯವರ್ತಿಗಳ ಮತ್ತು ವ್ಯಾಪಾರಿಗಳ ಶೋಷಣೆಯಿಂದ ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗದೇ ಪರದಾಡುವಂತಾಗಿದೆ. ಮಧ್ಯವರ್ತಿಗಳ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಲು ಹಾಗೂ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಸಕಾಲಿಕ ಪಾವತಿಗೆ ಎಪಿಎಂಸಿ ಆರಂಭ ಈಗ ಅಗತ್ಯವಾಗಿದೆ. ಆದ್ದರಿಂದ ನಮ್ಮ ನೂತನ ತಾಲ್ಲೂಕಿನ ರೈತ ಸಮುದಾಯಕ್ಕೆ ಅನುಕೂಲವಾಗಲು ಕೂಡಲೇ ಮಾರುಕಟ್ಟೆ ಸ್ಥಾಪನೆಗೆ ಕ್ರಮವಹಿಸಲು ಆಗ್ರಹಿಸಿದರು.
ರೈತರ ಮನವಿ ಸ್ವೀಕರಿಸಿದ ಶಾಸಕರು ಮಾರುಕಟ್ಟೆಯ ಬಗ್ಗೆ ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು.
ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಸಂಪತ್ ಜಮಾದಾರ, ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರಾಮು ದೇಸಾಯಿ, ಪಟ್ಟಣದ ಅಧ್ಯಕ್ಷ ಅಜೀಜ್ ಯಲಗಾರ, ಸುನಂದಾ ಸೊನ್ನಹಳ್ಳಿ, ಶಾಕೀರಾ ಹೆಬ್ಬಾಳ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ) ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

