Author: editor.udayarashmi@gmail.com

ವಿಜಯಪುರ: 12 ನೇ ಶತಮಾನದ ಬಸವಣ್ಣ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕತೆ ಕ್ಷೇತ್ರಗಳ ಸಮಗ್ರ ನಾಯಕ ಎಂದು ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ತರಳಬಾಳು ಕಲಾಸಂಘ ಮತ್ತು ವಿದ್ಯಾಸಂಸ್ಥೆ ಸಿರಿಗೆರೆ ವಿದ್ಯಾರ್ಥಿಗಳಿಂದ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ದಿ.15 ಶನಿವಾರ ಸಂಜೆ ನಡೆದ “ಶರಣ ಸಂಕುಲ” ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ, ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮೊದಲನೇ ಸಹಿ ನನ್ನದಾಗಿದೆ. ಆದರೆ ಬಸವಣ್ಣನವರು ಕೇವಲ ಸಾಂಸ್ಕೃತಿಕ ನಾಯಕರಾಗಿರದೆ ಸಮಗ್ರ ರಂಗಗಳ ನಾಯಕ ಆಗಿದ್ದಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ಪರಿಚಯ ನೋಡಿದರೆ, ಪ್ರತಿಯೊಬ್ಬರು ಒಂದೊಂದು ವಿಷಯದಲ್ಲಿ ಪರಿಣತಿಯನ್ನು ಹೊಂದಿದ್ದರೆ, ಬಸವಣ್ಣನವರು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ರಂಗಗಳು ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಪರಿಣತಿಯನ್ನು ಸಾಧಿಸಿದ್ದಾರೆ ಎಂದರು.ಜ್ಞಾನಯೋಗಾಶ್ರಮದ ಪ.ಪೂ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಯೋಗ, ಪ್ರಾಣಾಯಾಮ,…

Read More

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಶನಿವಾರ ನಡೆದ ಶೂಟೌಟ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ, ಈ ಪ್ರಕರಣ ಸಂಬಂಧ ಚಡಚಣ ಪಟ್ಟಣದವರೇ ಆದ ಆರೋಪಿ ಇಸ್ಮಾಯಿಲ್ ಗುಲಾಬಸಾಬ ಶೇಖ(29) ಮತ್ತು ಜಾಫರ್ ಲಾಲಸಾಬ ಮಸಳಿ(36) ಎಂಬುವರನ್ನು ಇಂದು ಮಧ್ಯಾಹ್ನ 12.10ರಕ್ಕೆ ಮಹಾರಾಷ್ಟ್ರದ ಸೋಲಾಪೂರದಲ್ಲಿ ಬಂಧಿಸಲಾಗಿದೆ. ಅಲ್ಲದೇ ಅವರ ಬಳಿಯಿದ್ದ ಒಂದು ಕಂಟ್ರಿ ಪಿಸ್ತೂಲು ಮತ್ತು ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.ಅಲ್ಲದೇ, ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಿದ ಪಿಎಸ್‌ಐ ಗಳಾದ ಸಂಜಯ ಕಲ್ಲೂರ, ಎಸ್. ವಿ. ಗೊಳಸಂಗಿ, ಎಎಸ್‌ಐ ರಂಗೂ ರಾಠೋಡ, ಪೇದೆಗಳಾದ ಎಂ. ಎನ್. ಹೊನ್ನಾಕಟ್ಟಿ, ಎಂ. ಜಿ. ಪವಾರ, ಆರ್.…

Read More

ಮುದ್ದೇಬಿಹಾಳ: ನಿಂತ ನೀರಿನಲ್ಲಿ ಬಿದ್ದು ಇಬ್ಬರು ಅವರನ್ನು ಬದುಕಿಸಲು ನೀರಿಗಿಳಿದವ ಒಬ್ಬ ಸೇರಿ ಒಟ್ಟು 3 ಜನ ನೀರಿನಲ್ಲಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಹಡಲಗೇರಿ ಗ್ರಾಮದ ನೀಲಮ್ಮ ಖಿಲಾರಹಟ್ಟಿ(17), ಮುತ್ತಪ್ಪ ಖಿಲಾರಹಟ್ಟಿ(24) ಮತ್ತು ಹಳ್ಳೂರ ಗ್ರಾಮದ ಯಲ್ಲಪ್ಪ ಯಾಳವಾರ(3೦) ಮೃತ ದುರ್ದೈವಿಗಳು.ಪ್ರಕರಣದ ಹಿನ್ನೆಲೆ ಸಂಶಯಾಸ್ಪದವಾಗಿದ್ದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ರೈತರು | ೧೨ ವರ್ಷ ಕಳೆದರೂ ಬಾರದ ಪರಿಹಾರಹಣ ವಿಜಯಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ರೈತರಿಗೆ ಭೂಸ್ವಾಧೀನದ ಹಣ ಹಾಗೂ ಹೆಚ್ಚುವರಿ ಕೊರ್ಟ ಮೂಲಕ ಆದೇಶವಾದ ಪರಿಹಾರದ ಹಣ ಇಲ್ಲಿವರೆಗೆ ನೀಡದೇ ನ್ಯಾಯಾಂಗ ನಿಂದನೆ ಮಾಡುವುದಲ್ಲದೇ, ನ್ಯಾಯಾಂಗಕ್ಕೂ ಅನ್ಯಾಯಮಾಡಿ ರೈತರಿಗೂ ಮೊಸ ಮಾಡುತ್ತಿರುವ ನೀರಾವರಿ ಇಲಾಖೆಯವರು ಕೂಡಲೇ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕ ರಮೇಶ ಕಳಸದ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆಯಲ್ಲಿ ಸುಮಾರು ೨೦೧೨ ರಿಂಧ ಚಿಮ್ಮಲಗಿ ಏತ ನೀರಾವರಿ ಯೋಜನೆ ಕಳೆದ ೧೨ ವರ್ಷಗಳಿಂದ ನಡೆಯುತ್ತಿದ್ದು, ರೈತರ ಜಮೀನುಗಳಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುಂಚೆಯೇ ರೈತರಿಗೆ ಭೂಸ್ವಾಧೀನದ ನೋಟಿಸ್‌ಗಳನ್ನು ನೀಡಿ ಪರಿಹಾರ ನೀಡಿದ ನಂತರ…

Read More

ವಿಜಯಪುರ: ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ತಮ್ಮ ೭೦ ನೇ ವರ್ಷದ ವರ್ಧಂತಿ ನಿಮಿತ್ತ ೭೦ ಜನ ವಿದ್ವಾಂಸರಿAದ ವಿಶೇಷ ಪ್ರವಚನ ಮಾಡಿಸಿ ವಿದ್ವಾಸರಿಗೆ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿದರು.ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಅರ್ಚಕ ಪಂಡಿತ ನರಹರಿಆಚಾರ್ಯ ಶ್ರೀನಿವಾಸಾಚಾರ್ಯ ಜೋಶಿ ಅವರು ವಿಶೇಷ ಪ್ರವಚನದಲ್ಲಿ ಭಾಗವಹಿಸಿ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ನೀಡಿದ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.

Read More

ವಿಜಯಪುರ: ಬಹುಜನ ದಲಿತ ಸಂಘರ್ಷ ಸಮಿತಿ (ರಿ ) ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ 133ನೆ ವರ್ಷದ ಜಯಂತಿ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಶೈಕ್ಷಣಿಕ ಜಾಗೃತಿ ಸಮಾವೇಶ ಹಾಗೂ ಡಾ ವಿಜಯಲಕ್ಷ್ಮಿ ಪಾಟೀಲ್ ರವರು ರಚಿಸಿದ ” ಅನಿತಾ ದೇಸಾಯಿ ಆನ್ ಇಂಡಿಯನ್ ನೋವೆಲಿಸ್ಟ್ ಎಂಬ ಕೃತಿ ಬಿಡುಗಡೆ ಮತ್ತು ಸನ್ 2023-24ನೆ ಸಾಲಿನ ಎಸ್ ಎಸ್ ಎಲ್ ಸಿ ಶೇಕಡಾ 85 ಮತ್ತು ದ್ವಿತೀಯ ಪಿಯುಸಿ ಶೇ 90 ರಷ್ಟು ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿ.30-6-2024 ರಂದು ಬೆಳಗ್ಗೆ 11.30 ಗಂಟೆಗೆ ವಿಜಯಪುರ ನಗರದ ಕಂದಗಲ್ ಹನುಮಂತ್ರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಬಹುಜನ ದಲಿತ ಸಂಘರ್ಷ ಸಮಿತಿ ಕಳೆದ ಎರಡು ದಶಕಗಳಿಂದ ಇಲ್ಲಿವರೆಗೂ ರಾಜ್ಯಾದ್ಯಂತ ಸಮಾಜಕ, ಶೈಕ್ಷಣಿಕ, ರಾಜಕೀಯ,ಸಾಹಿತ್ಯ, ಸಂಸ್ಕೃತಿಕ ಕ್ಷೇತ್ರದಲ್ಲಿ ಬಹುಜನರ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ.…

Read More

ವಿಜಯಪುರ: ಬಹುಜನ ದಲಿತ ಸಂಘರ್ಷ ಸಮಿತಿ (ರಿ ) ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ 133ನೆ ವರ್ಷದ ಜಯಂತಿ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಶೈಕ್ಷಣಿಕ ಜಾಗೃತಿ ಸಮಾವೇಶ ಹಾಗೂ ಡಾ ವಿಜಯಲಕ್ಷ್ಮಿ ಪಾಟೀಲ್ ರವರು ರಚಿಸಿದ ” ಅನಿತಾ ದೇಸಾಯಿ ಆನ್ ಇಂಡಿಯನ್ ನೋವೆಲಿಸ್ಟ್ ಎಂಬ ಕೃತಿ ಬಿಡುಗಡೆ ಮತ್ತು ಸನ್ 2023-24ನೆ ಸಾಲಿನ ಎಸ್ ಎಸ್ ಎಲ್ ಸಿ ಶೇಕಡಾ 85 ಮತ್ತು ದ್ವಿತೀಯ ಪಿಯುಸಿ ಶೇ 90 ರಷ್ಟು ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿ.30-6-2024 ರಂದು ಬೆಳಗ್ಗೆ 11.30 ಗಂಟೆಗೆ ವಿಜಯಪುರ ನಗರದ ಕಂದಗಲ್ ಹನುಮಂತ್ರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಬಹುಜನ ದಲಿತ ಸಂಘರ್ಷ ಸಮಿತಿ ಕಳೆದ ಎರಡು ದಶಕಗಳಿಂದ ಇಲ್ಲಿವರೆಗೂ ರಾಜ್ಯಾದ್ಯಂತ ಸಮಾಜಕ, ಶೈಕ್ಷಣಿಕ, ರಾಜಕೀಯ,ಸಾಹಿತ್ಯ, ಸಂಸ್ಕೃತಿಕ ಕ್ಷೇತ್ರದಲ್ಲಿ ಬಹುಜನರ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ.…

Read More

ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ೨೦೨೩-೨೪ನೇ ಸಾಲಿನ ವಿಜಯಪುರ ನಗರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ೨೩ ತ್ರಿಚಕ್ರ ವಾಹನಗಳು, ಟಾಕಿಂಗ್ ಲ್ಯಾಪಟಾಪ್, ಹೊಲಿಗೆ ಯಂತ್ರ ಹಾಗೂ ಬ್ರೆöÊಲ್ ಕಿಟ್ ಗಳನ್ನು ವಿತರಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಜವಾಹಾರ ಗೊಸಾವಿ, ಮಲ್ಲಿಕಾರ್ಜುನ ಗಡಗಿ, ಮುಖಂಡರಾದ ಗೂಳಪ್ಪ ಶೆಟಗಾರ, ರಾಜೇಶ ದೇವಗಿರಿ, ಬಸವರಾಜ ಕೋರಿ, ಸಚಿನ ಕುಮಸಿ, ಸುರೇಶ ಕಣಮುಚನಾಳ, ರಾಜು ಕಾಳೆ, ಲಕ್ಷ್ಮೀ ದಾಶ್ಯಾಳ, ಲಕ್ಷ್ಮೀ ಕನ್ನೋಳ್ಳಿ, ಮಲ್ಲಮ್ಮ ಜೋಗೂರ, ಗಿರೀಶ ಪಾಟೀಲ, ವಿಜು ಗಚ್ಚಿನಮಠ, ವಿಠ್ಠಲ ನಡುವಿನಕೇರಿ, ಸದಾನಂದ ಗುನ್ನಾಪುರ, ಲಕ್ಕಪ್ಪ ಮಾಲಗಾರ, ಹಣಮಂತ ಪಟ್ಟೆದ, ದೇವಪ್ಪ ಶಿವಗೊಂಡ, ದಾದಾಸಾಹೇಬ ಬಾಗಾಯತ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ…

Read More

ದೇವರಹಿಪ್ಪರಗಿ: ವಿಶ್ವಯೋಗ ದಿನದ ಅಂಗವಾಗಿ ಜರುಗುವ ಯೋಗ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಅದರಲ್ಲೂ ವಿಶೇಷವಾಗಿ ಯುವಸಮೂಹ ಭಾಗವಹಿಸುವುದು ಅಗತ್ಯವಾಗಿದೆ ಎಂದು ನಿವಾಳಖೇಡ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಮಠದ ಬಸವಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಸೋಮವಾರ ಜರುಗಿದ ವಿಶ್ವ ಯೋಗ ದಿನದ ನಿಮಿತ್ಯ ಜರುಗುವ ಯೋಗ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಯೋಗ ಉತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಬೇಕು. ಅದಕ್ಕಾಗಿ ಕನಿಷ್ಟ ಐದು ಸಾವಿರ ಜನತೆ ಇದರಲ್ಲಿ ಭಾಗವಹಿಸಿ ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿಗಳಿಂದ ಯೋಗ ವಿಧಾನ ಹಾಗೂ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ಯೋಗ ಉತ್ಸವ ಯುವಜನತೆಯ ಆರೋಗ್ಯ ಹಾಗೂ ಸದ್ವಿಚಾರಗಳಿಗೆ ಪೂರಕವಾಗಿದ್ದು ದಿ: ೨೧ ರಂದು ಬೆಳಿಗ್ಗೆ ೬ ಗಂಟೆಗೆ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.ಪಡಗಾನೂರ ಗ್ರಾಮದ ಖ್ಯಾತ ಯೋಗಪಟು…

Read More

ವಿಜಯಪುರ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ೨೦೨೪-೨೫ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ, ಅಟೊಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಇಂಜಿನಿಯರಿಂಗ್ ವಿಭಾಗಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಪ್ರವೇಶಕ್ಕಾಗಿ ಜೂನ್ ೧೫ರವರೆಗಿದ್ದ ಕೊನೆಯ ದಿನಾಂಕದ ಅವಧಿಯನ್ನು ಜೂನ್ ೨೯ರವರೆಗೆ ವಿಸ್ತರಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪಾಲಿಟೆಕ್ನಿಕ ವಿಭಾಗದ ಕಾರ್ಯನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಪ್ರಾಚಾರ್ಯರಾದ ಬಸವರಾಜ ಬಿ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More