ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವವು ಶ್ರಾವಣ ಮಾಸದ ೩ನೇ ಸೋಮವಾರದಂದು ವಿಜ್ರಂಭಣೆಯಿಂದ ಜರುಗಿತು.
ಈ ನಿಮಿತ್ಯ ಬೆಳಿಗ್ಗೆ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಕತೃ ಗದ್ದುಗೆಗೆ, ಶ್ರೀ ಸಂಗನಬಸವ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ, ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ, ವಿಶೇಷ ಪೂಜೆ ನಡೆಯಿತು.
ಬಳಿಕ ಸಂಜೆ ೫ ಗಂಟೆಗೆ ಸ್ಥಳಿಯ ಸದ್ಭಕ್ತರಾದ ಮಲ್ಲಿಕಾರ್ಜುನ ಮುಜಗೊಂಡ ಮನೆತನದವರಿಂದ ಸಂಪ್ರದಾಯದಂತೆ ತೊಟ್ಟಿಲು ಸೇವೆ ನಡೆಯಿತು. ಈ ನಿಮಿತ್ಯ ಮುಜಗೊಂಡ ಅವರ ಮನೆಯಿಂದ ಮಠದವರೆಗೆ ಶ್ರೀ ಸಿದ್ಧಲಿಂಗ ಮಹಾರಾಜರ ಬೆಳ್ಳಿಯ ಮೂರ್ತಿಯ ಮೆರವಣಿಗೆಯು ಕಕ್ಕಳಮೇಲಿಯ ಭಜನಾ ಕಲಾತಂಡ, ಸ್ಥಳಿಯ ಭಜನಾ ಕಲಾ ತಂಡಗಳ ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿಂದ ನೆರವೇರಿತು. ಬಳಿಕ ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಮಠದ ಸಂಪ್ರದಾಯದಂತೆ ಅಕ್ಕನ ಬಳಗದವರ ಜೋಗುಳ ಪದದೊಂದಿಗೆ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಿಯ ಹಾಗೂ ಪರಸ್ಥಳದ ಮಹಿಳಾ ಭಕ್ತರು ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು ಸೇವೆ ಸಲ್ಲಿಸಿದರು.
ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆ ಇಲ್ಲಿನ ಅನ್ನ ದಾಸೋಹ ಕೇಂದ್ರದಲ್ಲಿ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು, ಸ್ಥಳಿಯ ಶ್ರೀ ಸಂಗನಬಸವೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ಸ್ಥಳಿಯ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

