ಮುದ್ದೇಬಿಹಾಳ: ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿಯ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ನ್ನು ಮುದ್ದೇಬಿಹಾಳ ತಾಲೂಕಿನಾದ್ಯಂತ ಸಂಘಟಿಸುವ ಸಲುವಾಗಿ ತಾಲೂಕಾ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶ್ರೀಶೈಲ ದೊಡಮನಿ, ಉಪಾಧ್ಯಕ್ಷರುಗಳಾಗಿ ಬಿ.ಎಸ್.ಮೇಟಿ, ಎಸ್.ಎಲ್.ಗುರವ, ಎ.ಆರ್.ಪಾಟೀಲ್, ಅಜೀತ್ ಜೋಶಿ, ಸಂಗಮ್ಮ ದೇವರಳ್ಳಿ, ನಿತ್ಯಾನಂದ ಹಿರೇಮಠ, ಸಂಘಟನಾ ಕಾರ್ಯದರ್ಶಿಗಳಾಗಿ ರವೀಂದ್ರ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾಗಿ ಡಾ.ವೀರೇಶ ಪಾಟೀಲ, ವಿಕ್ರಮ ಓಸ್ವಾಲ, ಭಾರತಿ ಪಾಟೀಲ, ಕಾರ್ಯದರ್ಶಿಯಾಗಿ ಸಂತೋಷ ಬಾದರಬಂಡಿ, ಪ್ರಶಿಕ್ಷಣ ಪ್ರಮುಖರಾಗಿ ಮದನ ಕುಲಕರ್ಣಿ, ಬಿ.ಎಸ್.ಪಾಟೀಲ, ಬಿ.ಎಸ್.ಕುಲಕರ್ಣಿ, ರಂಜಿತಾ ಹೆಗಡೆ, ಮಹಿಳಾ ಮಂಡಲದ ಪ್ರಮುಖರುಗಳಾಗಿ ಪ್ರೀತಿ ದೇಗಿನಾಳ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಶಶಿಕಲಾ ರಾಮವಡಗಿ, ಇಂದು ನಾಯಕ, ಪ್ರಭಾ ಹೆಬ್ಬಾರ, ಅಂಜನಾ ದೇಶಪಾಂಡೆ, ಸ್ವಾಮಿಜಿಗಳ ನಿರ್ವಹಣೆಯ ಪ್ರಮುಖರಾಗಿ ಬಸವರಾಜ ನಂದಿಕೇಶ್ವರಮಠ, ಪ್ರಸರಣ ವಿಭಾಗದ ಪ್ರಮುಖರುಗಳಾಗಿ ಉದಯ ರಾಯಚೂರ, ಮಹಾಂತೇಶ ಸಜ್ಜನ, ದೇವಾಲಯಗಳ ಪ್ರಮುಖರಾಗಿ ಕೃಷ್ಣಾಜಿಭಟ್ಟ ಹುನಗುಂದ ಮಾರ್ಗದರ್ಶಕರುಗಳಾಗಿ ಎಸ್.ಬಿ.ಚಲವಾದಿ, ಎಸ್.ಎಮ್.ನೆರಬೆಂಚಿ, ಕೆ.ವಾಯ್.ಬಿರಾದಾರ, ಅಶೋಕ ಮಣಿ, ರುದ್ರೇಶ ಕಿತ್ತೂರ, ಶ್ರಿಮಾಣಿಕ ಕುಲಕರ್ಣಿ, ಶಾಲೆಯ ಯೋಜನಾ ಪ್ರಮುಖರಾಗಿ ಎಮ್.ಎಸ್.ಕವಡಿಮಟ್ಟಿ, ಎಚ್.ಎನ್.ಇಟಗಿ, ಟಿ.ಡಿ.ಲಮಾಣಿ, ಎಮ್.ಎನ್.ಯರಝರಿ, ಬಿ.ಟಿ.ಭಜಂತ್ರಿ, ಎ.ಕೆ.ಪಡೇಕನೂರ, ರವಿ ಸುಧಾಕರ, ಮಂಜುನಾಥ ಪಡದಾಳಿ ಸದಸ್ಯರುಗಳಾಗಿ ಪ್ರದೀಪ ಪಾಟೀಲ, ಸಂಜು ಬಾಗೇವಾಡಿ, ಪುನೀತ ಹಿಪ್ಪರಗಿ, ಡಾ.ವಿಜಯಕುಮಾರ ನಾಯಕ ಸೇರಿದಂತೆ ತಾಲೂಕಿನಾದ್ಯಾಂತ ಸಂಘ ಸಂಸ್ಥೆಗಳ ಹಾಗೂ ಸಮಾಜದ ಗಣ್ಯರುಗಳು ಸಲಹಾ ಸಮಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ತಾಲೂಕಿನ ಎಲ್ಲಾ ಸ್ವಾಮೀಜಿಗಳವರ ಗೌರವ ಸಾನಿಧ್ಯ ಮತ್ತು ನಿರ್ದೇಶನದಂತೆ ಮುಂದಿನ ಚಟುವಟಿಕೆಗಳು ನಡೆಯಲಿವೆ.
ಪದಾಧಿಕಾರಿ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಜಿಲ್ಲಾ ಅಭಿಯಾನ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಂಗನಗೌಡ ಪಾಟೀಲ, ಸಹಸಂಘಟನಾ ಕಾರ್ಯದರ್ಶಿ ಪವನ ಕುಲಕರ್ಣಿ ಉಪಾಧ್ಯಕ್ಷರುಗಳಾದ ಪ್ರಭು.ಎಸ್.ಕಡಿ ಮತ್ತು ಬಿ.ಪಿ.ಕುಲಕರ್ಣಿ, ಸಂಚಾಲಕ ರಾಮಚಂದ್ರ ಹೆಗಡೆ, ಗಣ್ಯರಾದ ಜಗನ್ನಾಥ ಗೌಳಿ, ಅರುಣ ಹುನಗುಂದ, ಎಮ್.ಎಸ್.ಬಿರಾದಾರ ಸೇರಿದಂತೆ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

