Author: editor.udayarashmi@gmail.com

ತಿಕೋಟಾ: ನಭೋಮಂಡಲದಲ್ಲಿ ಬುಧವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ತಾಲ್ಲೂಕಿನ ಘೋಣಸಗಿ, ಕಳ್ಳಕವಟಗಿ ಬಿಜ್ಜರಗಿ, ಬಾಬಾನಗರ, ಸೋಮದೇವರಹಟ್ಟಿ, ಹುಬನೂರ, ಟಕ್ಕಳಕಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮೋಡಗಳ ಮಧ್ಯೆಯ ಸೂರ್ಯನ ಸುತ್ತಲೂ ವೃತ್ತಾಕಾರವಾಗಿ ಕಾಮನಬಿಲ್ಲಿನಂತೆ ಉಂಗುರರಾಕಾರ ಕಾಣಿಸಿಕೊಂಡಿದ್ದು ಪ್ರಕೃತಿ ವಿಸ್ಮಯದ ಕೌತುಕವನ್ನು ಕಣ್ಣಾರೆ ಕಂಡು ಯುವಕರು, ಶಾಲಾ ಮಕ್ಕಳು ಹಳ್ಳಿಯ ಜನರು ಕಣ್ತುಂಬಿಕೊಂಡರು.ನಭೋಮಂಡಲದ ಸೂರ್ಯನ ಸೂತ್ತಲೂ ಆವರಿಸಿರುವ ಉಂಗುರುದ ವಿಡಿಯೋವನ್ನು ಮೋಬೈಲನಳಲ್ಲಿ ಸೇರೆ ಹಿಡಿದು ಪ್ರೀತಿ ಪಾತ್ರರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದರು. ಕಣ್ಣು ಕುಕ್ಕಿಸುವ ಸೂರ್ಯನ ಕಿರಣಗಳು ಪ್ರಕಾಶಮಾನವಾಗಿದ್ದರೂ ಈ ಕೌತುಕವನ್ನು ನೋಡಿ ನಿಬ್ಬೆರಗಾದರು. ಏಳು ಬಣ್ಣಗಳ ಕಾಮನಬಿಲ್ಲಿನ ಕುರಿತು ಹಾಗೂ ನಕ್ಷತ್ರಗಳು ಮತ್ತು ಉಪಗ್ರಹಗಳ ಸೂತ್ತಲೂ ಆವರಿಸುವ ಉಂಗುರ ವ್ಯವಸ್ಥೆ ಕುರಿತು ಪಠ್ಯ ಪುಸ್ತಕಗಳಲ್ಲಿ ವಿದ್ಯಾರ್ಥಿಗಳು ಅರಿತುಕೊಳ್ಳುತ್ತಿದ್ದರು. ಬುಧವಾರ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಶಾಲಾ ಆವರಣದಲ್ಲೆ ಕಾಣುವ ಈ ನೈಜ ಪ್ರಕೃತಿ ವಿಸ್ಮಯ ಕಂಡು ಶಿಕ್ಷಕ ಪರಮೇಶ್ವರ ಗದ್ಯಾಳ ಅವರಿಂದ ಸೂರ್ಯನ ವರ್ತುಲಾಕಾರದ ಉಂಗುರದ…

Read More

ವಿಜಯಪುರ: ಮನಸ್ಸಿನ ನೆಮ್ಮದಿಗಾಗಿ ದಿನಂಪ್ರತಿ ಯೋಗಾಭ್ಯಾಸವನ್ನು ಅಳವಡಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ವಿಶ್ವ ಯೋಗ ಮಹತ್ವ ಕುರಿತ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಯೋಗ ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.ನಾವು ದಿನನಿತ್ಯ ಯೋಗ ಮಾಡುವುದರಿಂದ ಜೀವನದಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಮನಸ್ಸಿನ ನೆಮ್ಮದಿಗೆ ಎಲ್ಲರೂ ಪ್ರತಿದಿನ ಯೋಗ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಯೋಗವು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಬಹಳ ಹಿಂದಿನಿಂದಲೂ ಯೋಗವು ಪ್ರಚಲಿತವಿದ್ದು ಯೋಗದಿಂದ ಹಲವಾರು ಪ್ರಯೋಜನಗಳಿವೆ. ದಿನನಿತ್ಯ ಯೋಗದಿಂದ ಜೀವನದಲ್ಲಿ ರೋಗ ಮುಕ್ತಿ, ಮಾನಸಿಕ ಶಾಂತಿ, ದೈಹಿಕ ಸದೃಢತೆ, ಆಯಸ್ಸು ವೃದ್ದಿ ಇವೆಲ್ಲವುಗಳನ್ನು ನಾವುಗಳು ಪಡೆದುಕೊಳ್ಳಬಹುದಾಗಿದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗವು…

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨ ಇಂದಿನ ದಾವಂತದ ಜೀವನದಲ್ಲಿ ಪ್ರತಿಯೊಂದರಲ್ಲೂ ಅವಸರ, ಗಡಿಬಿಡಿ ಆನುಭವಿಸುತ್ತಿದ್ದೇವೆ. ಆತಂಕ ಒತ್ತಡಗಳಂತೂ ಸಾಮಾನ್ಯ ಎನ್ನುವಂತಾಗಿದೆ. ಎಲ್ಲದರಲ್ಲೂ ಆತಂಕ ಹಿನ್ನೆಡೆಯನ್ನುಂಟು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಆತಂಕವನ್ನು ಒಂದಿಲ್ಲೊಂದು ಸಂದರ್ಭದಲ್ಲಿ ಅನುಭವಿಸಿಯೇ ಇರುತ್ತೇವೆ. ಸರಳವಾಗಿ ಹೇಳಬೇಕೆಂದರೆ ಬದುಕು ಆತಂಕಗಳಿಗೆ ಮುಖಾಮುಖಿ ಆಗುವಂಥದ್ದು. ನಾವು ಅಂದುಕೊಂಡಂತೆ ಇರದು ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇಲ್ಲ. ನಿತ್ಯದ ಅನುಭವವೂ ನವನವೀನ. ಆತಂಕವು ಕಾಲಕಾಲಕ್ಕೆ ಪ್ರತಿಯೊಬ್ಬರೂ ಅನುಭವಿಸುವ ಸಂಗತಿಯಾಗಿದೆ, ಆದರೆ ಕೆಲವರಿಗೆ ಇದು ವ್ಯಾಪಕವಾಗಿ ಮತ್ತು ವಿಪರೀತವಾಗಿ ಪರಿಣಮಿಸಬಹುದು.ಮೇಲಿಂದ ಮೇಲೆ ಕಣ್ಣಂಚನ್ನೂ ತೋಯಿಸಬಹುದು.ಆತಂಕವೆಂದರೆ,,?ಆತಂಕವು ನಿರಂತರವಾದ ಮತ್ತು ಅತಿಯಾದ ಚಿಂತೆಯಿಂದ ನಿರೂಪಿಸಲ್ಪಟ್ಟಿರುತ್ತದೆ. ಸಮಸ್ಯೆ ಶುರುವಾಗಿ ಒಂದೇ ಚಿಂತೆಯಲ್ಲಿ ಕೊನೆಗೊಂಡರೆ ಅದು ಅಷ್ಟು ದೊಡ್ಡ ವಿಷಯವೇನೂ ಅಲ್ಲ. ಬದಲಾಗಿ, ಒಂದು ಚಿಂತೆ ಇನ್ನೊಂದಕ್ಕೆ ಮತ್ತು ಮತ್ತೊಂದಕ್ಕೆ ಕಾರಣವಾದರೆ ಮುಗಿದೇ ಹೋಯಿತು. ಅಲ್ಲಿಂದ ತೊಂದರೆ ಶುರುವಾಗುತ್ತದೆ. ಆತಂಕಪಡುವ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆಯಾಗಿರುತ್ತದೆ. ಕೆಲವು ಜನರು ಯಾವುದೇ…

Read More

ಆಲಮೇಲ: ಜೂ.೨೦ ಸಂಜೆ‌ ೬ ರ‌ ಹೊತ್ತು ಯಳಮೇಲಿಯ ಶ್ರಿ ಗುರು ಸಂಸ್ಥನ‌ ಹಿರೇಮಠದ ಆವರಣದಲ್ಲಿ ಪರಮ ತಪಸ್ವಿ ಲಿಂ.ಶ್ರಿ ಷ ಬ್ರ ಸಿದ್ದಲಿಂಗ ಶಿವಾಚಾರ್ಯರ ೬೭ ನೇ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗಾನಯೋಗಿ ಪಂ ಪಂಚಾಕ್ಷರಿ ಗವಾಯಿಗಳ ೮೦ನೇ ಹಾಗೂಡಾ ಪಂ ಪುಟ್ಟರಾಜ ಕವಿ ಗವಾಯಿಗಳ ೧೪ ನೇ ಪುಣ್ಯಾರಾಧನೆ, ಸಂಗೀತೋತ್ಸವ ಮತ್ತು ಪುಸ್ತಕ‌ ಜನಾರ್ಪಣೆ ನಡೆಯಲಿದೆ.ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತಕಲಾವಿದರು, ಸಂಗೀತ ಪ್ರೇಮಿಗಳು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ಪಟ್ಟಣದ ಗುರು ಸಂಸ್ಥಾನ‌ ಹಿರೇಮಠದ ಷ.ಬ್ರ ಚಂದ್ರಶೇಖರ ಶಿವಾಚಾರ್ಯರುಬಂಡಾಯ ಹಿರಿಯ ಸಾಹಿತಿ ಸಿದ್ದರಾಮ ಉಪ್ಪಿನ್ ರವರ “ದೀಪ ಹಚ್ಚುವ ಸಮಯ” ಕಾದಂಬರಿ‌‌ ಲೋಕಾರ್ಪಣೆಗೊಳಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆರಗು ಪ್ರಕಾಶನದ ಸಂಚಾಲಕ ಡಾ.ರಮೇಶ ಕತ್ತಿ ವಹಿಸಲಿದ್ದು, ಪುಸ್ತಕ ಕುರಿತು ಚಿಂತಕ/ವಾಗ್ಮಿ ಸಿ.ಎಂ.ಬಂಡಗಾರ ಮಾತನಾಡಲಿದ್ದಾರೆ.ರೇಣುಕಾಚಾರ್ಯ ಗವಾಯಿಗಳು, ಯಶವಂತ ಬಡಿಗೇರ, ರಾಜಶೇಖರಕಟ್ಟಿಸಂಗಾವಿ, ಅಪ್ಪು ಉಪ್ಪಿನ ಮುಂತಾದ ಹಿರಿ-ಕಿರಿ ಕಲಾವಿದರಿಂದ ಸಂಗೀತೋತ್ಸವ ಜರುಗುವುದು.ಶಾಸಕ ಅಶೋಕ ಮನಗೂಳಿ‌, ಅಲ್ಲದೆ ಕಾದಂಬರಿಯ ಪಾತ್ರಧಾರಿಗಳಾದ ನಿತ್ಯಾನಂದ‌ ಮಹಾರಾಜ್, ಶ್ರೀಶ್ಯೆಲಯ್ಯ ಸ್ವಾಮೀಜಿ,…

Read More

ವಿಜಯಪುರ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಂದ 2024-25ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ, ಅಟೊಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಇಂಜಿನಿಯರಿಂಗ್ ವಿಭಾಗಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಪ್ರವೇಶಕ್ಕಾಗಿ ಜೂನ್ 15ರವರೆಗಿದ್ದ ಕೊನೆಯ ದಿನಾಂಕದ ಅವಧಿಯನ್ನು ಜೂನ್ 29ರವರೆಗೆ ವಿಸ್ತರಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪಾಲಿಟೆಕ್ನಿಕ ವಿಭಾಗದ ಕಾರ್ಯನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಪ್ರಾಚಾರ್ಯರಾದ ಬಸವರಾಜ ಬಿ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಎಚ್ಚರಿಕೆ ವಿಜಯಪುರ: ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಮುನ್ನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕಲುಷಿತ ನೀರು ಪೂರೈಕೆಯಾದಲ್ಲಿ ಗ್ರಾ.ಪಂ ಪಿಡಿಒ, ತಾ.ಪಂ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಹೊಣೆಗಾರನ್ನಾಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ತಿಳಿಸಿದರು.ಬುಧವಾರ ತಾಳಿಕೋಟೆ ತಾಲೂಕಿನ ನಾವದಗಿ, ಮಿಣಜಗಿ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಂಟಾಗಿ ಜನರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಜಿ.ಪಂ ಸಿಇಓ ಅವರು ಭೇಟಿ ನೀಡಿ, ನಾವದಗಿ ಮತ್ತು ಮಿಣಜಗಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ಬೋರವೆಲ್, ಬಾವಿಗಳು, ಓವರ್ ಹೆಡ್ ಟ್ಯಾಂಕ್ ಮತ್ತು ಗ್ರಾಮಗಳಲ್ಲಿನ ಚರಂಡಿಗಳನ್ನು ವೀಕ್ಷಣೆ ಮಾಡಿ, ಕುಡಿಯುವ ನೀರಿನ ಮೂಲಗಳ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಗ್ರಾಮಗಳಲ್ಲಿನ ಚರಂಡಿಗಳನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಕುಡಿಯಲು ಯೋಗ್ಯವಲ್ಲದ ನೀರಿನ ಮೂಲಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ…

Read More

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಆಗಸದಲ್ಲಿ ಕಾಣಿಸಿದ ಪ್ರಕೃತಿಯ ವಿಸ್ಮಯ ಎಲ್ಲರನ್ನು ಕೌತುಕಗೊಳಿಸಿದೆ.ನಭೋ ಮಂಡಲದಲ್ಲಿ ಕಂಡು ಬಂದ ಈ ಖಗೋಳ ವಿಸ್ಮಯ ಜನರ ಅಚ್ಚರಿಗೆ ಕಾರಣವಾಗಿದೆ. ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲು ಆಕಾರದ ಉಂಗುರ ಸೂರ್ಯನಿಗೆ ವರ್ತುಲ ಹಾಕಿದಂತಿತ್ತು. ಪ್ರಕಾಶಮಾನವಾದ ಈ ವಿಸ್ಮಯ ಕಂಡು ಜನ ಬೆರಗಾಗಿದ್ದಾರೆ.ಘೊಣಸಗಿ ಲಂಬಾಣಿ ತಾಂಡಾ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ಗದ್ಯಾಳ ಮಕ್ಕಳಿಗೆ ಈ ಕೌತುಕ ತೋರಿಸಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಮತ್ತು ಹವಾಮಾನ ತಜ್ಞ ಡಾ. ಎಚ್. ವೆಂಕಟೇಶ್, ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸೂರ್ಯನಿಂದ ಬರುವ ಪ್ರಕಾಶಮಾನ ಕಿರಣಗಳಿಂದ ಇದು ಉಂಟಾಗುತ್ತದೆ. ಭೂಮಂಡಲದಿಂದ ಎತ್ತರದಲ್ಲಿರುವ ತೆಳುವಾದ ಮೋಡಗಳಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಈ ವೃತ್ತ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ತೆಳು ಮೋಡಗಳು (Cirrus Clouds) ಎಂದು ಕರೆಯಲಾಗುತ್ತದೆ. ವಾತಾವರಣದಲ್ಲಿ ತೆಳುವಾದ ಮೋಡ ಎತ್ತರದಲ್ಲಿರುತ್ತದೆ. ಸುಮಾರು 12 ರಿಂದ 15 ಕಿ.…

Read More

ವಿಜಯಪುರ: ಕಣ್ಣಿಗೆ ಕಾಣುವ ದೇವರು ಎಂದರೆ ಶಿಕ್ಷಕರು, ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥ ಎನ್.ಎಂ.ಬಿರಾದಾರ ಹೇಳಿದರು.ತಾಲ್ಲೂಕಿನ ಶಿವಣಗಿ ಗ್ರಾಮದ ಪ್ರಾಥಮಿಕ ಮತ್ತು ಎಸ್.ಆರ್.ಮರಿಮಠ ಪ್ರೌಢಶಾಲೆಯಲ್ಲಿ 1998-99 ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಕಲಿತ ವಿದ್ಯಾರ್ಥಿಗಳಿಂದ ರವಿವಾರ ನಡೆದ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.ಗುರು ಮತ್ತು ಶಿಷ್ಯರ ಸಂಬಂಧ ಪವಿತ್ರವಾದದ್ದು, ಅದು ತುಂಬಾ ಪ್ರಾಮಾಣಿಕವಾಗಿ ಇರುವಂಥದ್ದು. ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳು ತಮ್ಮ ಮಕ್ಕಳೆಂದು ತಿಳಿದು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸುತ್ತಾರೆ. ಶಿಕ್ಷಕರನ್ನು ಗೌರವಿಸುವ ಹಾಗೂ ಸ್ಮರಿಸುವ ನಿಮ್ಮಂತಹ ವಿದ್ಯಾರ್ಥಿಗಳು ಶ್ರೇಷ್ಠ, ನೀವೇ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿರುತ್ತೀರಿ ಎಂದು ಹೇಳಿದರು.ಸಾನಿಧ್ಯ ವಹಿಸಿ ಮಾತನಾಡಿದ ವೃಷಭಲಿಂಗ ಸ್ವಾಮೀಜಿ ಶಿಕ್ಷಕರ ವೃತ್ತಿ ಶ್ರೇಷ್ಠ ವೃತ್ತಿ ಗುರು ಶಿಕ್ಷಣ ಮತ್ತು ಸಂಸ್ಕಾರ ಎರಡನ್ನು ಕಲಿಸುತ್ತಾರೆ. ಇಂದಿನ ವಿಧ್ಯಾರ್ಥಿಗಳು ಶಿಕ್ಷಣದ ಬಗ್ಗೆ…

Read More

ವಿಜಯಪುರ: ಕರೆಂಟ್ ಶಾಕ್ ತಗುಲಿ ಇಬ್ಬರು ಬಾಲಕರು ಅಸುನೀಗಿರುವ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಕೆರೆಯಲ್ಲಿ ನಡೆದಿದೆ.ರೋಹಿತ್ ಚವ್ಹಾಣ (8), ವಿಜಯ ಚವ್ಹಾಣ(16) ಮೃತಪಟ್ಟಿರುವ ಬಾಲಕರು.ಮೀನು ಹಿಡಿಯಲು ಕೆರೆಗೆ ಹೋದಾಗ ಕೆರೆಗೆ ಕಳಚಿ ಬಿದ್ದಿದ್ದ ವಿದ್ಯುತ್ ಕಂಬದ ಮೇನ್ ವೈಯರ್ ಬಾಲಕರು ನೋಡಿಲ್ಲ.ಇದನ್ನು ಗಮನಿಸದೆ ಮೀನು ಹಿಡಿಯುವಾಗ ಕೆರೆಯಲ್ಲಿಕಾಲಿಟ್ಟಾಗ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿಜಯಪುರ ಗ್ರಾಮೀಣ ಪೊಲೀಸ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More

ಇವಿಎಂ ಪರಿಶೀಲನೆ ಅಗತ್ಯ | ಬ್ಯಾಲೆಟ್ ಮತದಾನ ಮತ್ತೆ ಬರಬೇಕು | ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮತ ಬೆಂಗಳೂರು: ಇವಿಎಂ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿಗೆ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳು ಬಂದಿವೆ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ವಿಧಾನಸೌಧ ಹಾಗೂ ಬಿಬಿಎಂಪಿ ಮುಖ್ಯ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇವಿಎಂ ತೊಲಗಬೇಕು ಬ್ಯಾಲೆಟ್ ಮತದಾನ ಮತ್ತೆ ಬರಬೇಕು. ಈಗಾಗಲೇ ಫಲಿತಾಂಶ ಬಂದಾಗಿದೆ. ಈಗೇನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಮತ್ತೊಮ್ಮೆ ಫಲಿತಾಂಶವನ್ನು ಪರಿಶೀಲನೆ ನಡೆಸಬಹುದು. ಮಧ್ಯಪ್ರದೇಶದಲ್ಲಿ ಬ್ಯಾಲೆಟ್ ಮತದಾನ ಇದ್ದಾಗ ಮೂರರಲ್ಲಿ ಎರಡು ಭಾಗದಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬೀಳುತ್ತಿದ್ದವು. ಇವಿಎಂ ಕಾರಣಕ್ಕೆ ಈಗ ಪರಿಸ್ಥಿತಿ ಬದಲಾಗಿದೆ. ಇದರ ಬಗ್ಗೆ ಮತ್ತಷ್ಟು ಆಳವಾಗಿ ಚಿಂತನೆ ನಡೆಸಬೇಕಿದೆ ಎಂದರು.

Read More