Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 19, 2026

ವಿಕಲಚೇತನರ ಪಿಂಚಣಿ ಮರುಚಾಲನೆಗೆ ಆಗ್ರಹ

ಕಾನಿಪ ಸಂಘದ ಜಿಲ್ಲಾ ಪ್ರಶಸ್ತಿಗೆ ದೇವರಮನಿ ಆಯ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭ್ರಾತೃತ್ವದ ಬಾಂಧವ್ಯಗಳ ಭಾವೈಕ್ಯತೆಯೇ ರಕ್ಷಾಬಂಧನ :ಅಂಗಡಿ
(ರಾಜ್ಯ ) ಜಿಲ್ಲೆ

ಭ್ರಾತೃತ್ವದ ಬಾಂಧವ್ಯಗಳ ಭಾವೈಕ್ಯತೆಯೇ ರಕ್ಷಾಬಂಧನ :ಅಂಗಡಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೆಂಭಾವಿ: ಅಕ್ಕರೆಯ ಅನುಬಂಧ, ಭ್ರಾತೃತ್ವದ ಭಾವ ಬಂಧ, ಸಹೋದರ, ಸಹೋದರಿಯರ ಬಾಂಧವ್ಯದ ಸಂಬಂಧ, ಭಾವೈಕ್ಯತೆಯ ಮಧುರ ಮಂಕರದ, ಮನೆ ಮನೆಗಳಲ್ಲಿ ಸಡಗರ ಸಂಭ್ರಮದಿ ಆಚರಿಸುವ ಸಾಂಪ್ರದಾಯಿಕ ಹಬ್ಬವೇ ‘ರಕ್ಷಾಬಂಧನ’ ಎಂದು, ಹಿರಿಯ ವರ್ತಕರು ಹಾಗೂ ವಲಯ ಕಸಾಪದ ಗೌರವಾಧ್ಯಕ್ಷ ಸುಮಿತ್ರಪ್ಪ ಅಂಗಡಿ ಹೇಳಿದರು.
ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿಯ ಸಂಬಂಧಗಳ ಕಣ್ಮರೆಯಾಗುತ್ತಿವೆ ಎಂದವರು, ಶ್ರೀಮಂತ ಸಂಸ್ಕೃತಿಯ ವಾರಸುದಾರರಾದ ನಾವು ಸಂಸ್ಕಾರ, ಸಂಸ್ಕೃತಿ, ಸನ್ನಡತೆ, ಸೌಹಾರ್ದತೆಯನ್ನು ಆರಾಧಿಸುವ ಮನೋಭಾವ ನಮ್ಮದಾಗಲಿ, ಭಾರತದ ಬಹು ದೊಡ್ಡ ಪರಂಪರೆ, ವೈಶಿಷ್ಟ್ಯತೆ, ಹಾಗೂ ವೈಭವವನ್ನು ಸದಾ ಎತ್ತಿ ಹಿಡಿಯುವ ಮೂಲಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಬಾಳೋಣ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಹೆಗ್ಗನದೊಡ್ಡಿ, ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕ ಪೋಷಕರು ಮುಂದಾಗಬೇಕು, ಇಲ್ಲದಿದ್ದರೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದವರು, ಹಿರೇಮಠ ಸಂಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಆಯೋಜಿಸಿ, ಸದ್ಭಕ್ತರಿಗೆ ಜ್ಞಾನಾಮೃತ ಉಣಬಡಿಸುತ್ತಿರುವ, ಷ ಬ್ರ ಚನ್ನಬಸವ ಶಿವಾಚಾರ್ಯರು ಕಾರ್ಯ ಅಭಿನಂದನೀಯ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಪ್ರತಿ ವರ್ಷವೂ ತಪ್ಪದೇ ರಕ್ಷಾಬಂಧನ ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿಕೊಂಡು ಬರುತ್ತಿರುವ ಸದ್ಭಕ್ತ ಗುಡದಯ್ಯ ದಾವಣಗೆರೆ ಹಾಗೂ ಅವರ ಗೆಳೆಯರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಆಶಿಸಿದರು.
ಇದೇ ವೇಳೆ ಗುಡದಯ್ಯ ದಾವಣಗೆರೆ, ಡಾ ಅನ್ನದಾನಯ್ಯ ಹಿರೇಮಠ, ನರಸಿಂಹ ವಡ್ಡೆ, ಶ್ರೀಶೈಲ ಪಾಸೋಡಿ ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ತದನಂತರ ವಿವೇಕ ಜಾಗೃತ ಬಳಗದ ವತಿಯಿಂದ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ, ಕಳಸ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು.
ಶಶಿಧರ ಯಾಳಗಿ, ಸಿದ್ದಲಿಂಗ ಸ್ವಾಮಿ ಚಿಂಚೋಳಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು.
ನಿಂಗನಗೌಡ ದೇಸಾಯಿ, ಮಲ್ಲನಗೌಡ ಪಾಟೀಲ, ಶಾಂತಯ್ಯ ಸ್ವಾಮಿ, ವೀರಣ್ಣ ಕಲಿಕೇರಿ, ಡಿ ಸಿ ಪಾಟೀಲ್, ಶಿವಾನಂದ ದಿಂಡವಾರ, ಮಲ್ಕಪ್ಪ ಶಹಾಪುರ, ಸೂಗುರಯ್ಯ ಇಂಡಿ, ಪರಶುರಾಮ ನಾರಾಯಣಕರ್, ಅಭಿಷೇಕ್ ಪಾಟೀಲ, ನಿಜಗುಣ ವಿಶ್ವಕರ್ಮ, ಮಹಾದೇವಪ್ಪ ವಜ್ಜಲ್, ಹಣಮಂತ ಶಹಾಪುರ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಸದ್ಭಕ್ತರು ಉಪಸ್ಥಿತರಿದ್ದರು.
ಡಾ ಯಂಕನಗೌಡ ಪಾಟೀಲ ನಿರೂಪಿಸಿದರು. ಮೋಹನರಡ್ಡಿ ಡಿಗ್ಗಾವಿ ಸ್ವಾಗತಿಸಿದರು, ಶ್ರೀಶೈಲ ಪಾಸೋಡಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 19, 2026

ವಿಕಲಚೇತನರ ಪಿಂಚಣಿ ಮರುಚಾಲನೆಗೆ ಆಗ್ರಹ

ಕಾನಿಪ ಸಂಘದ ಜಿಲ್ಲಾ ಪ್ರಶಸ್ತಿಗೆ ದೇವರಮನಿ ಆಯ್ಕೆ

ಕೃಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 19, 2026
    In ದಿನಪತ್ರಿಕೆ
  • ವಿಕಲಚೇತನರ ಪಿಂಚಣಿ ಮರುಚಾಲನೆಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಾನಿಪ ಸಂಘದ ಜಿಲ್ಲಾ ಪ್ರಶಸ್ತಿಗೆ ದೇವರಮನಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಕೃಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಮಳೆಗಾಗಿ ಗುರ್ಜಿ ಪೂಜೆ ಮೊರೆ ಹೋದ ಮಹಿಳೆಯರು
    In (ರಾಜ್ಯ ) ಜಿಲ್ಲೆ
  • ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬಂಥನಾಳ ಮಠದ ಉತ್ತರಾಧಿಕಾರಿ ಆಯ್ಕೆ ಪಾರದರ್ಶಕವಾಗಿದೆ :ಮುಳಜಿ
    In (ರಾಜ್ಯ ) ಜಿಲ್ಲೆ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಹಿಂದೂ ಹಬ್ಬಗಳ ಹಿಂದೆ ವಿಜ್ಞಾನವಿದೆ :ನಂದಿಕೇಶ್ವರಮಠ
    In (ರಾಜ್ಯ ) ಜಿಲ್ಲೆ
  • ಸ್ನಾತಕೋತ್ತರ ಪದವಿ ಪ್ರವೇಶಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.