ಢವಳಗಿ:ಇಂದಿನ ಮಕ್ಕಳೇ,ದೇಶದ ಮುಂದಿನ ನಾಯಕರು ಆಗುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕಲೆಯನ್ನು ಹೋರತೆಗೆಯುದೇ ಪ್ರತಿಭಾ ಕಾರಂಜಿ ಎಂದು ಢವಳಗಿ ವಲಯದ ಬಿ ಆರ್ ಪಿ ಶಂಕರಗೌಡ ಗೌಡರ ಹೇಳಿದರು.
ಸಮೀಪದ ಹಳ್ಳೂರ ಕ್ರಾಸ ಬಳಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ಢವಳಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಗ್ರಾಮದ ಶ್ರೀ ಮುತ್ತಪ್ಪ ಪೂಜಾರಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ವಿದ್ಯಾದೇವಿ ಶ್ರೀ ಸರಸ್ವತಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಢವಳಗಿ ಎಮ್ ಪಿ ಎಸ್ ಶಾಲೆಯ ಮುಖ್ಯಗುರುಗಳಾದ ಬಿ ಎಸ್ ಶೇಕಣ್ಣವರು ಮಾತನಾಡಿ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಎರಡು ಚಟುವಟೆಕೆಗಳಲ್ಲಿ ಭಾಗವಹಿಸಬೇಕು. ಮಕ್ಕಳು ಬರಿ ಪುಸ್ತಕದಲ್ಲಿಯೇ ಮುಳಗಬಾರದು ಕ್ರೀಡೆ,ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯುವದೇ ಪ್ರಾಥಮಿಕ ಶಾಲೆಯಾಗಿದೆ. ಮಕ್ಕಳಿಗೆ ಕಲಿಯಲು ಸದೃಡ ಮನಸ್ಸು ಬೇಕು ಮತ್ತು ಆರೋಗ್ಯವಾಗಿರಲು ಸದೃಡ ದೇಹ ಇರಬೇಕು. ಇವೆರಡು ಇರಬೇಕೆಂದರೆ ಮಕ್ಕಳು ಇಂತಹ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಡಿ ವಾಯ್ ಗುರಿಕಾರ, ಎಮ್ ಎಸ್ ಮಾಕೋಂಡ, ಶರಣಬಸಪ್ಪ ಬೂದಿಹಾಳ, ಪ್ರಕಾಶ ಹಾಲವಾರ, ಎಮ್ ಆರ್ ಜುಮನಾಳ, ಎಮ್ ಕೆ ಬಾಗವಾನ, ಶಾರದಾ ಸಜ್ಜನ, ರಮೇಶ ಮೂಲಿಮನಿ, ಶ್ರೀಶೈಲ ಸಜ್ಜನ, ಶಿವಪುತ್ರ ಸಜ್ಜನ, ಎಸ್ ಎಮ್ ಬಿರಾದಾರ, ಎಸ್ ಎಚ್ ಕತೆಗಾರ ಸೇರಿದಂತೆ ಹಳ್ಳೂರ ಗ್ರಾಮದ ಹಿರಿಯರು,ಯುವಕರು ಹಾಗೂ ಮಕ್ಕಳು ಪಾಲ್ಗೋಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

