ಕೊಲ್ಹಾರ: ತಾಲೂಕಿನ ನಾಗರದಿನ್ನಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮಂಗಳವಾರ ಮತ್ತೆ ಎರಡು ಚಿರತೆ ಮರಿಗಳು ಪ್ರತ್ಯಕ್ಷ ವಾಗಿರುವುದು ಸಾಬಿತಾಗಿದೆ.
ಪ್ರೇಮಾ ಸಂಜು ನಾವಿ ರೈತಮಹಿಳೆಯ ಹೇಳಿಕೆಯ ಮೇರೆಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವನಗೌಡ ಬಿರಾದಾರ ಹಾಗೂ ಬಸವರಾಜ ಕೊಣ್ಣೂರ ಸೇರಿದಂತೆ ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಮರಿಗಳ ಹೆಜ್ಜೆ ಗುರುತು ಪರಿಶೀಲನೆ ಮಾಡಿದ ಬಳಿಕ ಚಿರತೆ ಇರುವುದು ಖಚಿತ ಪಡಿಸಿಕೊಂಡ ಹಿನ್ನೆಲೆ ಚಿರತೆಯ ಹುಡುಕಾಟಕ್ಕೆ ನಾವು ಎಂಟು ಸಿಬ್ಬಂದಿಯನ್ನು ನೇಮಿಸಿದ್ದೇವೆ. ಭಾನುವಾರ ಸಂಜೆಯಿಂದಲೇ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ನಾವು ಹುಡುಕಾಟ ನಡಿಸಿದ್ದೇವೆ. ಆದರೆ ಇದುವರೆಗೆ ಎಲ್ಲಿಯೂ ಕೂಡಾ ಚಿರತೆ ಪ್ರಾಣಹಾನಿ ಮಾಡಿರುವುದು ನಮಗೆ ಕಂಡು ಬಂದಿಲ್ಲ. ಚಿರತೆ
ಮದ್ಯಾಹ್ನದ ವೇಳೆ ಹೆಚ್ಚು ತಿರುಗಾಡುವುದು ಕಡಿಮೆ ಸಾಯಂಕಾಲ ಹಾಗೂ ಮುಂಜಾನೆಯ ಸಂದರ್ಭದಲ್ಲಿ ಹೆಚ್ಚು ತಿರುಗಾಡುತ್ತದೆ. ಅದಕ್ಕಾಗಿ ನಾವು ಇಂದಿನಿಂದ ಸಾಯಂಕಾಲ ಹಾಗೂ ಮುಂಜಾನೆ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾ ಬಿಟ್ಟು ಚಿರತೆಯ ಹುಡುಕಾಟ ನಡೆಸುವುದಾಗಿ ತಿಳಿಸಿದ್ದಾರೆ.
” ನಾಗರದಿನ್ನಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನನ್ನ ಪತ್ನಿ ಪ್ರೇಮಾಳನ್ನು ಮೆಕ್ಕೆ ಜೋಳಕ್ಕೆ ನೀರು ಹಾಯಿಸಲು ಹಚ್ಚಿ ನಾನು ಚಾರ್ಜ್ ಪಂಪ್ ತರಲು ಗ್ರಾಮಕ್ಕೆ ಬಂದಿದ್ದೆ 10:30 ರ ಸುಮಾರಿಗೆ ಎರಡು ಚಿರತೆ ಮರಿ ಕಾಣಿಸಿಕೊಂಡಿದ್ದನ್ನು ನೋಡಿ ನನ್ನ ಪತ್ನಿ ಗಾಬರಿಯಿಂದ ಜಮೀನು ಬಿಟ್ಟು ಓಡಿ ಬಂದಿದ್ದಾಳೆ.”
– ಸಂಜು ನಾವಿ, ನಾಗರದಿನ್ನಿ ಗ್ರಾಮಸ್ಥ

