Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಇದು ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಜರುಗುವ ಕಥೆ. ಜೀವನದ ಕಟು ಸತ್ಯವನ್ನು ತೋರುವ ಈ ಕಥೆಯನ್ನು ಗಮನವಿಟ್ಟು ಓದಿ. ಬದುಕಿನ ಮೊದಲ 20 ವರ್ಷ ಹೇಗೆ ಕಳೆದವೆಂದೇ ಗೊತ್ತಿಲ್ಲದಂತೆ ಶಾಲೆಯ ಆಟ-ಪಾಠ, ಓದು, ಕಾಲೇಜು, ಸ್ನೇಹಿತರು ಹೀಗೆ ಕಳೆದುಹೋದವು. ಕೆಲಸದ ಹುಡುಕಾಟ ಶುರುವಾಯಿತು. ಎರಡು ಮೂರು ಕೆಲಸಗಳನ್ನು ಮಾಡಿ ಅಂತಿಮವಾಗಿ ಒಂದು ನೌಕರಿಯಲ್ಲಿ ಗಟ್ಟಿಯಾಗಿ ಉಳಿದುಕೊಂಡೆ. ಬದುಕಿಗೊಂದು ಸ್ಥಿರತೆ ಬಂತು. ಮೊದಲ ಸಂಬಳದ ಚೆಕ್ ಬಂದು ಅದನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿದ ಹುಮ್ಮಸ್ಸು ನನ್ನದಾಗಿತ್ತು…. ಮುಂದೆ ಹೀಗೆಯೇ ಅಸಂಖ್ಯ ಹಣದ ಚೆಕ್ಕಳು ನನ್ನ ಅಕೌಂಟನ್ನು ತುಂಬತೊಡಗಿದವು ಹೀಗೆಯೇ ಎರಡು ಮೂರು ವರ್ಷ ಕಳೆಯಿತು. ಮನೆಯಲ್ಲಿ ಮದುವೆಯ ಮಾತುಕತೆ ನಡೆದು 25ಕ್ಕೆ ಮದುವೆಯಾಗಿ ವೈವಾಹಿಕ ಬದುಕಿನ ರಾಮಕಥೆ ಪ್ರಾರಂಭವಾಯಿತು. ಪ್ರೀತಿ, ಪ್ರೇಮ, ಪ್ರಣಯ, ಮೆಲು ಮಾತುಗಳು, ಭವಿಷ್ಯದ ಕುರಿತ ಬಣ್ಣದ ಕನಸುಗಳು, ಗಂಟೆಗಟ್ಟಲೆಯ ಫೋನ್ ಕರೆಗಳು, ಕೈ ಕೈ ಹಿಡಿದು ಓಡಾಟದಲ್ಲಿ…
ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಅಗ್ನಿಕರ್ಮ ಉಚಿತ ಚಿಕಿತ್ಸಾ ಶಿಬಿರ ಆಗಷ್ಟ 29 ರಿಂದ ಆಗಷ್ಟ 31ರ ಮೂರು ದಿನಗಳ ಕಾಲ ನಡೆಯಲಿದೆ.ಈ ಶಿಬಿರದಲ್ಲಿ ಬೆನ್ನು ನೋವು, ಕತ್ತು ನೋವು, ಹಿಮ್ಮಡಿ ನೋವು, ಸಂಧಿ ನೋವು ಮುಂತಾದವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನಿಡಲಾಗುವುದು. ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 95913398037 ಮತ್ತು 9513397413 ಸಂಪರ್ಕಿಸಬಹುದಾಗಿದೆ.
ವಿಜಯಪುರ: ನಗರದ ಖ್ಯಾತ ಲೆಕ್ಕಪರಿಶೋಧಕ ಶಾಂತವೀರ ಮತ್ತು ಶ್ವೇತಾ ಶಾಂ.ಮಣೂರ ದಂಪತಿಯ ಮುದ್ದಿನ ಮಗು ಕು.ನೀಲ್ ಮಣೂರ ಸೋಮವಾರ ಶ್ರೀಕೃಷ್ಣ ಗೋಕುಲಾಷ್ಟಮಿ ಪ್ರಯುಕ್ತ ಕೊಳನೂದುವ ಬಾಲ ಕೃಷ್ಣನಾಗಿ ಕಂಗೊಳಿಸಿದ್ದು ಹೀಗೆ..
Udayarashmi kannada daily newspaper
ವಿಜಯಪುರ: ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿ.ವ. ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನ ಹಾಗೂ ರಾಧೆಯ ವಿವಿಧ ವೇಷ ಪೋಷಾಕುಗಳನ್ನು ತೊಟ್ಟು ವಿದ್ಯಾರ್ಥಿಗಳು ಎಲ್ಲರನ್ನು ರಂಜಿಸಿದರಲ್ಲದೆ, ಶ್ರೀ ಕೃಷ್ಣನು ನುಡಿದ ತಾತ್ವಿಕ ಚಿಂತನೆಗಳನ್ನು ಪ್ರಸ್ತುತ ಪಡಿಸಿದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೆ.ಜಿ.ದೇಶಪಾಂಡೆ, ಮಕ್ಕಳ ವಿವಿಧ ಬಣ್ಣಗಳ ವೇಷಭೂಷಣ ನೋಡಿದಾಗ ಶಿಕ್ಷಕರ ಹಾಗೂ ಪಾಲಕರ ಶಿಸ್ತಿನ ಮಹತ್ವ ತೋರಿಸುತ್ತದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಆ ಮೂಲಕ ದೇಶ ಸೇವೆಯಲ್ಲಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದೇವೆ ಎಂಬ ಭಾವ ಮೂಡಿಸುತ್ತದೆ. ಜಗತ್ತಿನಲ್ಲಿ ಅಧರ್ಮ ಸೃಷ್ಟಿಯಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಜನಿಸಿ ಬರುತ್ತೇನೆಂದು ಶ್ರೀಕೃಷ್ಣನ ಲೋಕಕಲ್ಯಾಣಾರ್ಥ ಸಂದೇಶದ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಹೇಳಿದರು .ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ಉಪಸ್ಥಿತರಿದ್ದರು. ಪಾಲಕರು, ಶಿಕ್ಷಕರು ಸೇರಿದಂತೆ ಸಿಬ್ಬಂದಿ ಇದ್ದರು.
ಕೆಂಭಾವಿ: ಶ್ಲೋಕಗಳ ರೂಪದಲ್ಲಿ ಶ್ರೀಕೃಷ್ಣನ ಬೋಧನೆಯನ್ನು ಒಳಗೊಂಡಿರುವ ಶ್ರೇಷ್ಠ ಗ್ರಂಥವೇ ಭಗವದ್ಗೀತೆಯು ಶತಮಾನಗಳಷ್ಟು ಹಳೆಯದಾದರೂ, ಅದರ ಜ್ಞಾನ ಮತ್ತು ತರ್ಕವು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯ ಶಿಕ್ಷಕ ಪ್ರಾಣೇಶ್ ಕುಲ್ಕರ್ಣಿ ನಡಕೂರ ಹೇಳಿದರು.ಪಟ್ಟಣದ ಸಮೀಪವಿರುವ ಕೂಡಲಗಿ ಗ್ರಾಮದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಕೇವಲ ಭಾರತೀಯರಿಗೆ ಮಾತ್ರ ಪವಿತ್ರವಾದ ಗ್ರಂಥವಲ್ಲ, ಇದು ಜಗತ್ತಿನ ಎಲ್ಲ ಜಾತಿ, ಜನಾಂಗದವರು ಅಧ್ಯಯನ ಮಾಡಿ ಅರಿತು ಬಾಳುವ ಗ್ರಂಥವಾಗಿದ್ದು, ಶ್ರೀಕೃಷ್ಣರ ಉಪದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ ಕುಲಕರ್ಣಿ ಹಾಗೂ ವೆಂಕಟೇಶ್ ಕುಲಕರ್ಣಿ, ಸಹ ಶಿಕ್ಷಕಿಯರಾದ ಪ್ರತಿಕ್ಷಾ ಪಾಟೀಲ್, ಭಾಗ್ಯಶ್ರೀ ಮೆರೆಡ್ಡಿ, ಸರ್ಫಾನ್ ಬಿ ಕೂಡಲಗಿ, ಪಾರ್ವತಿ ಬಡಿಗೇರ್, ಅಯ್ಯಮ್ಮ, ಸಂದ್ಯಾ ಕೊಸೆಟ್ಟಿ ಶ್ರುತಿ, ನೇತ್ರಾ, ಯಮನಪ್ಪ, ಹುಲಗಪ್ಪ, ಹನುಮವ್ವ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
ವಿಜಯಪುರ: ಜಿಲ್ಲಾ ಪಂಚಾಯತಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯಕುಮಾರ ಅಜೂರೆ ಅವರ ಕಾರ್ಯ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದೆ.ಸೋಮವಾರ ಕಚೇರಿ ಕರ್ತವ್ಯವನ್ನು ಮುಗಿಸಿಕೊಂಡು ಮಧ್ಯಾಹ್ನದ ಸಮಯದಲ್ಲಿ ಇನ್ನೇನು ಊಟಕ್ಕೆ ಹೋಗಬೇಕು ಎಂದು ತಮ್ಮ ಕಚೇರಿಯ ಹೊರಗಡೆ ಬಂದಾಗ, ಕಚೇರಿ ಆವರಣದಲ್ಲಿ ನಿಂತಿರುವ ವೃದ್ಧನೋರ್ವರನ್ನು ಕಂಡು “ಜಗದ ಚಿಂತಿ ನಮಗ್ಯಾತಕೆ” ಎಂದುಕೊಳ್ಳದೇ ಪರರ ನೋವುಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ಅಜೂರೆ ಅವರು ತಕ್ಷಣ ಆ ವೃದ್ಧನ ಬಳಿ ತೆರಳಿ, ಅವರನ್ನು ಕಚೇರಿ ಒಳಗಡೆ ಕರೆದುಕೊಂಡು ಹೋಗಿ ಶಾಂತಚಿತ್ತದಿಂದ ಸಮಸ್ಯೆ ಆಲಿಸಿ, ಅದನ್ನು ಬಗೆಹರಿಸುವ ಭರವಸೆ ನೀಡಿ ವೃದ್ಧನಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಮಾನವೀಯತೆ ಮೆರೆದ ದೃಶ್ಯ ’ಉದಯರಶ್ಮಿ’ ಓದುಗರಿಗೆ ಕಂಡುಬಂದಿದೆ
ನಟ ದರ್ಶನ್ ಫೋಟೊ ವೈರಲ್ | ಜೈಲು ಅಧೀಕ್ಷಕನ ತಲೆದಂಡ | ದರ್ಶನ್ ವಿರುದ್ಧ 3 ಹೊಸ ಎಫ್ಐಆರ್ ದಾಖಲು ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ ಶೇಷಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ 9 ಜೈಲು ಅಧಿಕಾರಿಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.ನಗರದ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್‌ಗೆ ಜೈಲಿನೊಳಗೆ ಸಿಗರೇಟ್ ಸೇದಲು ಮತ್ತು ಕಾಫಿ ಕುಡಿಯಲು ಅವಕಾಶ ನೀಡಿದ ಇಬ್ಬರು ಜೈಲರ್‌ಗಳು ಸೇರಿದಂತೆ 9 ಅಧಿಕಾರಿಗಳನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿದೆ.ನಟ ದರ್ಶನ್ ಕೈಯಲ್ಲಿ ಕಾಫಿ ಮಗ್ ಹಿಡಿದು ಸಿಗರೇಟ್ ಸೇದುತ್ತಿರುವ ಫೋಟೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಇಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಜೈಲರ್‌ಗಳಾದ ಶರಣ ಬಸಪ್ಪ ಅಮಂಗಡ್ ಮತ್ತು ಪ್ರಭು ಎಸ್…
ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ನಿಖಿತಾ ಸುರೇಶ ಗವರೋಜಿ 2023-24 ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಪಾಸಾದ ಕಾರಣ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯ ಜಮಖಂಡಿ ಹಾಗೂ ಮಧುರಖಂಡಿಯ ಸಾಯಿ ಸಂಕಲ್ಪ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಪ್ರತಿಭಾವಂತ ಪ್ರತಿಭೆಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕವಟಗಿ ಗ್ರಾಮದ ಪ್ರತಿಭಾವಂತೆ ವಿದ್ಯಾರ್ಥಿನಿ ಕುಮಾರಿ ನಿಖಿತಾ ಗವರೋಜಿ ಪ್ರಸ್ತುತ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲೆಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಶಿಕ್ಷಣ ತಜ್ಞರು, ಪ್ರಭಾರ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಮಾರ್ಗದಶಿ೯ ಶಿಕ್ಷಕ ಬಸವರಾಜ ಅನಂತಪುರ ಸೇರಿದಂತೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಶಾಲಾ ಸಿಬ್ಬಂದಿ…
ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವವು ಮುಂದಿನ ವರ್ಷದ ಶ್ರಾವಣ ಮಾಸದಲ್ಲಿ ಜರುಗುವ ಜಾತ್ರಾಮಹೋತ್ಸವ ಖಂಡಿತ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯಿಂದ ನೆರವೇರುತ್ತದೆ ಎಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಜಾತ್ರಾಮಹೋತ್ಸವಕ್ಕೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ ನಂತರ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರತಿ ವರ್ಷ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಪಟ್ಟಣದ ಎಲ್ಲ ಮುಖಂಡರ, ಜನರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಬಸವೇಶ್ವರರ ಜನ್ಮ ಸ್ಥಳ ಬಸವನಬಾಗೇವಾಡಿಯ ಅಭಿವೃದ್ದಿಗಾಗಿ ಈಗಾಗಲೇ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ನಮ್ಮ ಮನವಿ, ಬಸವ ಭಕ್ತರ ಒತ್ತಾಸೆಯಂತೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ಮೂಲಕ ಮುಂದಿನ ಜಾತ್ರಾಮಹೋತ್ಸವ ಖಂಡಿತ ಈ ಮಂಡಳಿಯ ಅಡಿಯಲ್ಲಿ ನಡೆಯಲಿದೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಸುದ್ದಿಗಾರರು…
