ವಿಜಯಪುರ: ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿ.ವ. ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನ ಹಾಗೂ ರಾಧೆಯ ವಿವಿಧ ವೇಷ ಪೋಷಾಕುಗಳನ್ನು ತೊಟ್ಟು ವಿದ್ಯಾರ್ಥಿಗಳು ಎಲ್ಲರನ್ನು ರಂಜಿಸಿದರಲ್ಲದೆ, ಶ್ರೀ ಕೃಷ್ಣನು ನುಡಿದ ತಾತ್ವಿಕ ಚಿಂತನೆಗಳನ್ನು ಪ್ರಸ್ತುತ ಪಡಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೆ.ಜಿ.ದೇಶಪಾಂಡೆ, ಮಕ್ಕಳ ವಿವಿಧ ಬಣ್ಣಗಳ ವೇಷಭೂಷಣ ನೋಡಿದಾಗ ಶಿಕ್ಷಕರ ಹಾಗೂ ಪಾಲಕರ ಶಿಸ್ತಿನ ಮಹತ್ವ ತೋರಿಸುತ್ತದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಆ ಮೂಲಕ ದೇಶ ಸೇವೆಯಲ್ಲಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದೇವೆ ಎಂಬ ಭಾವ ಮೂಡಿಸುತ್ತದೆ. ಜಗತ್ತಿನಲ್ಲಿ ಅಧರ್ಮ ಸೃಷ್ಟಿಯಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಜನಿಸಿ ಬರುತ್ತೇನೆಂದು ಶ್ರೀಕೃಷ್ಣನ ಲೋಕಕಲ್ಯಾಣಾರ್ಥ ಸಂದೇಶದ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಹೇಳಿದರು .
ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ಉಪಸ್ಥಿತರಿದ್ದರು. ಪಾಲಕರು, ಶಿಕ್ಷಕರು ಸೇರಿದಂತೆ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

