ಕೆಂಭಾವಿ: ಶ್ಲೋಕಗಳ ರೂಪದಲ್ಲಿ ಶ್ರೀಕೃಷ್ಣನ ಬೋಧನೆಯನ್ನು ಒಳಗೊಂಡಿರುವ ಶ್ರೇಷ್ಠ ಗ್ರಂಥವೇ ಭಗವದ್ಗೀತೆಯು ಶತಮಾನಗಳಷ್ಟು ಹಳೆಯದಾದರೂ, ಅದರ ಜ್ಞಾನ ಮತ್ತು ತರ್ಕವು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಖ್ಯ ಶಿಕ್ಷಕ ಪ್ರಾಣೇಶ್ ಕುಲ್ಕರ್ಣಿ ನಡಕೂರ ಹೇಳಿದರು.
ಪಟ್ಟಣದ ಸಮೀಪವಿರುವ ಕೂಡಲಗಿ ಗ್ರಾಮದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಕೇವಲ ಭಾರತೀಯರಿಗೆ ಮಾತ್ರ ಪವಿತ್ರವಾದ ಗ್ರಂಥವಲ್ಲ, ಇದು ಜಗತ್ತಿನ ಎಲ್ಲ ಜಾತಿ, ಜನಾಂಗದವರು ಅಧ್ಯಯನ ಮಾಡಿ ಅರಿತು ಬಾಳುವ ಗ್ರಂಥವಾಗಿದ್ದು, ಶ್ರೀಕೃಷ್ಣರ ಉಪದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ ಕುಲಕರ್ಣಿ ಹಾಗೂ ವೆಂಕಟೇಶ್ ಕುಲಕರ್ಣಿ, ಸಹ ಶಿಕ್ಷಕಿಯರಾದ ಪ್ರತಿಕ್ಷಾ ಪಾಟೀಲ್, ಭಾಗ್ಯಶ್ರೀ ಮೆರೆಡ್ಡಿ, ಸರ್ಫಾನ್ ಬಿ ಕೂಡಲಗಿ, ಪಾರ್ವತಿ ಬಡಿಗೇರ್, ಅಯ್ಯಮ್ಮ, ಸಂದ್ಯಾ ಕೊಸೆಟ್ಟಿ ಶ್ರುತಿ, ನೇತ್ರಾ, ಯಮನಪ್ಪ, ಹುಲಗಪ್ಪ, ಹನುಮವ್ವ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
Subscribe to Updates
Get the latest creative news from FooBar about art, design and business.
Related Posts
Add A Comment

