Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ರಾಷ್ಟ್ರೀಯ ಶಸ್ತ್ರಚಿಕಿತ್ಸಾ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಬಿ ಎಲ್ ಡಿ ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ರಕ್ತ ನಿಧಿ ಕೇಂದ್ರದಲ್ಲಿ ಸೋಮವಾರ ವೈದ್ಯರಿಂದ ರಕ್ತದಾನ ಶಿಬಿರ ನಡೆಯಿತು.ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗ ಮತ್ತು ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಸುಮಾರು 15 ಜನ ವೈದ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ. ಎಂ. ಬಿ. ಪಾಟೀಲ, ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ, ಪ್ರಾಧ್ಯಾಪಕರಾದ ಡಾ. ಗಿರೀಶ ಕುಲ್ಲೊಳ್ಳಿ, ಡಾ. ವಿಕ್ರಂ ಸಿಂದಗಿಕರ, ಡಾ. ಶ್ರುತಿ ಶಿಳ್ಳೀನ, ಡಾ. ವೀಣಾ ಕೋರಿಶೆಟ್ಟಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ವೈಷ್ಣವಿ, ಡಾ. ಶ್ರೀಹರಿ ಮತ್ತು ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಪ್ರಕಾಶ ಪಾಟೀಲ ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲೆಯ ಕೃಷ್ಣಾ ನದಿಯಲ್ಲಿ ಭೀಕರ ಘಟನೆ ನಡೆದಿದೆ. ಜೂಜು ಆಡುತ್ತಿದ್ದ ವೇಳೆ ಪೊಲೀಸರು ದಾಳಿಯಿಂದ ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಪರಾರಿಯಾಗುವ ವೇಳೆ ಘೋರ ದುರ್ಘಟನೆ ನಡೆದಿದೆ. ಐವರು ಜಲ ಸಮಾಧಿಯಾಗಿದ್ದು, ಮೂವರು ಪಾರಾಗಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಹೊರ ಭಾಗದ ಕೃಷ್ಣಾ ನದಿ ತಟದಲ್ಲಿ ಮಂಗಳವಾರ ಐವರು ಜಲಸಮಾಧಿಯಾಗಿದ್ದಾರೆ.ನದಿ ತಟದಲ್ಲಿ ಎಂಟು ಜನರ ತಂಡ ಇಸ್ಪೀಟ್ ಆಟವಾಡುತ್ತಿದ್ದ ವೇಳೆ ಕೊಲ್ಹಾರ ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ತಡ ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲೇ ಹತ್ತಿರದಲ್ಲಿ ತೆಪ್ಪದಲ್ಲಿ ಪಾರಾಗಲು ಯತ್ನಿಸಿದ್ದಾರೆ. ಆದರೆ ಅವರ ದುರಾದೃಷ್ಟ ನದಿ ಮಧ್ಯೆದಲ್ಲೇ ತೆಪ್ಪ ಮುಗುಚಿ ಬಿದ್ದಿದೆ. ಜೋರಾದ ಗಾಳಿಯಿಂದಾಗಿ ತೆಪ್ಪದ ನಿಯಂತ್ರಣ ತಪ್ಪಿದ್ದು, ಎಂಟು ಜನ ನೀರು ಪಾಲಾಗಿದ್ದಾರೆ. ಈ ಮೂವರು ಜೀವ ಉಳಿಸಿಕೊಂಡಿದ್ದು, ಉಳಿದವರು ಜಲ ಸಮಾಧಿಯಾಗಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡ ಸಹ ಕತ್ತಲಾಗಿದ್ದ ಕಾರಣ ಹಾಗೂ ಅತೀಯಾದ ಗಾಳಿಯಿಂದಾಗಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು…
ಆಲಮಟ್ಟಿ: ತಾವು ಕಲಿತ ಇಲ್ಲಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿಯೊಬ್ಬ 60 ಸಾವಿರ ಮೌಲ್ಯದ ಎಚ್ ಪಿ ಲ್ಯಾಪ್ ಟಾಪ್ ನೀಡಿದ್ದಾರೆ.ಹುಬ್ಬಳ್ಳಿ ತಾಲ್ಲೂಕಿನಲ್ಲಿ ಪಿಡಿಓ ಆಗಿರುವ ಗಿರೀಶ ಅಮರಗೊಂಡ ಇಲ್ಲಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಲ್ಯಾಪ್ ಟಾಪ್ ನೀಡಿದರು.ಈಚೆಗೆ ಆಲಮಟ್ಟಿಯಲ್ಲಿ ನಡೆದ ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಲ್ಯಾಪ್ ಟಾಪ್ ನ್ನು ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ ಅವರಿಗೆ ಹಸ್ತಾಂತರಿಸಿದರು.ಸರ್ಕಾರಿ ಶಾಲೆಯಲ್ಲಿಯೂ ಸ್ಮಾರ್ಟ್ ಕ್ಲಾಸ್ ಅಳವಡಿಸಬೇಕಿದೆ. ಆ ನಿಟ್ಟಿನಲ್ಲಿ ಲ್ಯಾಪ್ ಟಾಪ್ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಬಡ ಮಕ್ಕಳ ಶೈಕ್ಷಣಿಕ ಏಳಿಗೆಗೆ ಕೈಜೋಡಿಸುವೆ ಎಂದು ಗಿರೀಶ ಅಮರಗೊಂಡ ತಿಳಿಸಿದರು.
ಕೆಂಭಾವಿ: ರಾಜ್ಯಾದ್ಯಂತ ಡ್ಯೆಂಗ್ಯು, ಚಿಕನ್ ಗುನ್ಯಾ ಮತ್ತು ಮಲೇರಿಯ ಪ್ರಖರಣಗಳು ಹೆಚ್ಚಾಗುತ್ತಿದ್ದು ಜಿಲ್ಲಾ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆಗಳು ರೋಗಿಗಳ ಸೇವೆಗೆ ಸನ್ನದ್ದವಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾವೆಂಕಪ್ಪ ನಾಯಕ್ ಅವರು ಹೇಳಿದರು.ಪಟ್ಟಣದ ಸಮೀಪ ಗುತ್ತಿಬಸವೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳವನ್ನು ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಳೆಗಾಲ ಆರಂಭವಾದ ಕಾರಣ ಸಾರ್ವಜನಿಕರು ಮನೆಯ ಸುತ್ತ ಮುತ್ತಲಿನ ವಾತಾವರಣ ಸ್ವಚ್ಚತೆಯ ಜೊತೆ ಮನೆಗಳಲ್ಲಿ ನೀರನ್ನು ಟ್ಯಾಂಕರ್, ಕ್ಯಾನ್, ಬಿಂದಿಗೆಯಲ್ಲಿ ಶೇಕರಿಸಿ ಇಡುವವರು ಸ್ವಚ್ಚವಾಗಿಡಲು ತಿಳಿಸುತ್ತಾ. ಆರೋಗ್ಯದ ಹಿತ ದೃಷ್ಟಿಯಿಂದ ವಿಷಪುರಿತ ಆಹಾರವನ್ನು ಸೇವನೆ ಮಾಡದಿರಲು ಸಲಹೆ ನೀಡಿದವರು.ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡದೆ ದಿನದ ಇಪ್ಪತ್ನಾಲ್ಕು ಗಂಟೆ ಸಾರ್ವಜನಿಕರ ಸೇವೆಗೆ ಇಲಾಖೆ ಬದ್ಧವಾಗಿದೆ ಎಂದರು.ಇದೇ ವೇಳೆ ಜಿಲ್ಲಾ…
-ಕಬೂಲ್ ಕೊಕಟನೂರ,ಶಿಕ್ಷಕ-ಸಾಹಿತಿ, ದೇವರಹಿಪ್ಪರಗಿ (ವಿಜಯಪುರ) ಭಕ್ತಿಭಾವಗಳ ಸಂಗಮವಾಗಿರುವ ವಿಜಯಪುರ ಜಿಲ್ಲೆ ಭಾವೈಕ್ಯತೆಯ ತಾಣವಾಗಿದೆ. ಆಧ್ಯಾತ್ಮಿಕ ನೆಲೆಗಟ್ಟಿನ ತವರೂರಾಗಿದೆ. ವಿಶೇಷವಾಗಿ ಬಂಜಾರಾ ಸಮುದಾಯದಲ್ಲಿ ಭಕ್ತಿ ಪರಾಕಾಷ್ಠೆ ಪ್ರಖರಗೊಂಡಿದ್ದು, ಸೋಮದೇವರಹಟ್ಟಿ ತಾಂಡಾದ ದುರ್ಗಾದೇವಿ ಬಂಜಾರಾ ಭಕ್ತರ ಪಾಲಿನ ಭಾಗ್ಯವಿಧಾತೆಯಾಗಿದ್ದಾಳೆ. ಪುಟ್ಟ ತಾಂಡಾದಲೊಂದು ದೇವಿ ತನ್ನ ದಿವ್ಯ ಶಕ್ತಿ, ಮಹಿಮೆಯಿಂದ ಇಂದು ಜಗದಗಲಕ್ಕೂ ಪ್ರಸಿದ್ಧಿಯಾಗಿರುವುದು ಧಾರ್ಮಿಕ ಪರಂಪರೆಗೆ ಪಾವನ ಸಾಕ್ಷಿಯಾಗಿದೆ. ರಾಜ್ಯದಲ್ಲಷ್ಟೇ ಅಲ್ಲದೆ ದೇಶ, ವಿದೇಶಗಳ ಗಣ್ಯರ ದೈವತ್ವದ ದಂಡು ಹರಿದು ಬರುತ್ತಿರುವುದು ದೇವಿಯ ಪ್ರಭಾವ ಸಾಕ್ಷೀಕರಿಸುವಂತಾಗಿದೆ.ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ೧ ಎಂದಾಕ್ಷಣ ನೆನಪಾಗುವುದು ದುರ್ಗಾಮಾತೆಯ ಜಾತ್ರಾ ವೈಭವ! ಇದೇ ಜುಲೈ ೫ರಂದು ಲಕ್ಷಾಂತರ ಭಕ್ತರ ಮದ್ಯೆ ಸಡಗರ ಸಂಭ್ರಮದಿಂದ ಜರಗುವ ಜಾತ್ರಾಮಹೋತ್ಸವ ಐತಿಹಾಸಿಕವಾಗಿದೆ. ದೈತ್ಯ ಶಕ್ತಿ ದುರ್ಗೆಯ ದುಗ್ಧಕರುಣಾರಸ ಚರಿತ್ರೆ ಲಕ್ಷಾಂತರ ಭಕ್ತರ ಮನದಲ್ಲಿ ನೆಮ್ಮದಿ, ನಸುಗೆಂಪು ನಗೆ ಚೆಲ್ಲಿದೆ. ದೇವಿಯ ದರ್ಶನದಿಂದ ಅದೇನೋ ಸಾರ್ಥಕ್ಯಭಾವ, ಜೀವನ ಪಾವನ ಎಂಬ ಆಶಾಕಿರಣ ಭಕ್ತಂಗಣದಲ್ಲಿ ಕಾಣಿಸಿಕೊಂಡಿದೆ. ಪರಿಣಾಮ ಆಧ್ಯಾತ್ಮಿಕ, ಐತಿಹಾಸಿಕ ಮೆರುಗು ಈ ಪುಟ್ಟ ತಾಂಡಾಕ್ಕೆ ಒಲಿದು ಬರುತ್ತಿದೆ. ಜನಪ್ರಿಯತೆಯ ಜಾಡಿನಲ್ಲಿ ಎಲ್ಲರ ಚಿತ್ತ ತನ್ನತ್ತ…
ಹಾಸ್ಟೇಲ್ ಪ್ರವೇಶಾತಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ಬಿಡುಗಡೆಗೆ ಸರ್ಕಾರಕ್ಕೆ ಆಗ್ರಹ ವಿಜಯಪುರ: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ಬುಧವಾರ ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.ಮನವಿ ಸಮಯದಲ್ಲಿ ವಿದ್ಯಾರ್ಥಿಗಳ ಮತ್ತು ಪೊಲೀಸ್ ನಡುವೆ ನೂಕು-ತಳ್ಳಾಟ ನಡೆಯಿತು.ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನ ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ, ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲಭೂತ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ, ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುವುದರಲ್ಲಿ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨ ಸಕಾರಾತ್ಮಕ ಮನೋಭಾವ ಎಂದರೆ,,ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ ಭಾಗವನ್ನು ಕೇಂದ್ರೀಕರರಿಸುತ್ತದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ.’ ಇನ್ನೊಂದು ಹೆಚ್ಚು ವಿಸ್ತೃತವಾದ ಚರ‍್ರಿಯವರು ನೀಡಿರುವ ವ್ಯಾಖ್ಯಾನವನ್ನು ನೋಡುವುದಾದರೆ ‘ ಧನಾತ್ಮಕ ಚಿಂತನೆಯು ವಾಸ್ತವವಾಗಿ ಜೀವನದ ಸವಾಲುಗಳನ್ನು ಸಕಾರಾತ್ಮಕ ದೃಷ್ಟ್ಟಿಕೋನದಿಂದ ಸಮೀಪಿಸುವುದು ಎಂದರ್ಥ. ಕೆಟ್ಟ ವಿಷಯಗಳನ್ನು ತಪ್ಪಿಸುವುದು ಅಥವಾ ನಿರ್ಲಕ್ಷಿಸುವುದು ಎಂದರ್ಥವಲ್ಲ. ಬದಲಾಗಿ ಸಂಭಾವ್ಯ ಕೆಟ್ಟ ಸನ್ನಿವೇಶಗಳನ್ನು ಹೆಚ್ಚು ಬಳಸಿಕೊಳ್ಳುವುದು. ಇತರ ಜನರಲ್ಲಿ ಉತ್ತಮವಾದುದದ್ದನ್ನು ನೋಡಲು ಪ್ರಯತ್ನಿಸುವುದು ಮತ್ತು ನಿಮ್ಮನ್ನು ನಿಮ್ಮ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ನೋಡುವುದನ್ನು ಒಳಗೊಂಡಿರುತ್ತದೆ.’ ಧನಾತ್ಮಕವಾದ ಮನಸ್ಥಿತಿಯು ಪ್ರಕಾಶಮಾನವಾದ ಬದಿಯಲ್ಲಿ ಗಮನಹರಿಸುವ ಮತ್ತು ಸವಾಲುಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಸಮೀಪಿಸುವ ಪ್ರವೃತ್ತಿಯೆಂದು ಈ ವ್ಯಾಖ್ಯಾನಗಳಿಂದ ತಿಳಿದು ಬರುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದುವುದು ಎಂದರೆ ಧನಾತ್ಮಕ ಚಿಂತನೆಯನ್ನು ಅಭ್ಯಾಸ ಮಾಡುವುದು.…
ಬಳೂತಿ ಜಾಕವೆಲ್ ಬಳಿ ನಡೆದ ಘಟನೆ | ನದಿ ದಡದಲ್ಲಿ ಇಸ್ಪೀಟ್ ಆಟ | ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿಗಿಳಿದ ಯುವಕರು ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 4 ಮಂದಿ ನೀರುಪಾಲಾಗಿರುವ ಘಟನೆ ನಡೆದಿದೆ.ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಇನ್ನು ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸದ್ಯ ಇಬ್ಬರ ಶವ ಹೊರ ತೆಗೆಯಲಾಗಿದ್ದು ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.ಇನ್ನು ವಿಷಯ ತಿಳಿದು ಸ್ಥಳಕ್ಕೆ ಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾರ ದೌಡಾಯಿಸಿ ಪರಿಶೀಲನೆ…
ಮುದ್ದೇಬಿಹಾಳ: ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಲಾಯಿತು. ಚುನಾವಣಾ ಆಯೋಗದ ನೀತಿ ನಿಯಮಗಳಂತೆ ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆಯ ಎಲ್ಲ ಪ್ರಕ್ರೀಯೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿಸಲಾಯಿತು.ಚುನಾವಣೆಯ ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಪ್ರಧಾನ ಮಂತ್ರಿಯಾಗಿ ಸಮರ್ಥ ಮಡಿವಾಳರ, ವಾರ್ತಾ & ಕ್ರೀಡಾ ಮಂತ್ರಿಯಾಗಿ ನಕುಲ್ ಇಂಗಳೇಶ್ವರ, ಪರಿಸರ ಸಂರಕ್ಷಣಾ ಮಂತ್ರಿಯಾಗಿ ನಿವೇದಿತಾ ದಡ್ಡಿ, ಸಂಸ್ಕೃತಿಕ & ಪ್ರವಾಸೋದ್ಯಮ ಮಂತ್ರಿಯಾಗಿ ಅಮೃತಾ ಉಪ್ಪಲದಿನ್ನಿ, ಆರೋಗ್ಯಮಂತ್ರಿಯಾಗಿ ಸಾನಿಯಾಬೇಗಂ ನಧಾಪ, ವಿರೋದ ಪಕ್ಷದ ನಾಯಕಿ ಸೃಷ್ಟಿ ಪಣೇದಕಟ್ಟಿ ಆಯ್ಕೆಯಾದರು.ಈ ಪ್ರಕ್ರೀಯೆಯಲ್ಲಿ ಶಾಲಾ ಬೋಧಕ ಸಿಬ್ಬಂದಿಗಳಾದ ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಎಮ್.ಎನ್.ಯರಝರಿ, ಸಹ ಚುನಾವಣಾ ಅಧಿಕಾರಿ ಎಮ್.ಸಿ.ಕಬಾಡೆ, ಗೋಪಾಲ ಹೂಗಾರ, ಎಲ್.ಎಚ್.ಗುಬಚಿ, ಬಿ.ಎ.ಬರದೇನಾಳ, ಆರ್.ವಾಯ್.ಪಾಟೀಲ, ಜಿ.ಕೆ.ವಾಲಿಕಾರ, ಬಿ.ವಾಯ್.ಮಳಗೌಡರ ಕರ್ತವ್ಯ ನಿರ್ವಹಿಸಿದರು.ಶಾಲೆಯ…
ಸಿಂದಗಿ: ತಾಲೂಕಿನಲ್ಲಿಯೇ ನರೇಗಾದಡಿ ನಿರ್ಮಾಣವಾದ ಈ ಕಾಮಗಾರಿ ಉತ್ತಮವಾಗಿದೆ. ಆದ್ದರಿಂದ ತಾಲೂಕಿನ ಉಳಿದ ಗ್ರಾಮ ಪಂಚಾಯತಿಗಳಿಗೆ ಇದು ಮಾದರಿಯಾಗಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಬಂದಾಳ ಗ್ರಾಮದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಸಿಂದಗಿ ತಾಲೂಕು ಪಂಚಾಯತ್ ಹಾಗೂ ಬಂದಾಳ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡ ನೂತನ ಎನ್.ಆರ್.ಎಲ್.ಎಮ್ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆ ಅನಿಯಮಿತ ಮತ್ತು ಬೇಡಿಕೆಗೆ ಅನುಗುಣವಾಗಿ ಕೆಲಸ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಗ್ರಾಪಂ ಅದ್ಯಕ್ಷೆ ಸುವರ್ಣ ಮಕಣಾಪುರ ಅಧ್ಯಕ್ಷತೆ ವಹಿಸಿದ್ದರು. ಜಟ್ಟೆಪ್ಪ ಉಕ್ಕಲಿ, ತಾಪಂ ಇಒ ರಾಮು ಅಗ್ನಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಒ ಬಸವರಾಜ ಶಹಾಪೂರ, ಕಾರ್ಯದರ್ಶಿ ರಾಜಾಕಸಾಬ ಮುಜಾವರ, ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಸಂತೋಷ ಪಾಸೋಡಿ, ರಾಜಶೇಖರ ಹಿರೇಕುರುಬರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು,…
