ಚಡಚಣ: ತಾಲೂಕಿನ ಸಮೀಪದ ಧುಮಕನಾಳ ಗ್ರಾಮದಲ್ಲಿ ಜರುಗಿದ ಲಾಯಗಂಗಾ ದೇವಿಯ ಜಾತ್ರೆಯಲ್ಲಿ ಧುಮಕನಾಳ ಹಾಗೂ ಹಡಲಸಂಗ ಲಾಯಗಂಗಾ ದೇವಿಯ ಭೇಟಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿಮಿತ್ತವಾಗಿ ಗ್ರಾಮದ ಲಾಯಗಂಗಾದೇವಿ ದೇವರ ಜಾತ್ರಾ
ಮಹೋತ್ಸವದ ಅಂಗವಾಗಿ ನಡೆದ ಶ್ರೀ ಭೀರಲಿಂಗೇಶ್ವರ ಹಾಗೂ ಹಡಲಸಂಗ ಗ್ರಾಮದ
ಲಾಯಗಂಗಾದೇವಿ ಪಲ್ಲಕ್ಕಿ ಭೇಟಿ ನಡೆಯಿತು. ಮಧ್ಯಾಹ್ನ 2:30 ಜರುಗಿದ ಈ ಭವ್ಯ ಭೇಟಿಯಲ್ಲಿ ಪಲ್ಲಕ್ಕಿಯ ಮೇಲೆ ನೂರಾರು ಭಕ್ತರು ಭಕ್ತಿಯ ಭಂಡಾರವನ್ನು ಚೆಲ್ಲಿ ಭಕ್ತಿಭಾವದಿಂದ ನಮನ ಸಲ್ಲಿಸಿದರು. ಗ್ರಾಮವು ಸುತ್ತಮುತ್ತಲಿನ
ಗ್ರಾಮಗಳಿಂದ ಜಮಾಯಿಸಿದ ಭಾರಿ ಜನಸ್ತೋಮದಿಂದ ಕಂಗೊಳಿಸುವಂತ್ತಿತ್ತು. ಬೇಧ ಭಾವವಿಲ್ಲದೆ ಸಕಲ
ಸದ್ಭಕ್ತರು, ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಜಾತ್ರೆಯಲ್ಲಿ
ಭಾಗವಹಿಸಿ ಭೀರಲಿಂಗೇಶ್ವರ ಹಾಗೂ ಲಾಯಗಂಗಾ ದೇವರಿಗೆ ನೈವೇದ್ಯ, ತೆಂಗಿನಕಾಯಿ ಒಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ತಾಯಿಯ ಕೃಪಾಶಿರ್ವಾದಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಸೆರಿದ್ದ ನೂರಾರು ಜನರ ಜನಸ್ತೋಮದಿಂದ ಮೈಮನ
ತಣಿಸುವಂತಿತ್ತು.
ಈ ವೇಳೆಯಲ್ಲಿ ಗ್ರಾಮದ ಅತ್ಯುತ್ತಮ ಹಿನ್ನೆಲೆ ಗಾಯಕ
ಭೈರುಬಾ ತಾಟೆ ಮತ್ತು ಸಂಗಡಿಗರಿಂದ ಡೊಳ್ಳಿನ ಪದಗಳು ಜರುಗಿದವು.
ಈ ವೇಳೆಯಲ್ಲಿ ಗ್ರಾಮದ ಮುಖಂಡರು, ಸುತ್ತಮತ್ತಲಿನ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

