Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಕೇಂದ್ರ ಸಾಹಿತ್ಯ ಅಕಾದೆಮಿಯ ನವದೆಹಲಿ ಹಾಗೂ ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಕಾಲೇಜಿನ ಸಹಯೋಗದಲ್ಲಿ ಇದೇ ೩೧ರಂದು ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ‘ರಾಘವೇಂದ್ರ ಖಾಸನೀಸ ಕಥನ ಮಾರ್ಗ’ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆರ್. ಎಚ್. ರಮೇಶ ವಹಿಸಿಕೊಳ್ಳಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಿರಿಯ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಹಾಗೂ ವಿಜಯಪುರದ ಹಿರಿಯ ವಿಮರ್ಶಕ ಮನು ಪತ್ತಾರ ಅವರು ರಾಘವೇಂದ್ರ ಖಾಸನೀಸರ ಕತೆಗಳ ಕುರಿತು ಮಾತನಾಡಲಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ವಿಜಯಪುರದ ಓದುಗರ ಚಾವಡಿಯ ಅಧ್ಯಕ್ಷ ಶರಣು ಸಬರದ, ತಾಲ್ಲೂಕು ಕನ್ನಡ ಸಾಹಿತ್ಯ ಪರಿತ್ತಿನ ಗೌರವ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು,ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡ ಪಟ್ಟಣದ ಡಾ.ಶಿವಯೋಗೆಪ್ಪ ಮಾಡ್ಯಾಳರನ್ನು ಇದೇ ಸಂದರ್ಭದಲ್ಲಿ…
ಬಸವನಬಾಗೇವಾಡಿ: ಸಹಕಾರಿ ಸಂಘಗಳು ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನ ನೀಡಿವೆ ಎಂದು ಜವಳಿ, ಸಕ್ಕರೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಗ್ರಾಮದಲ್ಲಿ ಶ್ರೀ ವಿನಾಯಕ ವಿವಿಧೋದ್ದೇಶಗಳ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ದೇಶದ ಜನತೆ ಅಗತ್ಯ ವಸ್ತುಗಳ ಅವಶ್ಯಕತೆಗಾಗಿ ವಿದೇಶದ ಮೇಲೆ ಅವಲಂಬಿತರಾಗಿರುವ ಕಾಲ ಒಂದಾಗಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಸಹಕಾರಿ ರಂಗಗಳ ಸಹಾಯದಿಂದ ಅಗತ್ಯ ವಸ್ತುಗಳನು ನಮ್ಮ ದೇಶದಲ್ಲಿಯೇ ಪಡೆಯುವಂತಾಗಿದೆ, ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ ಎನ್ನುವುದಕ್ಕೆ ಮನಗೂಳಿಯ ವಿನಾಯಕ ವಿವಿಧೋದ್ದೇಶಗಳ ಸಹಕಾರಿ ಸಂಘ ಸಾಕ್ಷಿಯಾಗಿದೆ ಇದೇ ರೀತಿಯಲ್ಲಿ ನಮ್ಮ ಡಿಸಿಸಿ ಬ್ಯಾಂಕಿನ ನಮ್ಮ ಹಿರಿಯರು ಕೇವಲ 63 ಸಾವಿರದಿಂದ ಆರಂಭವಾದ ಡಿಸಿಸಿ ಬ್ಯಾಂಕ್ ಇಂದು ರೂ,ಒಂದು ಸಾವಿರದಾ ಮೂರನೂರು ಕೋಟಿ ವ್ಯವಹಾರ ಹೊಂದಿದೆ, ಪ್ರಸಕ್ತ ವರ್ಷದಲ್ಲಿ ನಮ್ಮ ಬ್ಯಾಂಕ್ 28 ಕೋಟಿ ಲಾಭ ಗಳಿಸಿದೆ ಎಂದರು.ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದವರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಿದಾಗ…
ಬಸವನಬಾಗೇವಾಡಿ: ಕೃಷಿ ಮೇಳಗಳು ರೈತ ಬಾಂಧವರ ಜೀವನದಲ್ಲಿ ಬದಲಾವಣೆ ಮಾಡಲು ಪೂರಕವಾಗಿವೆ. ರೈತ ಬಾಂಧವರು ಕೃಷಿ ಮೇಳದ ಸದುಪಯೋಗ ಪಡೆದುಕೊಂಡು ವೈಜ್ಞಾನಿಕ ಚಿಂತನೆ ಮಾಡಿ ಕೃಷಿ ಮಾಡಿದರೆ ಲಾಭ ಪಡೆಯಬಹುದು ಎಂದು ಸಕ್ಕರೆ, ಕೃಷಿ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜಾತ್ರೆಯ ನಾಲ್ಕನೇ ದಿನ ಗುರುವಾರ ದೇವಸ್ಥಾನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ, ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಹಮ್ಮಿಕೊಂಡಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು. ರೈತರ ಪರಿಶ್ರಮಕ್ಕೆ ಬೆಲೆ ಕಟ್ಟುವ ಯಾವ ಸರ್ಕಾರವೂ ಇದುವರೆಗೂ ಬಂದಿಲ್ಲ. ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತಹ ಪ್ರಧಾನಿ ದೇಶಕ್ಕೆ ಇದುವರೆಗೂ ಸಿಗದೇ ಇರುವದು ರ್ದೌಭಾಗ್ಯ. ರೈತರ ಪರಿಶ್ರಮಕ್ಕೆ ಬೆಲೆ ಸಿಗಬೇಕಾದರೆ ಲಾಭದಾಯಕ ಬೆಳೆಗಳನ್ನು ಬೆಳೆಯುವಂತಾಗಬೇಕು. ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ನಷ್ಟವಾಗದಂತೆ ನೋಡಿಕೊಳ್ಳಬೇಕೆಂದರು.ಉತ್ತರಪ್ರದೇಶ, ಆಂದ್ರಪ್ರದೇಶ, ಕರ್ನಾಟಕ ರಾಜ್ಯದಲ್ಲಿ…
೧೧ ಜನ ಪತ್ರಕರ್ತರಿಗೆ ಕೆಯುಡಬ್ಲೂಜೆ ತಾಲೂಕು ಪ್ರಶಸ್ತಿ ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ, ಸೌಲಭ್ಯ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ತಾಲೂಕಿನ ’ಉದಯರಶ್ಮಿ’ ವರದಿಗಾರ ಚೇತನ ಶಿವಶಿಂಪಿ ಸೇರಿದಂತೆ ೧೧ ಜನ ಪತ್ರಕರ್ತರಿಗೆ ಕೆಯುಡಬ್ಲೂಜೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು, ಕಾನಿಪ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಯುವ ಉದ್ಯಮಿ ಭರತ ಪಾಟೀಲ ನಡಹಳ್ಳಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ದಿ ಕರ್ನಾಟಕ ಕೋಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಸಮಾಜ ಸೇವಕ ಸಿ.ಬಿ.ಅಸ್ಕಿ, ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ, ಅರಿಹಂತ…
ದೇವರಹಿಪ್ಪರಗಿ: ಶ್ರಾವಣಮಾಸದ ಕೊನೆಯ ಶುಕ್ರವಾರದ ಲಕ್ಷ್ಮೀಪೂಜೆಯ ಅಂಗವಾಗಿ ಹೂ, ಹಣ್ಣು, ಬಾಳೆದಿಂಡು, ಕಬ್ಬುಗಳ ಮಾರಾಟ ಭರದಿಂದ ಜರುಗಿತು.ಪಟ್ಟಣದಲ್ಲಿ ಶ್ರಾವಣಮಾಸದ ಮಹಾಲಕ್ಷ್ಮೀ ಪೂಜೆ ಅಂಗವಾಗಿ ಹೂ-ಹಾರ, ದಂಡೆ, ಬಾಳೆಹಣ್ಣು, ಬಾಳೆದಿಂಡು, ಕಬ್ಬು, ಪಡುವಲಕಾಯಿಗಳನ್ನು ಖರೀದಿಸಲು ಜನ ಗುರುವಾರ ಸಾಯಂಕಾಲವೇ ಮಾರುಕಟ್ಟೆಗೆ ಆಗಮಿಸಿದ್ದು ಬಸ್ ನಿಲ್ದಾಣದ ಮುಂಭಾಗ ಹಾಗೂ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಜನಸಂದಣಿ ಕಂಡು ಬಂತು. ಚೆಂಡು, ಶಾವಂತಿಗೆ ಹೂಗಳ ಹಾರ ಒಂದಕ್ಕೆ ೫೦ ರಿಂದ ೭೦ ರೂಗಳು. ದಂಡೆಗೆ ೩೦ ರಿಂದ ೫೦ ರೂಗಳು. ಬಾಳೆದಿಂಡು ಜೋಡಿ ಒಂದಕ್ಕೆ ೪೦-೧೦೦ ರೂಗಳು. ಐದು ತರದ ಹಣ್ಣುಗಳಿಗೆ ೧೫೦-೨೦೦ ಪಡುವಲಕಾಯಿ ೨೦-೫೦ ರೂ, ಬಾಳೆಹಣ್ಣು ಡಜನ್ ಒಂದಕ್ಕೆ ೫೦ ರಿಂದ ೮೦ ರೂ ಳವರೆಗೆ ಮಾರಲ್ಪಟ್ಟವು.ಶುಕ್ರವಾರ ಲಕ್ಷ್ಮೀ ಪೂಜೆ ಬೆಳಿಗ್ಗೆ ಬೇಗನೇ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮಹಿಳೆಯರು ಮುತೈದೆಯರಿಗೆ ಹೇಳುವ ಕಾರ್ಯ ಗುರುವಾರ ಸಾಯಂಕಾಲವೇ ಆರಂಭಿಸಿದ್ದು, ಬಹುತೇಕ ಮಹಿಳೆಯರು ತಮಗೆ ಬೇಕಾದವರಿಗೆ ಮುತೈದೆತನಕ್ಕೆ ಹೇಳುವ ಧಾವಂತ ಗುರುವಾರ ಸಾಯಂಕಾಲ ಎಲ್ಲೆಡೆ ಕಂಡು ಬಂತು.
ವಿಜಯಪುರ: ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷ ಸೆ.೭ರಂದು ಗಣೇಶ ಚರ್ತುರ್ಥಿ ಹಾಗೂ ಸೆ.೧೬ರಂದು ಈದ್‌ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಸೌಹಾರ್ದಯುತವಾಗಿ ಹಬ್ಬಗಳ ಆಚರಣೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಗಣೇಶ ಹಬ್ಬ ಹಾಗೂ ಈದ್-ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಜಿಲ್ಲಾಡಳಿತ ಏಕ ಗವಾಕ್ಷಿ ಪದ್ದತಿಯನ್ನು ಜಾರಿಗೆ ತಂದಿದ್ದು ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಈ ಹಬ್ಬಗಳು ಬಾರತೀಯ ಸಂಸ್ಕೃತಿ ಬಿಂಬಿಸುವ ಹಬ್ಬಗಳಾಗಿವೆ ಸ್ನೇಹ ಸೌಹಾರ್ದೆತೆಗೆ ಇಂತಹ ಹಬ್ಬಗಳು ಆಚರಿಸುವುದು ರೂಡಿಯಲ್ಲಿವೆ. ಮೂರ್ತಿಗಳನ್ನು ಪ್ರತಿಷ್ಟಾಪಿಲು ನಗರದಲ್ಲಿ ಗಾಂಧಿ ಚೌಕ ಹಾಗೂ ಆದರ್ಶನಗರದ ಪೊಲೀಸ್ ಠಾಣೆಗಳಲ್ಲಿ ಏಕ ಗವಾಕ್ಷಿ ಕೌಂಟರನ್ನು ತೆರೆಯಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅಗತ್ಯವಾದ ವಿದ್ಯುತ್, ಬ್ಯಾನರ್, ಸೌಂಡ್ ಹಾಗೂ ಪಠಾಕಿಗಳನ್ನು ಹಾರಿಸಲು ಅನುಮತಿ…
ವಿಜಯಪುರ: ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಯಂಗ್ ಪ್ರೊಫೆಷನಲ್ ಹುದ್ದೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಸಹ ಸಂಶೋಧನಾ ನಿರ್ದೇಶಕರು, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಹಿಟ್ನಳ್ಳಿ ಫಾರ್ಮ, ವಿಜಯಪುರದಲ್ಲಿ ಸೆ.೧೨ರಂದು ಬೆಳಿಗ್ಗೆ ೧೦-೩೦ಕ್ಕೆ ಸಂದರ್ಶನ ಏರ್ಪಡಿಸಲಾಗಿದೆ.ನೇಮಕಾತಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ವೇತನ ಹಾಗೂ ಇತರೆ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ https://sites.google.com/a/uasd.in/news/ad-hoc-appointment-notificationEnvironmental ಎಂದು ಸಹ ಸಂಶೋಧನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲಿಚ್ಚಿಸುವ ನಿರುದ್ಯೋಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ೧೦ ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ತರಬೇತಿ ಪಡೆಯಲಿಚ್ಚಿಸುವವರು ದಿನಾಂಕ : ೦೫-೦೯-೨೦೨೪ ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಿಡಾಕ್, ಶಿಕಾರಖಾನಾ, ಸ್ಟೇಶನ್ ಬ್ಯಾಕ್ ರಸ್ತೆ, ವಿಜಯಪುರ ಮೊ: ೮೮೮೪೧೮೪೪೩೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಯುವಜನತೆಯನ್ನು ಸದೃಢಗೊಳಿಸುವುದು ಅತ್ಯವಶ್ಯಕವಾಗಿದ್ದು, ಯುವಕರು ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಸಧೃಢತೆಯೊಂದಿಗೆ ಉತ್ತಮ ಸಾಧನೆಗೈಯ್ಯಲು ಮುಂದಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಷ್ಕೃತ ಡಾ.ಜಾವಿದ ಜಮಾದಾರ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿವಿಧ ಕ್ರೀಡಾ ಸಂಸ್ಥೆಗಳು ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲಾ ವ್ಹಾಲಿಬಾಲ್ ಸಂಸ್ಥೆ ಅಧ್ಯಕ್ಷ ಭೀಮಸೇನ ಕೊಕರೆ ಅವರು ಮಾತನಾಡಿ, ಕ್ರೀಡೆಗಳು ಮನಸ್ಸು, ಶರೀರ, ಗಟ್ಟಿಯಾಗಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಬಹುಮಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.ಇದಕ್ಕೂ ಮೊದಲು ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಗಾಂಧಿಚೌಕ್‌ವರೆಗೆ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಜಾಥಾ ಜರುಗಿತು.ಕಾರ್ಯಕ್ರಮದಲ್ಲಿ ರಾಜ್ಯ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ, ಕ್ರೀಡಾ ಇಲಾಖೆ ಅಧೀಕ್ಷಕ ಎಸ್.ಬಿ.ಕಡಕಲ್, ಜಿಲ್ಲಾ…
ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ನೀಡಲು ಬಯಸುವ ಮಹಿಳಾ ತರಬೇತಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಚೇರಿ ದೂ:೦೮೩೫೨-೨೭೬೧೨೪, ಮೊ: ೯೦೦೮೩೪೯೧೫೦ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
