ದೇವರಹಿಪ್ಪರಗಿ: ಶ್ರಾವಣಮಾಸದ ಕೊನೆಯ ಶುಕ್ರವಾರದ ಲಕ್ಷ್ಮೀಪೂಜೆಯ ಅಂಗವಾಗಿ ಹೂ, ಹಣ್ಣು, ಬಾಳೆದಿಂಡು, ಕಬ್ಬುಗಳ ಮಾರಾಟ ಭರದಿಂದ ಜರುಗಿತು.
ಪಟ್ಟಣದಲ್ಲಿ ಶ್ರಾವಣಮಾಸದ ಮಹಾಲಕ್ಷ್ಮೀ ಪೂಜೆ ಅಂಗವಾಗಿ ಹೂ-ಹಾರ, ದಂಡೆ, ಬಾಳೆಹಣ್ಣು, ಬಾಳೆದಿಂಡು, ಕಬ್ಬು, ಪಡುವಲಕಾಯಿಗಳನ್ನು ಖರೀದಿಸಲು ಜನ ಗುರುವಾರ ಸಾಯಂಕಾಲವೇ ಮಾರುಕಟ್ಟೆಗೆ ಆಗಮಿಸಿದ್ದು ಬಸ್ ನಿಲ್ದಾಣದ ಮುಂಭಾಗ ಹಾಗೂ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಜನಸಂದಣಿ ಕಂಡು ಬಂತು. ಚೆಂಡು, ಶಾವಂತಿಗೆ ಹೂಗಳ ಹಾರ ಒಂದಕ್ಕೆ ೫೦ ರಿಂದ ೭೦ ರೂಗಳು. ದಂಡೆಗೆ ೩೦ ರಿಂದ ೫೦ ರೂಗಳು. ಬಾಳೆದಿಂಡು ಜೋಡಿ ಒಂದಕ್ಕೆ ೪೦-೧೦೦ ರೂಗಳು. ಐದು ತರದ ಹಣ್ಣುಗಳಿಗೆ ೧೫೦-೨೦೦ ಪಡುವಲಕಾಯಿ ೨೦-೫೦ ರೂ, ಬಾಳೆಹಣ್ಣು ಡಜನ್ ಒಂದಕ್ಕೆ ೫೦ ರಿಂದ ೮೦ ರೂ ಳವರೆಗೆ ಮಾರಲ್ಪಟ್ಟವು.
ಶುಕ್ರವಾರ ಲಕ್ಷ್ಮೀ ಪೂಜೆ ಬೆಳಿಗ್ಗೆ ಬೇಗನೇ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಮಹಿಳೆಯರು ಮುತೈದೆಯರಿಗೆ ಹೇಳುವ ಕಾರ್ಯ ಗುರುವಾರ ಸಾಯಂಕಾಲವೇ ಆರಂಭಿಸಿದ್ದು, ಬಹುತೇಕ ಮಹಿಳೆಯರು ತಮಗೆ ಬೇಕಾದವರಿಗೆ ಮುತೈದೆತನಕ್ಕೆ ಹೇಳುವ ಧಾವಂತ ಗುರುವಾರ ಸಾಯಂಕಾಲ ಎಲ್ಲೆಡೆ ಕಂಡು ಬಂತು.
Subscribe to Updates
Get the latest creative news from FooBar about art, design and business.
Related Posts
Add A Comment

