Author: editor.udayarashmi@gmail.com

ವಿಜಯಪುರ: ಪ್ರತಿ ತಿಂಗಳ ಒಂದನೇ ಸೋಮವಾರದಂದು ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಸಾರ್ವಜನಿಕರು/ಪ್ರಯಾಣಿಕರಿಂದ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಸದುದ್ದೇಶದಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅದರಂತೆ ಈ ತಿಂಗಳ ಮೊದಲನೇ ಸೋಮವಾರ ಸೆ.೨ರ ಸೋಮವಾರದಂದು ಮಧ್ಯಾಹ್ನ ೩-೩೦ರಿಂದ ೪-೩೦ ಗಂಟೆಯವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಭಾಗದ ಸಹಾಯವಾಣಿ ಸಂಖ್ಯೆ : ೬೩೬೬೪೨೩೮೮೭ ಸಂಖ್ಯೆಗೆ ಸಾರ್ವಜನಿಕರು-ಪ್ರಯಾಣಿಕರು ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರಿಗೆ ಸೌಕರ್ಯ ಸೇರಿದಂತೆ ಇತರೆ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಚಿದಂಬರೇಶ್ವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು. ವಿಜಯಪುರ ನಗರದ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆಯು ಗಣೇಶ ನಗರ ಮುಖಾಂತರ ಚಿದಂಬರ ದೇವಸ್ಥಾನಕ್ಕೆ ತಲುಪಿತು.ಈ ಸಂದರ್ಭದಲ್ಲಿ ಚಿದಂಬರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಚಿದಂಬರ ಭಜನಾ ಮಂಡಳಿ ಹಾಗೂ ವಿಜಯಪುರ ಸಮಸ್ತ ಭಜನಾ ಮಂಡಳಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತವು ಮೆರವಣಿಗೆ ಮೆರಗು ತಂದವು.ಈ ಸಂದರ್ಭದಲ್ಲಿ ಚಿದಂಬರ ದೇವರ ಭಕ್ತ ವೃಂದ ಪಾಲ್ಗೊಂಡಿದ್ದರು.

Read More

ಮುದ್ದೇಬಿಹಾಳ: ಪ್ರತಿ ವರ್ಷ ಜಿಲ್ಲಾ ಸಹಕಾರಿ ಸಂಘದ ವತಿಯಿಂದ ಕೊಡಮಾಡುವ ಜಿಲ್ಲಾ ಅತ್ತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಪಟ್ಟಣದ ದಿ ಬಾಗವಾನ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘ ಭಾಜನವಾಗಿದ್ದು ಶನಿವಾರ ಸಂಘದ ಅಧ್ಯಕ್ಷ ಎಚ್ ಬಿ ಸಾಲಿಮನಿ ಕಾರ್ಯದರ್ಶಿ ಎ.ಬಿ.ನಾಯ್ಕೋಡಿ ಪ್ರಶಸ್ತಿ ಸ್ವೀಕರಿಸಿದರು.ಈ ವೇಳೆ ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಬ್ಯಾಂಕಿನ ಉಪಾಧ್ಯಕ್ಷ ಎ.ಡಿ.ಹುಂಚ್ಯಾಳ ನಿರ್ದೇಶಕರಾದ ಎಚ್.ಆರ್.ಬಾಗವಾನ, ಯು.ಕೆ.ಮಕ್ತೆದಾರ, ಎಚ್.ಎಸ್.ಚೌಧರಿ, ಎಮ್.ಕೆ.ಬಾಗವಾನ, ಎಮ್.ಕೆ.ಹಳ್ಳೂರ, ಶಫಿ ಬಾಗವಾನ, ಎಚ್.ಎ.ಮಮದಾಪೂರ, .ಡಿ.ಡಿ.ಬಾಗವಾನ, ಟೀಪು ಮ್ಯಾಗೇರಿ ಇದ್ದರು.

Read More

ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ೧೦ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಚುನಾವಣೆ ಸೆಪ್ಟೆಂಬರ್ ೬ ರಂದು ಶುಕ್ರವಾರ ಅಪರಾಹ್ನ ೩ ಗಂಟೆಗೆ ನಿಗದಿಯಾಗಿದ್ದು, ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಜರುಗಲಿದೆ.ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ(ಅ)ಕ್ಕೆ ಮತ್ತು ಉಪಾಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಪೌರಸಭೆಗಳ ಚುನಾವಣಾ ನಿಯಮಗಳ ಅನುಸಾರ ದಿ: ೬ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯೊಳಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕಾಗಿ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸುವುದು. ೩ ಗಂಟೆಗೆ ಸಭೆ ಪ್ರಾರಂಭ. ನಂತರ ೩.೧೦ ನಿಮಿಷದಿಂದ ೩.೨೦ ನಿಮಿಷದವರೆಗೆ ನಾಮ ನಿರ್ದೇಶನ ಪತ್ರಗಳನ್ನು ಪರಿಶೀಲನೆ ಮಾಡುವುದು. ೩.೨೦ ನಿಮಿಷದಿಂದ ೩.೨೫ ನಿಮಿಷದವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವುದು. ನಂತರ ೩.೩೦ ನಿಮಿಷಕ್ಕೆ ಕೈಎತ್ತುವ ಮೂಲಕ ಅಧ್ಯಕ್ಷರ ಸ್ಥಾನಕ್ಕಾಗಿ ಮತಗಳ ಚಲಾವಣೆ ಹಾಗೂ ಚುನಾವಣಾ ಪ್ರಕ್ರಿಯೆ ಜರುಗಲಿದೆ. ಅಧ್ಯಕ್ಷರ ಚುನಾವಣೆಯ ನಂತರ ಕೈಎತ್ತುವ ಮೂಲಕ ಉಪಾಧ್ಯಕ್ಷರ ಸ್ಥಾನಕ್ಕಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಮತಗಳ…

Read More

ವಿಜಯಪುರ: ೧೧೦ ಕೆವ್ಹಿ ಟಕ್ಕಳಕಿ ಉಪ ಕೇಂದ್ರದಲ್ಲಿ ಪ್ರಸ್ತಾಪಿತ ೧೧೦ಕೆವ್ಹಿ ಕನಮಡಿ ಉಪ ಕೇಂದ್ರಕ್ಕಾಗಿ ೧೧೦ಕೆ.ವ್ಹಿ ಬಸ್ ಜೋಡಣೆ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಈ ಉಪ ಕೇಂದ್ರದಿಂದ ಹೊರಡುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ ಸೆಪ್ಟೆಂಬರ್ ೦೨ರ ಬೆಳಿಗ್ಗೆ ೭ ಗಂಟೆಯಿಂದ ಬೆಳಿಗ್ಗೆ ೧೧ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಮನಗೂಳಿ ಪಟ್ಟಣ ಪಂಚಾಯತಿಯ ವತಿಯಿಂದ ಡೇ-ನಲ್ಮ್ ಅಭಿಯಾನದ ಉಪ ಘಟಕಗಳು ಮತ್ತು ಪಿಎಂಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ದಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಕ್ಕೆ ಇಂಟರ್‌ನಶಿಪ್ ತರಬೇತಿಗಾಗಿ ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾ ಹೊಂದಿದ ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ದಿನಾಂಕ : ೦೯-೦೯-೨೦೨೪ ರ ಸಂಜೆ ೫ ರೊಳಗೆ ಡೇ-ನಲ್ಮ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸುವಂತೆ ಮನಗೂಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಜಿಲ್ಲಾ ಪಂಚಾಯತಿ ಕಚೇರಿಯಿಂದ ವನಶ್ರೀ ಮಠಕ್ಕೆ, ಮನಗೂಳಿ ರಸ್ತೆಯಿಂದ ಕನಕದಾಸ ಬಡಾವಣೆಗೆ ಹೋಗುವ ಕೂಡು ರಸ್ತೆ (ಸರ್ಕಲ್ )ಗೆ ಶ್ರೀ ಜಗದ್ಗುರು ಜಯದೇವ ಸ್ವಾಮಿಗಳ ವೃತ್ತವೆಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ.ಸದರಿ ಠರಾವಿನ ಕುರಿತು ಸಾರ್ವಜನಿಕರಲ್ಲಿ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆಯ ೩೦ ದಿನಗಳೊಳಗಾಗಿ ತಮ್ಮ ಆಕ್ಷೇಪಣೆಗಳನ್ನು ಮಹಾನಗರ ಪಾಲಿಕೆಗೆ ಸಲ್ಲಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ ಘೋಷ ಸೂಚನೆ ವಿಜಯಪುರ: ಸರ್ಕಾರಿ ಜಾಗ ಒತ್ತುವರಿ ತಡೆಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆ ಕೈಗೊಂಡು ಒತ್ತುವರಿ-ಅತಿಕ್ರಮಣ ತಡೆಗಟ್ಟಲು ಕ್ರಮ ವಹಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ಸರ್ಕಾರದ ಕಾರ್ಯದರ್ಶಿ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿಕೊಳ್ಳಬೇಕು. ಒತ್ತುವರಿಯಾಗಬಹುದಾದ ಜಾಗಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ ಒತ್ತುವರಿಯಾಗದಂತೆ ನಿಗಾ ವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗದ ಕುರಿತು ಇರುವ ಅನುದಾನವನ್ನು ಬಳಕೆ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ವ್ಯವಸ್ಥೆ ಸೇರಿದಂತೆ ಸರ್ಕಾರಿ ಜಾಗ ಇರುವ ಕುರಿತು ಫಲಕಗಳನ್ನು ಅಳವಡಿಸುವ ಮೂಲಕ ಒತ್ತುವರಿ ತಡೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿರುವ…

Read More

ಇಂಡಿ: ರಾಘವೇಂದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನಲ್ಲಿ ಕನ್ನಡ ಕಥನ ಮಾರ್ಗದ ಹೊಸಪರಂಪರೆಯನ್ನು ಹುಲುಸಾಗಿ ಬೆಳೆಸಿದವರು, ಅವರನ್ನು ಗುರುತಿಸವ ಕಾರ್ಯ ಅಷ್ಟಾಗಿ ನಡೆಯದಿರುವುದು ವಿಷಾಧನೀಯ ಎಂದು ಹಿರಿಯ ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಕಥನ ಮಾರ್ಗ-ರಾಘವೇಂದ್ರ ಖಾಸನೀಸರ ಕತೆಗಳು’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.ಇಂಡಿ ನೆಲವು ಮಧುರಚೆನ್ನರ, ಕಾಪಸೆ ರೇವಪ್ಪನವರ, ಪಿ.ಧೂಲಾಸಾಹೇಬರ, ಸಿಂಪಿಲಿಂಗಣ್ಣನವರ ಹಲಸಂಗಿ ಗೆಳೆಯರ ಬಳಗದ ಕಾರ್ಯವನ್ನು ಈಗೀಗ ಸ್ಮರಿಸುತ್ತಿದ್ದೇವೆ, ಅಂತವರಲ್ಲಿ ಕತೆಗಾರ ರಾಘವೇಂದ್ರ ಖಾಸನೀಸರು ಹಾಗೂ ಶ್ರೀರಂಗರು ಸ್ಮರಣೆಯಲ್ಲಿ ಉಳಿಯದಿರುವುದು ಹಾಗೂ ಅವರ ಕತೆಗಳ ಕುರಿತು ಇಲ್ಲಿನವರಿಗೂ ತಿಳಿಯುವಲ್ಲಿ ಹಿಂದೆ ಉಳಿದ್ದಿದ್ದೇವೆ ಎಂದರು.ವಿಮರ್ಶಕ ಮನು ಪತ್ತಾರ ರಾಘವೇಂದ್ರ ಖಾಸನೀಸರ ಕತೆಗಳು ಕುರಿತಾಗಿ ಉಪನ್ಯಾಸ ಮಂಡಿಸಿ ಹೊಸ ತಲೆಮಾರಿನ ಕತೆಗಾರರು ಖಾಸನೀರ ಕತೆಗಳ ಕುರಿತು ಓದಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಅಧ್ಯಕ್ಷತೆಯನ್ನು…

Read More

ಆಲಮೇಲ: ಸರ್ಕಾರದ ಸೂಚನೆಯಂತೆ ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಿ ಎಂದು ತಹಶೀಲ್ದಾರ ಸುರೇಶ ಚಾವಲರ ಹೇಳಿದರು.ಆಲಮೇಲ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ಯ ಪೂರ್ವ ಭಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಆಲಮೇಲ ತಾಲೂಕು ಸಾಂಸ್ಕೃತಿಕ ಮತ್ತು ಭಾವೈಕ್ಯದ ಕೇಂದ್ರವಾಗಿದ್ದು ಎಲ್ಲ ಧರ್ಮ ಸಮಾಜದವರು ಒಂದಾಗಿ ಪ್ರತಿಯೊಂದು ಕಾರ್ಯಕ್ರಮ ಸೌಹಾರ್ದಯುತವಾಗಿ ಆಚರಣೆ ಮಾಡುವದು ಇಲ್ಲಿನ ಪದ್ದತಿಯಾಗಿದ್ದು, ಅದೆ ರೀತಿ ಈ ಬಾರಿ ಗಣೆಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಎಂದು ಹೇಳಿದರು.ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿ, ಸರ್ಕಾರದ ಸೂಚನೆಯನ್ನು ಕಡ್ಡಾಯವಾಗಿ ಎಲ್ಲ ಗಜಾನನ ಮಂಡಳಿಯವರು ಪಾಲನೆ ಮಾಡಿದರೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವದು. ಸಾಮರಸ್ಯದಿಂದ ಗಣೇಶೋತ್ಸವ ಆಚರಿಸುವರಿಗೆ ಪೊಲೀಸ್ ಇಲಾಖೆ ಎಲ್ಲರೀತಿಯ ಸಹಕಾರ ನೀಡಲಾಗುವದು. ಒಂದು ವೇಳೆ ಯಾರಾದರು ಕಾನೂನು ಮೀರಿ ಶಾಂತಿ ಕದಡಲು ಯತ್ನಿಸಿದರೆ ಹಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೆವೆ.ಸಿಂದಗಿ ಸಿಪಿಐ ನಾನಗೌಡ ಪೊಲೀಸ್‌ಪಾಟೀಲ, ಗಜಾನನ ಮಹಾಮಂಡಳಿ ಅಧ್ಯಕ್ಷ ಮಹಿಬೂಬ ಮಸಳಿ, ಪ್ರಭು ವಾಲಿಕಾರ,…

Read More