ಆಲಮೇಲ: ಸರ್ಕಾರದ ಸೂಚನೆಯಂತೆ ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಿ ಎಂದು ತಹಶೀಲ್ದಾರ ಸುರೇಶ ಚಾವಲರ ಹೇಳಿದರು.
ಆಲಮೇಲ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ಯ ಪೂರ್ವ ಭಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಆಲಮೇಲ ತಾಲೂಕು ಸಾಂಸ್ಕೃತಿಕ ಮತ್ತು ಭಾವೈಕ್ಯದ ಕೇಂದ್ರವಾಗಿದ್ದು ಎಲ್ಲ ಧರ್ಮ ಸಮಾಜದವರು ಒಂದಾಗಿ ಪ್ರತಿಯೊಂದು ಕಾರ್ಯಕ್ರಮ ಸೌಹಾರ್ದಯುತವಾಗಿ ಆಚರಣೆ ಮಾಡುವದು ಇಲ್ಲಿನ ಪದ್ದತಿಯಾಗಿದ್ದು, ಅದೆ ರೀತಿ ಈ ಬಾರಿ ಗಣೆಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಎಂದು ಹೇಳಿದರು.
ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿ, ಸರ್ಕಾರದ ಸೂಚನೆಯನ್ನು ಕಡ್ಡಾಯವಾಗಿ ಎಲ್ಲ ಗಜಾನನ ಮಂಡಳಿಯವರು ಪಾಲನೆ ಮಾಡಿದರೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವದು. ಸಾಮರಸ್ಯದಿಂದ ಗಣೇಶೋತ್ಸವ ಆಚರಿಸುವರಿಗೆ ಪೊಲೀಸ್ ಇಲಾಖೆ ಎಲ್ಲರೀತಿಯ ಸಹಕಾರ ನೀಡಲಾಗುವದು. ಒಂದು ವೇಳೆ ಯಾರಾದರು ಕಾನೂನು ಮೀರಿ ಶಾಂತಿ ಕದಡಲು ಯತ್ನಿಸಿದರೆ ಹಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೆವೆ.
ಸಿಂದಗಿ ಸಿಪಿಐ ನಾನಗೌಡ ಪೊಲೀಸ್‌ಪಾಟೀಲ, ಗಜಾನನ ಮಹಾಮಂಡಳಿ ಅಧ್ಯಕ್ಷ ಮಹಿಬೂಬ ಮಸಳಿ, ಪ್ರಭು ವಾಲಿಕಾರ, ಶ್ರೀಶೈಲ ಮಠಪತಿ, ಅಯೂಬ ದೇವರಮನಿ ಮಾತನಾಡಿದರು.
ಜಿ.ಪಂ ಮಾಜಿ ಸದಸ್ಯ ಬಿ.ಆರ್. ಎಂಟಮಾನ, ಬಸವರಾಜ ತೆಲ್ಲೂರ, ಮಲಘಾಣದ ಯಶವಂತ್ರಾಯಗೌಡ ರೋಗಿ, ಬಳಗಾನೂರದ ಕೆಂಚಪ್ಪ ಕತ್ನಳ್ಳಿ, ವಾಹಬ ಸುಂಬಡ, ಅಪ್ಪು ಶೆಟ್ಟಿ, ದೇವಪ್ಪ ಗುಣಾರಿ ಸೇರಿದಂತೆ ಆಲಮೇಲ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

