ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ೧೦ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಚುನಾವಣೆ ಸೆಪ್ಟೆಂಬರ್ ೬ ರಂದು ಶುಕ್ರವಾರ ಅಪರಾಹ್ನ ೩ ಗಂಟೆಗೆ ನಿಗದಿಯಾಗಿದ್ದು, ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಜರುಗಲಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ(ಅ)ಕ್ಕೆ ಮತ್ತು ಉಪಾಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಪೌರಸಭೆಗಳ ಚುನಾವಣಾ ನಿಯಮಗಳ ಅನುಸಾರ ದಿ: ೬ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯೊಳಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕಾಗಿ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸುವುದು. ೩ ಗಂಟೆಗೆ ಸಭೆ ಪ್ರಾರಂಭ. ನಂತರ ೩.೧೦ ನಿಮಿಷದಿಂದ ೩.೨೦ ನಿಮಿಷದವರೆಗೆ ನಾಮ ನಿರ್ದೇಶನ ಪತ್ರಗಳನ್ನು ಪರಿಶೀಲನೆ ಮಾಡುವುದು. ೩.೨೦ ನಿಮಿಷದಿಂದ ೩.೨೫ ನಿಮಿಷದವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವುದು. ನಂತರ ೩.೩೦ ನಿಮಿಷಕ್ಕೆ ಕೈಎತ್ತುವ ಮೂಲಕ ಅಧ್ಯಕ್ಷರ ಸ್ಥಾನಕ್ಕಾಗಿ ಮತಗಳ ಚಲಾವಣೆ ಹಾಗೂ ಚುನಾವಣಾ ಪ್ರಕ್ರಿಯೆ ಜರುಗಲಿದೆ. ಅಧ್ಯಕ್ಷರ ಚುನಾವಣೆಯ ನಂತರ ಕೈಎತ್ತುವ ಮೂಲಕ ಉಪಾಧ್ಯಕ್ಷರ ಸ್ಥಾನಕ್ಕಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಮತಗಳ ಚಲಾವಣೆ ಮುಗಿಯಲಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಪ್ರಕಾಶ ಸಿಂದಗಿ ತಿಳಿಸಿದರು.
ಒಟ್ಟು ೧೭ ಜನ ಸದಸ್ಯಬಲದ ಪಟ್ಟಣ ಪಂಚಾಯಿತಿಗೆ ೨೦೨೧ರ ಡಿಸೆಂಬರ್ ನಲ್ಲಿ ಸದಸ್ಯರಾಗಿ ಬಿಜೆಪಿಯಿಂದ ೦೪, ಕಾಂಗ್ರೆಸ್‌ನಿದ ೦೭, ಜೆಡಿಎಸ್‌ನಿಂದ ೦೪ ಹಾಗೂ ಪಕ್ಷೇತರರಾಗಿ ಇಬ್ಬರು ಆಯ್ಕೆಯಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಲು ಕಾತರದಿಂದ ಕಾಯುತ್ತಿರುವ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಯಾರಿಗೆ ಒಲಿಯುತ್ತದೆ ಎಂಬುದಕ್ಕೆ ಬರುವ ದಿ:೬ರಂದು ಶುಕ್ರವಾರದಂದು ಸ್ಪಷ್ಟ ಉತ್ತರ ದೊರೆಯುತ್ತದೆ.
Subscribe to Updates
Get the latest creative news from FooBar about art, design and business.
Related Posts
Add A Comment

