ತಾಳಿಕೋಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಒಂದು ಸಮಯದಲ್ಲಿ ಇಡೀ ಜಿಲ್ಲೆಯಲ್ಲಿಯೇ ಒಂದು ಮಾದರಿ ಕೇಂದ್ರವಾಗಿತ್ತು. ಆದರೆ ಇಂದು ಅದರ ವರ್ಚಸ್ಸು ಕ್ಷೀಣಿಸುತ್ತಿದೆ ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಸೇವಾ ಕೇಂದ್ರಗಳಾಗಿವೆ ಹೊರತು ವ್ಯಾಪಾರಿ ಕೇಂದ್ರಗಳಲ್ಲ ಎಂದು ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಆಸ್ಪತ್ರೆಯಲ್ಲಿಯ ಸೌಕರ್ಯಗಳ ಕುರಿತು ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ ಹಾಗೂ ಆಡಳಿತ ಅಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಇವರಿಂದ ಮಾಹಿತಿ ಪಡೆದರು. ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಿದ ಅವರು ಯಾವ ಕಾರಣಕ್ಕೂ ಆಸ್ಪತ್ರೆಯ ಸೇವೆಯನ್ನು ನಿಲ್ಲಿಸಬೇಡಿ, ಇಲ್ಲಿಗೆ ಬರುವವರು ಬಡವರು ಹಾಗೂ ಗ್ರಾಮೀಣ ಭಾಗದ ಜನರು ಇದರಿಂದ ಅವರಿಗೆ ತುಂಬಾ ತೊಂದರೆಯಾಗುತ್ತದೆ ಎಂದರು. ಇತ್ತೀಚಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು ಇಂಥಹ ವ್ಯಕ್ತಿಗಳನ್ನು ಕಠಿಣ ಕ್ರಮಕ್ಕೆ ಒಳಪಡಿಸಲು ಪಿಎಸ್ಐ ರಾಮನಗೌಡ ಸಂಕನಾಳ ಇವರಿಗೆ ಆದೇಶಿಸಿದರು. ಹಾಗೂ ಭದ್ರತೆಗಾಗಿ ಪೊಲೀಸರನ್ನು ಸರದಿಯಂತೆ ಆಸ್ಪತ್ರೆಗೆ ನಿಯೋಜಿಸಲು ತಿಳಿಸಿದರು. ಯಾವ ಕಾರಣಕ್ಕೂ ಅಧೈರ್ಯರಾಗದೆ ನಿಮ್ಮ ಸೇವೆಯನ್ನು ನಿಷ್ಠೆ ಪ್ರಾಮಾಣಿಕತೆ ಹಾಗೂ ಸಂಯಮದೊಂದಿಗೆ ಸಲ್ಲಿಸಿ ಎಂದು ಕಿವಿಮಾತು ಹೇಳಿದರು.
ಈ ಸಮಯದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ, ಆಡಳಿತಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ, ಡಾ. ವಿಜಯಲಕ್ಷ್ಮಿ ಹಜೇರಿ, ಹಿರಿಯ ವೈದ್ಯ ಡಾ. ವಿ.ಎಸ್. ಕಾರ್ಚಿ, ಡಾ.ಆನಂದ ಭಟ್, ಡಾ.ಅರುಣ ಮದರಕಲ್. ಮುಖಂಡರಾದ ಗುರು ತಾರನಾಳ, ಎಂ. ಕೆ.ಚೋರಗಸ್ತಿ, ಜಿ.ಎಸ್ .ಕಶೆಟ್ಟಿ, ವಿಜಯ ಸಿಂಗ್ ಹಜೇರಿ, ಪ್ರಭುಗೌಡ ಮದರಕಲ್, ಸಿದ್ದನಗೌಡ ಪಾಟೀಲ ನಾವದಗಿ, ಮಲ್ಲನಗೌಡ ಯಾದಗಿರಿ, ಕಾರ್ತಿಕ್ ಕಟ್ಟಿಮನಿ, ಸಂಗನಗೌಡ ಅಸ್ಕಿ, ಫಯಾಜ ಉತ್ನಾಳ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

