ಚಡಚಣ: ಸಮೀಪದ ಶಿರಾಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರದಂದು ಡಿಡಿಪಿಐ ಎನ್.ಎಚ್.ನಾಗೂರ ಮತ್ತು ವಿಷಯ ಪರಿವೀಕ್ಷಕರಾದ ಶ್ರೀಮತಿ ಎಸ್.ಎ.ಅಳಗಿಯವರು ಭೇಟಿ ನೀಡಿದರು.
ಶಾಲಾ ಗುಣಮಟ್ಟ, ಆಂಗ್ಲ ಮಾಧ್ಯಮ ತರಗತಿಗಳು, ಶಾಲೆಯ ಪ್ರಾಯೋಗಿಕ ಕೋಠಡಿ, ಆಟದ ಕೋಠಡಿ, ಶಾಲಾ ಭೌತಿಕ ಸೌಲಬೈಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಪಿಐ ಎನ್.ಎಚ್.ನಾಗೂರರವರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವ, ಅಧ್ಯಾತ್ಮಿಕವಾಗಿ, ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ, ಸೃಜನಾತ್ಮಕ ಕೌಶಲ್ಯಗಳು, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು, ರಾಷ್ಟçದ ಮೇಲಿನ ಪ್ರೀತಿ ಮತ್ತು ಪ್ರಕೃತಿಯ ಬಗ್ಗೆ ಕಾಳಜಿಯನ್ನು ಬೆಳೆಸುವುದು. ಶಾಲೆಯ ಸಮರ್ಪಿತ ಶಿಕ್ಷಣತಜ್ಞರು ಸ್ವಾಭಿಮಾನ. ಸಹಿಷ್ಣುತೆ ಮತ್ತು ಒಳನೋಟವನ್ನು ಹೊಂದಿರುವ ಕ್ರಿಯಾತ್ಮಕ ವ್ಯಕ್ತಿಗಳನ್ನು ಶಿಲ್ಪಕಲೆ ಮಾಡುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮತ್ತು ಸಕ್ರಿಯವಾದ, ಉತ್ತಮ ಗುಣಮಟ್ಟದ, ಆಧುನಿಕ ತಂತ್ರಜ್ಞಾನದ ಕಲಿಕೆ ಮತ್ತು ಅರ್ಥಮಾಡಿಕೊಳ್ಳವ ಚೌಕಟ್ಟಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಅಂತರ್ಗತ ಸಕಾರಾತ್ಮಕ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೊರಹಾಕಲು ಈ ಶಾಲೆಯು ಪ್ರಯತ್ನಿಸುತ್ತಿದೆ ಎಂದು ಶಾಲೆಯ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಶಿಕ್ಷಣ ಸಂಯೋಜಕ ಸಂಗಮೇಶ ಸುರಜ, ಬಿಆರ್‌ಪಿ ಶರಣು ಜೀರಂಕಲಗಿ, ಸಿಆರ್‌ಪಿ ಬಿ.ಕೆ.ವಾಘ್ಮೋರೆ ಸೇರಿದಂತೆ ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

