ಕೊಲ್ಹಾರ: ಪದೇ ಪದೇ ರೈತರಿಗೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಸಚಿವ ಶಿವಾನಂದ ಪಾಟೀಲ ಅವರ ರಾಜಿನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಪಡೆದು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಮಾಜಿ ಸಚಿವ ಎಸ.ಕೆ.ಬೆಳ್ಳುಬ್ಬಿ ಒತ್ತಾಯಿಸಿದರು.
ಈ ಕುರಿತು ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು, ಒಕ್ಕಲುತನದ ಕೃಷಿ ಚಟುವಟಿಕೆಯ ಗಂಧ ಗಾಳಿ ಗೊತ್ತಿಲ್ಲದ ಹೊಲದಲ್ಲಿ ಬೆವರು ಸುರಿಸಿ ರೈತಾಪಿ ವರ್ಗದವರು ಮಾಡುವ ಕೆಲಸಗಳನ್ನು ಅರಿಯದೇ ಇರುವ ಸಚಿವ ಶಿವಾನಂದ ಪಾಟೀಲ ರೈತನೇ ಅಲ್ಲ. ಅದಕ್ಕಾಗಿಯೇ ರೈತರ ಸಂಕಷ್ಟ ತಿಳಿಯದ ರೈತರಲ್ಲದವರು ಅಧಿಕಾರ ನಡೆಸಿದರೆ ಇಂಥಹ ಹೇಳಿಕೆಗಳನ್ನು ನಾಡಿನ ರೈತ ಬಾಂಧವರು, ಜನತೆ ಪದೆ ಪದೆ ಕೇಳುವಂತಾಗುತ್ತದೆ ಆದ್ದರಿಂದ ಭಾರತೀಯ ಜನತಾಪಕ್ಷ ಮುಂದಿನ ದಿನಮಾನಗಳಲ್ಲಿ ರಾಜ್ಯ ಅಧ್ಯಕ್ಷರ, ಕಾರ್ಯಕರ್ತರ ಸಂಘಟನೆಯೊಂದಿಗೆ ಸಚಿವರ ವಿರುದ್ದ ಬೀದಿಗಿಳಿದು ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ಬರಬಹುದು ಎಂದರು.
ಈ ವರ್ಷದಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನ ಮಳೆ ಕೈಕೊಟ್ಟಿದ್ದರಿಂದ ರಾಜ್ಯಾದ್ಯಂತ ಭೀಕರವಾದ ಬರಗಾಲದ ಛಾಯೆ ಆವರಿಸಿದ್ದು ಇದು ರೈತನಿಗೆ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುವ ಸಂದರ್ಬದಲ್ಲಿ ರೈತರ ಸ್ವಾಭಿಮಾನಕ್ಕೆ ದಕ್ಕೆ ಬರುವಂತಹ ರೈತರನ್ನು ಅವಮಾನಿಸುವ ರೀತಿಯಲ್ಲಿ ಸಭೆ ಸಮಾರಂಭಗಳಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡುತ್ತಿರುವದು ಅಧಿಕಾರ ಮತ್ತು ಹಣದ ಮದದಿಂದ ಎನಿಸುತ್ತಿದೆ. ಇದು ಜನರ ಸೇವೆ ಮಾಡುವ ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೆ ಶೋಭೆ ತರುವಂತಹದಲ್ಲ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

