ಸಿಂದಗಿ: ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಸಭಾಭವನದಲ್ಲಿ ಸ್ಥಳಿಯ ಮಕ್ಕಳ ಬಳಗ ಸಿಂದಗಿ ಇವರು ಸರಕಾರಿ ಆದರ್ಶ ವಿದ್ಯಾಲಯದ ಸಹಯೋಗದಲ್ಲಿ ಡಿ.೨೨ ರಂದು ಮುಂಜಾನೆ ೧೦ ಗಂಟೆಗೆ ಚಿಣ್ಣರ ನುಡಿ ಸಿರಿ-೪೭ ಕಾರ್ಯಕ್ರಮ ಆಯೋಜಿಸಿದ್ದಾರೆ.
ಉದ್ಘಾಟನೆ: ಶಾಸಕ ಅಶೋಕ ಮನಗೂಳಿ ಅವರು ೪೭ನೇ ಚಿಣ್ಣರ ನುಡಿ ಸಿರಿ ಕಾರ್ಯಕ್ರಮದ ಜ್ಯೋತಿ ಬೆಳಗಿಸುವರು. ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ವರ್ಷಿಣಿ ನಾಯಕ ಸಸಿಗೆ ನೀರುಣಿಸುವರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿ ಬಮ್ಮಣ್ಣಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಲೆಯ ವಿದ್ಯಾರ್ಥಿನಿ ಶರಧಿ ಹಿರೇಮಠ, ವಿಜಯಪುರದ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿನಿ ದಾನೇಶ್ವರಿ ಆಲಾಳ ಆಗಮಿಸುವರು.
ಗೋಷ್ಠಿ-೧: ಹಳೆಬೇರು ಹೊಸ ಚಿಗುರು.
ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯಾದ್ಯಾಪಕ ಎಸ್.ಕೆ. ಬಿರಾದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಆಗಮಿಸುವರು. ಮಕ್ಕಳ ಬಳಗದ ಸಂಚಾಲಕ ಹ.ಮ. ಪೂಜಾರ ಉಪಸ್ಥಿತರಿರುವರು. ವಿದ್ಯಾರ್ಥಿನಿ ವೈಷ್ಣವಿ ಲಕ್ಷಾನಟ್ಟಿ ಅವರು ನಾನು ಓದಿದ ಕವನ ಸಂಕಲನ ಕುರಿತು, ವಿದ್ಯಾರ್ಥಿನಿ ಶ್ರೀನಿಧಿ ಹುಲಗಬಾಳ ಅವರು ನಾನು ಓದಿದ ಮಕ್ಕಳ ಕಾದಂಬರಿ ಕುರಿತು ಉಪನ್ಯಾಸ ನೀಡುವರು.
ಗೋಷ್ಠಿ-೨: ಪುಸ್ತಕ ಓದು ಮಸ್ತಕ ತಣಿಸು
ವಿದ್ಯಾರ್ಥಿ ಶ್ರೀಶೈಲ ಮೂಲಿಮನಿ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿನಿ ನಂದಿತಾ ಸಿಂದಗಿ ಅವರು ನಾವೇಕೆ ಓದಬೇಕು ಕುರಿತು, ವಿದ್ಯಾರ್ಥಿನಿ ಅವರು ನಾನು ಮೆಚ್ಚಿದ ಕವನ ಕುರಿತು, ವಿದ್ಯಾರ್ಥಿನಿ ರಕ್ಷಿತಾ ಸಣ್ಣಹಳ್ಳಿ ಅವರು ನಾನು ಮೇಚ್ಚಿದ ಕಥೆ ಕುರಿತು ಉಪನ್ಯಾಸ ನೀಡುವರು.
ಗೋಷ್ಠಿ-೩: ಮಕ್ಕಳ ಮನದಾಳ ಮಾತು
ಸಿಂದಗಿಯ ಪ್ರೇರನಾ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ನಂದಿನಿ ಚವ್ಹಾಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪದ್ಮರಾಜ ಪಬ್ಲಿಕ್ ಸ್ಕೂಲ್‌ನ ಸಂಜನಾ ಮಾರ್ಸನಳ್ಳಿ ಆಗಮಿಸುವರು. ವಿದ್ಯಾರ್ಥಿ ಅನೀಲ ಕಾಮನಕೇರಿ ಅವರು ನನ್ನ ಮೇಲಿನ ಒತ್ತಡಗಳು ಕುರಿತು, ವಿದ್ಯಾರ್ಥಿನಿ ವಿಜಯಲಕ್ಷ್ಮೀ ವಸ್ತ್ರದ ಅವರು ನಮಗೂ ಹಕ್ಕುಗಳಿವೆ ಕುರಿತು, ವಿದ್ಯಾರ್ಥಿನಿ ಲಕ್ಷ್ಮೀ ಚಬನೂರ ಅವರು ನಮಗೊಂದು ಗುರಿ ಇರಬೇಕು ಕುರಿತು ಉಪನ್ಯಾಸ ನೀಡುವರು.
ಸಮಾರೋಪ ಸಮಾರಂಭ:
ಸರಕಾರಿ ಆದರ್ಶ ವಿದ್ಯಾಲಯದ ಶಿಕ್ಷಕಿ, ಸಾಹಿತಿ ಜ್ಯೋತಿ ನಂದಿಮಠ ಅಧ್ಯಕ್ಷತೆ ವಹಿಸುವರು. ಶಿಕ್ಷಕ ನಟರಾಜ ಕುಂಬಾರ ಉಪಸ್ಥಿತರಿರುವರು.
ವಿದ್ಯಾರ್ಥಿಗಳಾದ ಶೃದ್ಧಾ ಹೊಳಿ, ಸುನಂದಾ ಚಿಗರಳ್ಳಿ ಅನಿಸಿಕೆ ವ್ಯಕ್ತ ಪಡೆಸುವರು ಎಂದು ಮಕ್ಕಳ ಬಳಗದ ಪ್ರಕಟಣೆಯಲ್ಲಿ ತಿಳಿಸಿದೆ
Subscribe to Updates
Get the latest creative news from FooBar about art, design and business.
Related Posts
Add A Comment
