ಬೈಕ್-ಆಟೋ ರ್‍ಯಾಲಿಗೆ ಚಾಲನೆ ನೀಡಿದ ಸಚಿವ ಶಿವಾನಂದ ಪಾಟೀಲ ಅಭಿಮತ
ಬಸವನಬಾಗೇವಾಡಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳದ ಸಹಯೋಗದಲ್ಲಿ ಡಿ.೨೧ ರಂದು ಹಮ್ಮಿಕೊಂಡಿರುವ ಹನುಮಾಲ ಪಾದುಕೆ ಪಲ್ಲಕ್ಕಿ ಉತ್ಸವ ಹಾಗೂ ಮಾತೃ ಶಕ್ತಿ ದುರ್ಗಾವಾಹಿನಿ ವಾರ್ಷಿಕೋತ್ಸವ ಸಮಾರಂಭದಂಗವಾಗಿ ಬುಧವಾರ ಬೈಕ್ ಹಾಗೂ ಅಟೋ ರ್‍ಯಾಲಿಗೆ ಸಕ್ಕರೆ ಅಭಿವೃದ್ಧಿ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಮ ಮತ್ತು ಹನುಮಂತ ನಮ್ಮ ದೇಶದ ಸಾಂಸ್ಕ್ರತಿಕ ಪ್ರತೀಕರಾಗಿದ್ದಾರೆ. ಸನಾತನ ಕಾಲದಿಂದಲೂ ರಾಮ ಮತ್ತು ಹನುಮಂತನ ಪೂಜೆ ನಡೆಯುತ್ತಿದೆ. ಎಲ್ಲರೂ ಒಂದಾಗಿ ಧಾರ್ಮಿಕ ಆಚರಣೆಗಳು ನಡೆಯುವ ಮೂಲಕ ಸಮಾಜ ಜಾಗೃತಿಯಾಗಬೇಕು. ರಾಮ, ಹನುಮಂತನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಬಜರಂಗದಳದ ಜಿಲ್ಲಾ ಸಹ ಸಂಯೋಜಕ ತಮ್ಮಣ್ಣ ಬಡಿಗೇರ, ಮಹೇಶ ಸಾಲವಾಡಗಿ, ಪದ್ಮರಾಜ ಒಡೆಯರ, ಶರಣು ವಾಡೇದ, ರವಿ ಮ್ಯಾಗೇರಿ, ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಬಸವರಾಜ ಅಳ್ಳಗಿ, ರಾಹುಲ ಜಗತಾಪ, ಸಂತೋಷ ಹಿಂಗೋಲಿ, ಷಣ್ಮುಖ ಹಿರೇಮಠ, ಶಿವು ಬೆಲ್ಲದ, ವಿಜಯಕುಮಾರ ಗೊಳಸಂಗಿ, ರಾಜು ಪಿಡ್ಡಿ, ಅವಿನಾಶ ಹಂಗರಗಿ, ಮಂಜುನಾಥ ಮುದ್ದೂರ, ಸದು ಗೊಳಸಂಗಿ,ಪ್ರಕಾಶ ಕುಳಗೇರಿ, ಚಂದ್ರಶೇಖರ ಖ್ಯಾಡದ, ಬಸವರಾಜ ಗೊಳಸಂಗಿ, ರೂಪಾ ಜಾಧವ, ವಿದ್ಯಾಶ್ರೀ ಬಡಿಗೇರ ಇತರರು ಇದ್ದರು.

