ದೇವರಹಿಪ್ಪರಗಿ: ಕೆ.ಇ.ಬಿ ಹನುಮಾನ ಮಂದಿರದಲ್ಲಿ ಜರುಗಿದ ಕಾರ್ತಿಕೋತ್ಸವದಲ್ಲಿ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡು ಸಂಪನ್ನಗೊಳಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿಯ ಹನುಮಾನ ಮಂದಿರದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಅಂಗವಾಗಿ ಅರ್ಚಕ ಶ್ರೀಪಾದ ಜೋಷಿ ನೇತೃತ್ವದಲ್ಲಿ ನಿರಂತರ ಸಂಪ್ರದಾಯಿಕವಾಗಿ ಜರುಗಿ ಬಂದ ಕಾರ್ತಿಕೋತ್ಸವಕ್ಕೆ ಮಂಗಳವಾರ ವಿವಿಧ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಮಹಾಪೂಜೆ ಸಲ್ಲಿಸಲಾಯಿತು.
ಸಾಯಂಕಾಲ ದೇವಾಲಯದ ಆವರಣದಲ್ಲಿ ದೀಪ ಬೆಳಗಿಸಿ, ವಿದ್ಯುತ್ ಅಲಂಕಾರ ಮಾಡಿ ಕಾರ್ತಿಕೋತ್ಸವ ಸಂಪನ್ನಗೊಳಿಸಲಾಯತು. ನಂತರ ನೆರೆದ ಸುತ್ತಮುತ್ತಲಿನ ಬಡಾವಣೆಗಳ ಭಕ್ತಸಮೂಹಕ್ಕೆ ಮಹಾಪ್ರಸಾದ ವಿತರಣೆಯಾಯಿತು.
ವ್ಹಿ.ಕೆ.ಪಾಟೀಲ, ಸಂಗಪ್ಪಣ್ಣ ತಡವಲ್, ಎಸ್.ಎನ್.ಪಡನೂರ, ಗುರುರಾಜ ದೇಸಾಯಿ, ಶಿವಾನಂದ ಕೊಡಗೆ, ದೇವೇಂದ್ರ ಯಾಳಗಿ, ಅಶೋಕ ಫಿರಂಗಿ, ರಾಘವೇಂದ್ರ ಕುಲಕರ್ಣಿ, ಬಸಯ್ಯ ಹಿರೇಮಠ, ಸೋಮಶೇಖರ ಹಿರೇಮಠ, ಕಾಶೀನಾಥ ಕೋರಿ, ಮಹೇಶ ಯಾಳಗಿ, ಆನಂದ ಜಡಿಮಠ, ನಿಂಗಯ್ಯ ಕರಡಿಮಠ, ಸಿದ್ದು ಪಾಟೀಲ, ವಸಂತ ನಾಡಗೌಡ, ಕಾಶೀನಾಥ ಹಿರೇಮಠ, ರವಿ ವಡ್ಡೋಡಗಿ, ಶಿವು ಕೋಟಿನ್, ಪ್ರಲ್ಹಾದ ಕುಲಕರ್ಣಿ, ಸೋಮು ಬಿರಾದಾರ(ಜಿರ್ಲಿ), ಸದಾಶಿವ, ನಿಂಗಪ್ಪ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

