ಬಸವನಬಾಗೇವಾಡಿ ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಮರಗಮ್ಮದೇವಿ ದೇವಸ್ಥಾನ.
ಬಸವನಬಾಗೇವಾಡಿ, ಡಿ. ೨೦
ತಾಲೂಕಿನ ಮುಳ್ಳಾಳ ಗ್ರಾಮದಲ್ಲಿ ಡಿ. ೨೨ ರಂದು ಬೆಳಗ್ಗೆ ೯.೩೦ ಗಂಟೆಗೆ ಮರಗಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಸಾನಿಧ್ಯವನ್ನು ಡೋಣೂರ ಕಟ್ಟಿಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಹ ಸಾನಿಧ್ಯವನ್ನು ಮಳಸಿದ್ದಯ್ಯ ಹಿರೇಮಠ ವಹಿಸುವರು. ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ವಹಿಸುವರು. ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಜ್ಯೋತಿ ಬೆಳಗಿಸುವರು. ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎಸ್.ಎಸ್.ಮಂಗಾನವರ, ಡೋಣೂರ ಗ್ರಾಪಂ ಅಧ್ಯಕ್ಷ ಚನ್ನುಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜ ಸೋಂಪೂರ, ತಾಪಂ ಮಾಜಿ ಉಪಾಧ್ಯಕ್ಷ ರಾಹುಲ ಕುಬಕಡ್ಡಿ, ಯುವಮುಖಂಡ ನಾಗರಾಜ ಗುಂದಗಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಭಾವಿಕಟ್ಟಿ, ತಾಪಂ ಮಾಜಿ ಸದಸ್ಯರಾದ ರಾಜೇಶ್ವರಿ ಕೋಟನೂರ, ಲಕ್ಕಪ್ಪ ಚಿರ್ಚನಕಲ್, ಡೋಣೂರ ಗ್ರಾಪಂ ಮಾಜಿ ಅಧ್ಯಕ್ಷ ರವಿ ಮ್ಯಾಗೇರಿ, ಡೋಣೂರ ಗ್ರಾಪಂ ಸದಸ್ಯರಾದ ಶಂಕ್ರೆಪ್ಪ ಹುಲ್ಲೂರ, ರಾಜನಬಿ ಹಿಪ್ಪರಗಿ, ವಿಜಯಲಕ್ಷ್ಮೀ ಬಿರಾದಾರ, ಅಬ್ದುಲ ಮುಲ್ಲಾ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಗೋಲಪ್ಪ ಕೊರೂಟಗಿ, ಉಪಾಧ್ಯಕ್ಷ ಗುರುನಗೌಡ ಭಾವಿಕಟ್ಟಿ, ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಎನ್.ಎಸ್.ಕಾಖಂಡಕಿ, ಅಶೋಕಗೌಡ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಪಡಗಾನೂರ, ಕಲ್ಲನಗೌಡ ಬಿರಾದಾರ, ವಸಂತ ಹಂಡಿ, ರಾಮನಗೌಡ ಪಾಟೀಲ, ವಕೀಲ ಎನ್.ಜಿ.ಕಾಗವಾಡ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಡಾ.ಶ್ರೀಧರ ಮುಳ್ಳಾಳ, ಮಹಿಳಾ ವಿವಿಯ ಡಾ.ಗೀತಾ ಮುಳ್ಳಾಳ ಆಗಮಿಸುವರು.
ಇದೇ ಸಂದರ್ಭದಲ್ಲಿ ಗ್ರಾಮದ ಯೋಧರಾದ ಕಮಲಸಾ ನದಾಫ, ಗೌತಮ ಮುಳ್ಳಾಳ, ಅವ್ವಪ್ಪ ಮುಳ್ಳಾಳ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

