Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವೃಕ್ಷೋಥಾನ್ ಹೆರಿಟೇಜ್ ರನ್ ಪ್ರೋತ್ಸಾಹಿಸಲು ಕಲಾ ಪ್ರದರ್ಶನ
(ರಾಜ್ಯ ) ಜಿಲ್ಲೆ

ವೃಕ್ಷೋಥಾನ್ ಹೆರಿಟೇಜ್ ರನ್ ಪ್ರೋತ್ಸಾಹಿಸಲು ಕಲಾ ಪ್ರದರ್ಶನ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿ ಮತ್ತು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಡಿಸೆಂಬರ್ 24 ರಂದು ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್- 2023 ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ ನೀಡಲಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ. 
ಓಟ ನಡೆಯಲಿರುವ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಈ ಕಲಾ ತಂಡಗಳು 16 ನಾನಾ ಭಾಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿವೆ.  ವೃಕ್ಷೊಥಾನ್ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣ್ಯರು ಈ ಕಲಾ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಒಟ್ಟಾರೆ ಸುಮಾರು 150 ಜನ ಕಲಾವಿದರು ಈ ತಂಡಗಳಲ್ಲಿದ್ದಾರೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್- 2023 ಸಮಿತಿಯ ಕೋರ್ ಕಮಿಟಿ ಸಾಂಸ್ಕೃತಿಕ ವಿಭಾಗದ ಶಿವನಗೌಡ ಪಾಟೀಲ ಮತ್ತು ಸೋಮು ಎಸ್. ಮಠ ತಿಳಿಸಿದ್ದಾರೆ. 

*ಕಲಾ ತಂಡಗಳು ಮತ್ತು ಅವುಗಳು ಓಟಗಾರರಿಗೆ ಸ್ಪೂರ್ತಿ ತುಂಬಲು ನಿಗದಿ ಪಡಿಸಿರುವ ಸ್ಥಳದ ಮಾಹಿತಿ ಇಲ್ಲಿದೆ.* 

*1.ಕಾಖಂಡಕಿ ಬಾಜಾ ತಂಡ:* ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ತಮ್ಮ ಕಲೆ ಪ್ರದರ್ಶನ ನೀಡಲಿದ್ದಾರೆ.  ಎಂಟು ಜನರ ತಂಡ ಇದಾಗಿದೆ. 
*2.ಇಂಡಿಯ ನಗಾರಿ ತಂಡ:* ನಗಾರಿ ತಂಡ ಇಬ್ಬರು ಸದಸ್ಯರು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ಇಬ್ಬರು ಕಲಾವಿದರು ನಗಾರಿ ಬಾರಿಸಲಿದ್ದಾರೆ. 
*3.ಸಾರವಾಡದ ಗೊಂಬೆ ಕುಣಿತ ತಂಡ:* 19 ಜನರ ಈ ತಂಡ ಕೂಡ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗದರ್ಶನದಲ್ಲಿ ಈ ಗೊಂಬೆ ಕುಣಿತ ನಡೆಯಲಿದೆ.
*4.ಸಚಿನ ಭಜಂತ್ರಿ ಬ್ಯಾಂಜೋ ವಾದ್ಯ:* ಎಂಟು ಜನ ಬ್ಯಾಂಜೋ ಕಲಾವಿದರು ವೃಕ್ಷೊಥಾನ್ ಮ್ಯಾರಾಥಾನ್ ಓಟಗಾರರು ಸಾಗುವ ಕಾಮತ ಹೊಟೇಲ್ ಬಳಿ ಬ್ಯಾಂಜೋ ನುಡಿಸಲಿದ್ದಾರೆ.
*5.ಹುಲಿ ಕುಣಿತ ಮತ್ತು ವಾದ್ಯ ಮೇಳ:* ನಗರದ ಗೋಲಗುಂಬಜ ಮುಂಭಾಗದಲ್ಲಿ ಮಹಾನಗರ ಪಾಲಿಕೆ ಸದಸ್ಯ ದಿನೇಶ ಹಳ್ಳಿ ಅವರ ಮಾರ್ಗದರ್ಶನದಲ್ಲಿ ಹುಲಿ ಕುಣಿತ ಮತ್ತು ವಾದ್ಯ ಮೇಳ ತಂಡದ ಕಲಾವಿದರು ಓಟಗಾರರಿಗೆ ಸ್ಪೂರ್ತಿ ತುಂಬಲಿದ್ದಾರೆ.
*6.ಡೊಳ್ಳು ಕುಣಿತ:* ನಗರದ ಬಸವೇಶ್ವರ ಚೌಕಿನ ಬಳಿ ಸ್ಪೂರ್ತಿ ಫೌಂಡೇಶನ್ ನ ಅರುಣ ಹುಂಡೆಕಾರ ಅವರು 12 ಜನ ಡೊಳ್ಳು ಕುಣಿತ ತಂಡದವರನ್ನು ಕರೆಯಿಸಿ ಡೊಳ್ಳು ಬಾರಿಸುವ ಮೂಲಕ ಕ್ರೀಡಾಪಟುಗಳಿಗೆ ಓಡಲು ಉತ್ತೇಜನ ನೀಡಲಿದ್ದಾರೆ.
*7.ಮುಂಬೈ ಮಹಿಳಾ ತಂಡದಿಂದ ಚಿಯರ್ ಅಪ್ ನೃತ್ಯ:* ಗಾಂಧಿ ಚೌಕಿನಲ್ಲಿ ಮುಂಬೈನ ಖ್ಯಾತ ಮಹಿಳಾ ಕಲಾ ತಂಡದ ಆರು ಜನರ ತಂಡ ಓಟಗಾರರಿಗೆ ಚಿಯರ್ ಅಪ್ ಮಾಡುವ ನೃತ್ಯ ಮಾಡಲಿದ್ದಾರೆ.
*8.ವಿಶೇಷ ಹಲಗಿ ವಾದ್ಯ:* ಶಿವಾಜಿ ಚೌಕ್ ನಲ್ಲಿ ಓಟಗಾರನ್ನು ಹುರುದುಂಬಿಸಲು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಉಮೇಶ ವಂದಾಲ ಮತ್ತು ತಂಡದವರು ವಿಶೇಷ ಹಲಗಿ ವಾದ್ಯ ನುಡಿಸುವ ಮೂಲಕ ಮೆರಗು ನೀಡಲಿದ್ದಾರೆ.
*9.ವಿಶೇಷ ಕಲಾ ತಂಡಗಳಿಂದ ವಾದ್ಯ ಮತ್ತು ನೃತ್ಯ:* ನಗರದ ವಾಟರ್ ಟ್ಯಾಂಕ್ ಬಳಿ ಎಪಿ ಗ್ರುಪ್ ವತಿಯಿಂದ ಓಟಗಾರರಿಗೆ ಚಿಯರ್ ಅಪ್ ಮಾಡಲು ವಿಶೇಷ ಕಲಾ ತಂಡಗಳಿಂದ ವಾದ್ಯ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ.
*10.ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ:* ನಗರದ ಸೈನಿಕ ಶಾಲೆಯಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳು ಓಟಗಾರರನ್ನು ಪ್ರೋತ್ಸಾಹಿಸಲು ವಿಶೇಷ ನೃತ್ಯ ಮಾಡಲಿದ್ದಾರೆ.
*11.ಬ್ಯಾಂಜೋ ವಾದ್ಯ:* ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಕಾಲೇಜಿನ ಮುಖ್ಯದ್ವಾರದ ಬಳಿ ಲಕ್ಷ್ಮಣ ಭಜಂತ್ರಿ ಸೇರಿದಂತೆ 10 ಮತ್ತು ತಂಡದವರಿಂದ ಬ್ಯಾಂಜೋ ವಾದ್ಯ ನುಡಿಸುವ ವ್ಯವಸ್ಥೆ ಮಾಡಲಾಗಿದೆ.
*12.ಕಾಲೇಜು ವಿದ್ಯಾರ್ಥಿಗಳಿಂದ ಪ್ರೋತ್ಸಾಹಿಕ ನೃತ್ಯ:* ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಕಾಲೇಜಿನ ಕ್ಯಾಂಪಸ್ ನಲ್ಲಿ ನಾನಾ ಕಾಲೇಜಿನ ವಿದ್ಯಾರ್ಥಿಗಳು ಓಟಗಾರರಿಗೆ ಪ್ರೋತ್ಸಾಹಿಸಲು ವಿಶೇಷ ನೃತ್ಯ ಮಾಡುತ್ತಿದ್ದಾರೆ.
*13.ಕನಾಳ ಕಲಾ ತಂಡದಿಂದ ಡೊಳ್ಳು ಕುಣಿತ:* ಕನಾಳ ಗ್ರಾಮದ 12 ಜನರ ಡೊಳ್ಳು ಕುಣಿತ ತಂಡ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಬಳಿ ಡೊಳ್ಳು ಕುಣಿತ ಕಲೆಯನ್ನು ಪ್ರದರ್ಶಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
*14.ವಚನ ಗಾಯನ:* ನಗರದ ಜ್ಞಾನಯೋಗಾಶ್ರಮದಲ್ಲಿ ಮ್ಯಾರಾಥಾನ್ ಓಟಗಾರರನ್ನು ಪ್ರೋತ್ಸಾಹಿಸಲು ವಚನ ಗಾಯನ ನಡೆಯಲಿದೆ.
*15.ಹಲಗಿ ವಾದ್ಯ:* ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಬಳಿ ಭೂತನಾಳದ ಅಶೋಕ ವಾಲಿಕಾರ ತಂಡದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಲಗಿ ವಾದ್ಯ ನಡೆಯಲಿದೆ.
*16.ಜುಂಬಾ ಡ್ಯಾನ್ಸ್:* ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ರೀಟಾ ಕನಮಡಿ ಮತ್ತು ಸಾವಿತ್ರಿ ಡವಳೇಶ್ವರ ತಂಡದಿಂದ ಓಟಗಾರರಿಗೆ ಮತ್ತು ಸಾರ್ವಜನಿಕರಿಗೆ ಚಿಯರ್ ಅಪ್ ಮಾಡಲು ಜುಂಬಾ ಡ್ಯಾನ್ಸ್ ನಡೆಯಲಿದೆ.
ಅಲ್ಲದೇ, ಈ ಕಾರ್ಯಕ್ರಮ ನಡೆಯುವ ಮೂರೂವರೆ ಗಂಟೆಗಳ ಕಾಲ ವಿಜಯಪುರ ನಗರದಲ್ಲಿ ನಾನಾ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನ ನಡೆಸಲು ಹಾಗೂ ಜನರಲ್ಲಿ ಸಾಂಸ್ಕೃತಿಕ ಕಲೆಗಳನ್ನು ಉಣಬಡಿಸಲು ಸಮಿತಿಯ ವೃಕ್ಷೊಥಾನ್ ಹೆರಿಟೇಜ್ ರನ್-2023 ಸಮಿತಿಯ ಸಾಂಸ್ಕೃತಿಕ ವಿಭಾಗದ ಸದಸ್ಯರಾದ ಅಮೀತ ಬಿರಾದಾರ, ಡಾ. ಪ್ರವೀಣ ಚೌರ್, ಮುತ್ತಣ್ಣ ಬಿರಾದಾರ, ರಾಮ ಅಂಕಲಗಿ, ಅನೀಲ ಧಾರವಾಡಕರ, ಶ್ರೀಕಾಂತ ಮಂತ್ರಿ ಹಾಗೂ ಸಿದ್ದು ನಾಯ್ಕೋಡಿ ನಿರತರಾಗಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026
    In ದಿನಪತ್ರಿಕೆ
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.