ವಿಜಯಪುರ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಉನ್ನತ ಸಾಧನೆ ಮಾಡಬಲ್ಲರು ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ನಗರದ ಪ್ರತಿಷ್ಟಿತ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ರವಿವಾರ ನಡೆದ ಸಂಶೋಧನಾತ್ಮಕ ವಿಜ್ಞಾನ ಮಾದರಿಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಚಾರ್ಯೆ ಬಂಧನಾ ಬ್ಯಾನರ್ಜಿ, ಪ್ರತಿಯೊಂದು ತರಗತಿಗಳ ಎಲ್ಲ ಮಕ್ಕಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಅಗಾಧ ಪ್ರತಿಭೆ ಇರುತ್ತವೆ. ಇಲ್ಲಿನ ವಿದ್ಯಾರ್ಥಿಗಳು ಇಲ್ಲಿ ಪ್ರದರ್ಶಿಸಿರುವ ವಿಜ್ಞಾನ ಮಾದರಿಗಳು ಇದಕ್ಕೆ ಸಾಕ್ಷಿ ಎಂದು ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿದರು. ಮನೋಭಾವನೆಯನ್ನು, ಸಂಶೋಧನಾ ಪ್ರವೃತ್ತಿಯನ್ನು, ಕಲಾತ್ಮಕತೆಯನ್ನು ಮನದುಂಬಿ ಹೊಗಳಿದರು.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳಾದ, ಹಿಮಾಚ್ಫಾದಿತ ಇಗ್ಲೂ ಮನೆಗಳು, ಅಂಧರಿಗಾಗಿ ತಯಾರಿಸಿದ ಮೂರನೇ ಕಣ್ಣು ಕನ್ನಡಕ, ಚಂದ್ರಯಾನ ಉಪಗ್ರಹ ಉಡಾವಣೆಯ ಮಾದರಿ, ಬೃಹದಾಕಾರದ ಚಿಟ್ಟೆ, ಗುಲಾಬಿ ಉದ್ಯಾನ ಮುಂತಾದ ಮಾಡಲ್ ಗಳು ಪಾಲಕರ ಗಮನ ಸೆಳೆದವು. ಶಾಲೆಯ ನಾನಾ ಸದನಗಳ ವಿಧ್ಯಾರ್ಥಿಗಳು ಹಾಕಿದ ರಂಗೋಲಿ, ಫಲ, ಪುಷ್ಪಾಲಂಕಾರ ನೋಡುಗರ ಮನ ಸೆಳೆದವು. ಇಡಿ ಶಾಲೆಯಲ್ಲಿ ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಸಾಕ್ಷಿಯಾಗಿದ್ದವು.
ಶಾಲೆಯ ಹೊರ ಮೈದಾನದಲ್ಲಿ ಮಕ್ಕಳು ತಮ್ಮ ಪಾಲಕರಿಗಾಗಿ ಮತ್ತು ಮಕ್ಕಳಿಗಾಗಿ ನಾನಾ ಬಗೆಯ ಬುದ್ಧಿಮತ್ತೆಯ ಚಮತ್ಕಾರಿ ಆಟಗಳನ್ನು ಏರ್ಪಡಿಸಿ ಎಲ್ಲರನ್ನು ರಂಜಿಸಿದರು. ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಉಚಿತ ಫುಡ್ ಕೂಪನ್ ವಿತರಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಕೌಶಿಕ ಬ್ಯಾನರ್ಜಿ ಮತ್ತು ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

