ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಕಳೆದ ಎರಡು ತಿಂಗಳಿಂದ ವ್ಯವಸ್ಥಾಪಕರು ಮತ್ತು ಫೀಲ್ಡ್ ಆಫೀಸರ ಹುದ್ದೆ ಖಾಲಿ ಇರುವುದರಿಂದಾಗಿ ವಾಯ್ದೆ ಮುಗಿದಿರುವ ರೈತರು ಸಾಲ ತುಂಬಲು ಗ್ರಾಹಕರು ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ವಿಜಯಪುರ ಮುಖ್ಶ ಕಛೇರಿಯ ಪ್ರಾದೇಶಿಕ ವ್ಶವಸ್ಥಾಪಕರ ಗಮನಕ್ಕೆ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಇದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ.
ಆದ್ದರಿಂದ ರೈತರು ತಾವು ಪಡೆದ ಸಾಲ ತುಂಬಲು ತೊಂದರೆಯಿಂದಾಗಿ ಹೆಚ್ಚಿನ ಬಡ್ಡಿ ಆಕರಣೆ ಆಕರವಾದಲ್ಲಿ ಯಾರು ಜವಾಬ್ದಾರರು? ಎನ್ನುವುದಕ್ಕೆ ಸಂಬಂಧಿಸಿದವರು ಉತ್ತರ ಕೊಡಬೇಕು. ಗ್ರಾಹಕರಿಗೆ ಆಗುವಂತ ತೊಂದರೆಗೆ ಹೊಣೆ ಯಾರು? ಅತಿ ಶೀಘ್ರದಲ್ಲಿ ಖಾಲಿ ಇರುವ ಈ ಎರಡು ಹುದ್ದೆಗಳಿಗೆ ಸಿಬ್ಬಂದಿ ನಿಯೋಜನೆಗೊಳಿಸದೇ ಇದ್ದಲ್ಲಿ ಬ್ಯಾಂಕ್ ಗ್ರಾಹಕರು, ರೈತಪರ ಹೋರಾಟಗಾರರು ಬ್ಯಾಂಕ್ ಮುಂದೆ ಧರಣಿ ಮಾಡುವುದಾಗಿ ಭೂ ನ್ಶಾಯಮಂಡಳಿ ಸದಸ್ಶ ಮುದಿಗೌಡ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

