ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಸರಕಾರಿ ಗುಡ್ಡಗಳ ಸರ್ವೆ ನಂ-೫೧ ಹಾಗೂ ೮೯ ಇವುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗೆರೆಯ ಕೆಳಗಿರುವ ವ್ಯಕ್ತಿಗಳ ಹೆಸರುಗಳನ್ನು ಕೈಬಿಡುವಂತೆ ಮತ್ತು ಕೆಲ ರೈತರ ಜಮೀನುಗಳಿಗೆ ರಸ್ತೆ ಮಾಡಿಕೊಡುವ ಬೇಡಿಕೆಗಳನ್ನು ಮುಂದಿಟ್ಟು ನಾಗರಬೆಟ್ಟ ಗ್ರಾಮದ ರೈತರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ಈ ವೇಳೆ ತಾಲೂಕು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್.ಸಿದರೆಡ್ಡಿ ಮಾತನಾಡಿ, ನಮ್ಮ ಗ್ರಾಮದ ಎರಡೂ ಗುಡ್ಡಗಳ ಸಮಸ್ಯೆಯನ್ನು ಬಗೆಹರೆಸುವಂತೆ ಈಗಾಗಲೇ ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಮತ್ತು ಸಮಸ್ಯೆ ಬಗೆಹರೆಯದಿದ್ದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಈ ಮೊದಲೇ ತಿಳಿಸಿದ್ದರೂ ನಮ್ಮ ಸಮಸ್ಯೆ ಬಗೆಹರೆದಿಲ್ಲ. ಹಾಗಾಗಿ ಧರಣಿ ಆರಂಭಿಸಿದ್ದೇವೆ. ಅಧಿಕಾರಿಗಳು ಕೇವಲ ಜನ ಪ್ರತಿನಿಧಿಗಳ ಮಾತನ್ನು ಕೇಳುತ್ತಾರೆ. ರೈತರ ಕಷ್ಟಕ್ಕೆ ಸ್ಪಂದಿಸುವದಿಲ್ಲ ಎಂಬುದು ಮತ್ತೊಮ್ಮೆ ಖಚಿತವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಬಸರಕೋಡ ಗ್ರಾಮದಲ್ಲಿ ಇಂಥದ್ದೇ ಸಮಸ್ಯೆ ಇದ್ದ ಜುಮೀನೊಂದನ್ನ ಜನಪ್ರತಿನಿಧಿಯ ಆಜ್ಞೆಯಂತೆ ಬದಲಾಯಿಸಿದ್ದಾರೆ. ಆದರೆ ನಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಇದು ಸಧ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದೆ. ಇಲ್ಲಿ ಹಣ ಅಧಿಕಾರ ಇರುವವರ ಮಾತುಗಳನ್ನು ಮಾತ್ರ ಅಧಿಕಾರಿಗಳು ಕೇಳುತ್ತಾರೆ ವಿನಃ ರೈತರ ಕಷ್ಟಕ್ಕೆ ಸ್ಪಂದಿಸಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಹೋರಾಟದಲ್ಲಿ ಗ್ಯಾನಪ್ಪ ರಕ್ಕಸಗಿ, ಶರಣಪ್ಪ ದಡ್ಡಿ, ಪರಮಪ್ಪ ಗುರಿಕಾರ, ಶಾಂತಗೌಡ ಸಿದರೆಡ್ಡಿ, ಹಣಮಂತ ಜಾಲಿಬೆಂಚಿ, ನಿಂಗಪ್ಪ ಹುರಿಕಾರ, ಬಸಪ್ಪ ಟಕ್ಕಳಕಿ, ನಿಂಗಪ್ಪ ರಕ್ಕಸಗಿ, ಕೆ.ಬಿ.ಮುರಾಳ, ಮಾಂತಯ್ಯ ಮಠ, ಶಂಕರಗೌಡ ಸಿದರೆಡ್ಡಿ, ಜುಮ್ಮಣ್ಣ ಟಕ್ಕಳಕಿ, ನಾನಾಗೌಡ ಸಿದರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

