ಚಡಚಣ: ವಿದ್ಯಾರ್ಥಿಗಳು ಅಪರಾಧ ಪ್ರಕರಣಗಳಲ್ಲಿ ತೊಡಗದೆ ಕಲಿಕೆ ಕೇಂದ್ರವಾಗಿಸಿಕೊಳ್ಳಬೇಕು. ಅಪರಾಧ ಕೃತ್ಯಗಳಲ್ಲಿ ಶಾಮೀಲಾದರೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ ಎಂದು ಪಟ್ಟಣದ ಜನ ಸ್ನೇಹಿ ಪೊಲೀಸ್ ಠಾಣೆಯ ಪಿಎಸ್ಐ ಸಂಜೀವ ಕಲ್ಲೂರ ಎಚ್ಚರಿಸಿದರು.
ಮಂಗಳವಾರ ಪಟ್ಟಣದ ಎಮ್ ಇ ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಪರಾಧ ತಡೆ ಮಾಸಾಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಎಮ್ ಇಎಸ್ ಶಾಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಿ ಸಿ ಗಚ್ಚಿನಕಟ್ಟಿ ಮಾತನಾಡಿ, ಮಕ್ಕಳು ಕಾನೂನಿನಡಿ ಯಾವುದೇ ತಪ್ಪು ಮಾಡಿದರೆ ಅದು ಅಪರಾಧವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ತಪ್ಪು ಎಸಗುವ ಮುನ್ನ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಆಕಾಶ ಭೂಸನೂರ, ಹಿರೇಮಠ ಸರ್. ಮಾಳಿ ಸರ್, ಬೋಧಕ ವರ್ಗ ಮತ್ತು ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಅಪರಾಧ ಕೃತ್ಯಕ್ಕೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ :ಪಿಎಸೈ ಕಲ್ಲೂರ
Related Posts
Add A Comment

