Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ತಿರುಳು :ರಂಭಾಪುರಿ ಶ್ರೀ
(ರಾಜ್ಯ ) ಜಿಲ್ಲೆ

ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ತಿರುಳು :ರಂಭಾಪುರಿ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ದೇವರಹಿಪ್ಪರಗಿ: ಧರ್ಮಗಳು, ಆಚರಣೆಗಳು ಬೇರೆ ಬೇರೆ ಆಗಿರಬಹುದು ಆದರೆ ಎಲ್ಲ ಧರ್ಮಗಳ ತಿರುಳು ಮಾನವ ಕಲ್ಯಾಣವಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ್ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಭದ್ರೇಶ್ವರರ ೧೧ನೇ ವರ್ಷದ ಕಾರ್ತಿಕ ದೀಪೋತ್ಸವದ ಅಂಗವಾಗಿ ಸೋಮವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ವಕಾಲದಲ್ಲಿ, ಸರ್ವ ಸಮುದಾಯಗಳಿಗೆ ಬೆಳಕು ನೀಡುವುದು ಯಾವುದಾದರೂ ಇದ್ದರೆ ಅದುವೇ ಧರ್ಮ. ನಾವು ನುಡಿದಂತೆ ನಡೆಯುವುದೇ ಧರ್ಮ. ನುಡಿಯುವುದು ಒಂದು, ನಡೆಯುವುದು ಇನ್ನೊಂದು ಆದಾಗ ಸಮಾಜದ ಎಲ್ಲ ರಂಗಗಳಲ್ಲಿ ಅವ್ಯವಸ್ಥೆ, ಅರಾಜಕತೆ, ಅತೃಪ್ತಿಯ ಮನೋಭಾವ ಕಂಡು ಬರುತ್ತದೆ. ಧರ್ಮ ಎನ್ನುವುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಪಕ್ಷಿಗೆ ರೆಕ್ಕೆ, ಕುರುಡನಿಗೆ ಕಣ್ಣು ಇದ್ದ ಹಾಗೇ, ಅಂತೆಯೇ ಭೂಮಿತಾಯಿ, ಗಾಳಿ, ನೀರುಗಳಿಗೆ ಒಂದು ಧರ್ಮ ಹಾಗೂ ಜವಾಬ್ದಾರಿಯಿದೆ. ಒಂದು ವೇಳೆ ಜವಾಬ್ದಾರಿ ಮರೆತು ಭೂಮಿ ಮೈಗೊಡವಿದರೆ, ಗಾಳಿ ಬಿರುಗಾಳಿಯಾದರೆ, ನೀರು ಪ್ರವಾಹವಾದರೆ ನಮ್ಮ ಸ್ಥಿತಿ ಏನಾಗಬಹುದು? ಆದ್ದರಿಂದ ನಮ್ಮ ಧರ್ಮ, ಜವಾಬ್ದಾರಿ ಅರಿತು ನಡೆಯಬೇಕು ಎಂದು ಹೇಳುತ್ತಾ, ಪ್ರತಿಯೊಬ್ಬರಿಗೆ ಶಾಸ್ತ್ರದ ಅರಿವಿರಬೇಕು. ಇಲ್ಲವೇ ಶಸ್ತçದ ಭಯವಿರಬೇಕು. ಬಸವಣ್ಣ, ಮಹಾತ್ಮಾಗಾಂಧಿ, ಶರಣ ಬಸವೇಶ್ವರ, ಕಡಕೋಳ ಮಡಿವಾಳಪ್ಪ ಅವರ ಜೀವನದಲ್ಲಿ ಗುರು ಯಾವ ರೀತಿಯಾದ ಪರಿಣಾಮ ಉಂಟು ಮಾಡಿದ್ದರು ಎನ್ನುವುದನ್ನು ವಿವರಿಸಿದರು.
ಶ್ರಮ, ದುಡಿಮೆ, ಕೃಷಿ, ಆರೋಗ್ಯದ ನಡುವಿನ ಪರಸ್ಪರ ಸಂಬಂಧದ ಕುರಿತು ದೀರ್ಘವಾಗಿ ಮಾತನಾಡಿ, ಜಗತ್ತಿನ ಸಂಪತ್ತು ವಿಕಾಸಕ್ಕಾಗಿ ಇದೆ ವಿನಹ ವಿನಾಶಕ್ಕಾಗಿ ಅಲ್ಲ ಎಂದರು.
ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಧರ್ಮಸಭೆ ಉದ್ಘಾಟಿಸಿ ಮಾತನಾಡುತ್ತಾ, ಗುರುವಿನ ಆಶೀರ್ವಾದಿಂದ ನಾವು ಏನನ್ನಾದರೂ ಪಡೆಯಬಹುದು ಎನ್ನುವುದಕ್ಕೆ ನಾನೇ ಉತ್ತಮ ಉದಾಹರಣೆ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್. ಮಾತನಾಡಿದರು.
ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀ, ಸದಯ್ಯನಮಠದ ವೀರಗಂಗಾಧರಶ್ರೀ, ಬಸವನಬಾಗೇವಾಡಿಯ ಶಿವಪ್ರಕಾಶಶ್ರೀ, ಜಡೇಮಠದ ಜಡೆಸಿದ್ದೇಶ್ವರಶ್ರೀ, ಪರದೇಶಿಮಠಶ್ರೀಗಳು ಆಶೀರ್ವಚನ ನೀಡಿದರು.
ಕಾರ್ತಿಕೋತ್ಸವ ಸೇವಾ ಸಮೀತಿಯ ಅಧ್ಯಕ್ಷ ಸಿ.ಕೆ.ಕುದರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೇವಾ ಸಮೀತಿಯ ಸದಸ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಮಹಾಪ್ರಸಾದ ಜರುಗಿತು.
ಸಗರದ ಮರುಳ ಮಹಾಂತಶ್ರೀಗಳು, ಕೊಕಟನೂರಿನ ಮಡಿವಾಳೇಶ್ವರ ಸ್ವಾಮೀಜಿ, ಚಿಮ್ಮಲಗಿಯ ಸಿದ್ಧರೇಣುಕ ಶ್ರೀಗಳು, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ) ಶಂಕರಗೌಡ ಕೋಟಿಖಾನಿ, ಮಲ್ಲಿಕಾರ್ಜುನ ಗವಾಯಿ, ತಬಲಾ ವಾದಕ ಭೀಮಣ್ಣ ಸಣ್ಣೂರ, ಬಾಳಾಸಾಹೇಬಗೌಡ ಪಾಟೀಲ, ಬಾಳಯ್ಯ ಇಂಡಿಮಠ, ಸಿದ್ದು ಆನಂದಿ, ವಿನೋದ ನಾಶೀಮಠ, ಪಿ.ಜಿ.ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ಉಮಾಕಾಂತ ಸೊನ್ನದ, ಬಾಬುಗೌಡ ಪಾಟೀಲ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026
    In ದಿನಪತ್ರಿಕೆ
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.